Flipkart – Amazon: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೊಸ ಮೇಳ: ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಆಫರ್

ಅಮೆಜಾನ್‌ ಮೊಬೈಲ್‌ ಮತ್ತು ಟಿವಿ ಸೇವಿಂಗ್ಸ್‌ ಡೇಸ್‌ ಸೇಲ್‌ ಪ್ರಾರಂಭಿಸಿದೆ. ಇತ್ತ ಫ್ಲಿಪ್‌ಕಾರ್ಟ್​ನಲ್ಲಿ ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಮೊಬೈಲ್‌ ಬೊನಾನ್ಜಾ ಸೇಲ್‌ ನಡೆಸುತ್ತಿದೆ. ಈ ಸೇಲ್​ನಲ್ಲಿ ಮೊಬೈಲ್‌ ಮತ್ತು ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ.

Flipkart - Amazon: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೊಸ ಮೇಳ: ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಆಫರ್
Flipkart
Follow us
TV9 Web
| Updated By: Vinay Bhat

Updated on: Feb 14, 2022 | 2:58 PM

ಪ್ರಸಿದ್ಧ ಇ-ಕಾಮರ್ಸ್‌ ತಾಣವಾದ ಅಮೆಜಾನ್‌ (Amazon) ಮತ್ತು ಫ್ಲಿಪ್​ಕಾರ್ಟ್ (Flipkart) ಆನ್‌ಲೈನ್‌ ಗ್ರಾಹಕರ ನೆಚ್ಚಿನ ತಾಣ ಎನಿಸಿಕೊಂಡಿದ್ದು, ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ಗಳನ್ನು ನಡೆಸುತ್ತಾ ಬಂದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಗ್ಯಾಜೆಟ್ಸ್‌ಗಳ ಮೇಲೆ ಆಫರ್‌ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್‌ ಮೊಬೈಲ್‌ ಮತ್ತು ಟಿವಿ ಸೇವಿಂಗ್ಸ್‌ ಡೇಸ್‌ ಸೇಲ್‌ ಪ್ರಾರಂಭಿಸಿದೆ. ಇತ್ತ ಫ್ಲಿಪ್‌ಕಾರ್ಟ್​ನಲ್ಲಿ ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಮೊಬೈಲ್‌ ಬೊನಾನ್ಜಾ ಸೇಲ್‌ ನಡೆಸುತ್ತಿದೆ. ಈ ಸೇಲ್​ನಲ್ಲಿ ಮೊಬೈಲ್‌ ಮತ್ತು ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ. ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಶವೋಮಿ, ರಿಯಲ್‌ ಮಿ, ಒಪ್ಪೋ ಮತ್ತು ಟೆಕ್ನೋ ಸೇರಿದಂತೆ ಜನಪ್ರಿಯ ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳ ಮೇಲೆ ವಿಶೇಷ ರಿಯಾಯಿತಿ ದೊರೆಯುತ್ತಿದೆ. ಸ್ಮಾರ್ಟ್‌ಟಿವಿಗಳ ಮೇಲೆ ಗ್ರಾಹಕರು 40% ತನಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್ ಸೇಲ್‌ನಲ್ಲಿ ರೆಡ್ಮಿ ನೋಟ್‌ 11T 5G 19,999 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಮಿ 11X ಫೋನ್‌ 25,999 ರೂ. ಗೆ ಮಾರಾಟ ಆಗುತ್ತಿದೆ. ಈ ಫೋನ್‌ ಮೇಲೆ 6,000 ರೂ. ಗಳ ತನಕ ಡಿಸ್ಕೌಂಟ್‌ ಸಿಗುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 3,000 ರೂ. ರಿಯಾಯಿತಿ ಲಭ್ಯವಾಗಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಫೋನ್‌ ಆಫರ್‌ನಲ್ಲಿ ಕೇವಲ 22,999 ರೂ.ಗಳಿಗೆ ದೊರೆಯಲಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ 20,999ರೂ.ಗಳಿಗೆ ಲಭ್ಯವಾಗಲಿದೆ. ಐಕ್ಯೂ Z5 ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 21,990 ರೂ.ಗಳಿಗೆ ಖರೀದಿಸಬಹುದು. ಐಕ್ಯೂ 7 ಸ್ಮಾರ್ಟ್‌ಫೋನ್‌ ಬೆಲೆ 27,990 ರೂ ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಬ್ಯಾಂಕ್‌ ಆಫರ್‌ ಮತ್ತು ಅಮೆಜಾನ್‌ ವೋಚರ್‌ ಮೂಲಕ 2,000.ರೂ ಕ್ಯಾಶ್‌ಬ್ಯಾಕ್‌ ನೀಡಲಿವೆ.

ಇನ್ನು ಅಮೆಜಾನ್​ನಲ್ಲಿ ಒಪ್ಪೋ A15s ಸ್ಮಾರ್ಟ್‌ಫೋನ್‌ 10,641 ರೂ.ಬೆಲೆಗೆ ಲಭ್ಯವಾಗಲಿದೆ. ಹಾಗೆಯೇ ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಬೆಲೆ 10,349 ರೂ. ಆಗಿದೆ. ಟೆಕ್ನೋ ಪಾಪ್‌ 5 LTE ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ 6,699ರೂ.ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಜೊತೆಗೆ ಟೆಕ್ನೋ ಕಂಪೆನಿಯಿಂದ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಫೆಡರಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 10% ರಿಯಾಯಿತಿಯನ್ನು ಒಳಗೊಂಡಿವೆ.

ಇತ್ತ ಪೊಕೊ C3 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 3 GB RAM ಮತ್ತು 32GB ರೂಪಾಂತರದ ಲೈಮ್‌ಗ್ರೀನ್‌ ಆಯ್ಕೆಗೆ 15% ಡಿಸ್ಕೌಂಟ್‌ ಪಡೆದಿದೆ. ಇದರ ಮೂಲಬೆಲೆ 9,999 ರೂ. ಆಗಿದ್ದು, ಡಿಸ್ಕೌಂಟ್‌ನಲ್ಲಿ 8,499 ರೂ. ಬೆಲೆಗೆ ಲಭ್ಯವಾಗಲಿದೆ. ಪೊಕೊ M2 ಪ್ರೊ 6GB RAM ಮತ್ತು 64GB ಆಯ್ಕೆಗೆ 16% ಡಿಸ್ಕೌಂಟ್‌ ಪಡೆದಿದೆ. ಇದರ M.R.P ಬೆಲೆ 17,999ರೂ.ಆಗಿದ್ದು, ಡಿಸ್ಕೌಂಟ್‌ನಲ್ಲಿ 14,999ರೂ ಬೆಲೆಗೆ ಲಭ್ಯವಾಗಲಿದೆ. ಪೊಕೊ C31 ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಆಯ್ಕೆಗೆ 27% ರಿಯಾಯಿತಿ ಪಡೆದುಕೊಂಡಿದೆ. ಇದರ ಮೂಲ ಬೆಲೆ 10,999ರೂ.ಆಗಿದ್ದು ಡಿಸ್ಕೌಂಟ್‌ನಲ್ಲಿ 7,999ರೂ ಬೆಲೆಗೆ ಲಭ್ಯವಾಗಲಿದೆ. ಪೊಕೊ M3 ಪ್ರೊ 5G ಸ್ಮಾರ್ಟ್‌ಫೋನ್‌ 4 GB RAM ಮತ್ತು 64 GB ಆಯ್ಕೆಗೆ 15% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರ ಮೂಲ ಬೆಲೆ 15,999ರೂ.ಆಗಿದ್ದು, ರಿಯಾಯಿತಿ ದರದಲ್ಲಿ 13,499ರೂ.ಬೆಲೆಗೆ ಖರೀದಿಸಬಹುದಾಗಿದೆ.

Infinix Zero 5G: ವ್ಯಾಲಂಟೈನ್ಸ್ ಡೇಯಂದು ರಿಲೀಸ್ ಆಗಿದೆ ಈ ವಿಶೇಷ ಸ್ಮಾರ್ಟ್​ಫೋನ್​: ಬೆಲೆ ಕೇವಲ …

WhatsApp: ಫೇಸ್​ಬುಕ್​ನಲ್ಲಿರುವ ಅಚ್ಚರಿಯ ಫೀಚರ್ ಈಗ ವಾಟ್ಸ್ಆ್ಯಪ್​ನಲ್ಲಿ: ದಂಗಾದ ಬಳಕೆದಾರರು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ