ಜನಪ್ರಿಯ ಶಾಂಪಿಂಗ್ ಸೈಟ್ ಫ್ಲಿಪ್ ಕಾರ್ಟ್ನಲ್ಲಿ ಸ್ಮಾರ್ಟ್ ಫೋನ್ ಕಾರ್ನಿವಲ್ ಸೇಲ್ (flipkart smartphone carnival sale) ನಡೆಯುತ್ತಿದ್ದು, ಹಲವು ಫೋನ್ಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಇಲ್ಲಿ ನೀಡಲಾಗಿರುವ ಆಫರ್ಗಳ ಅಡಿಯಲ್ಲಿ ಸ್ಯಾಮ್‌ಸಂಗ್, ರಿಯಲ್‌ಮಿ, ಮೊಟೊರೊಲಾ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಅದರಲ್ಲು ರಿಯಲ್‌ಮಿ ಸಿ 20 ಅನ್ನು (realme c20) ಅಗ್ಗದಲ್ಲಿ ದರದಲ್ಲಿ ಖರೀದಿಸುವ ಅವಕಾಶ ಗ್ರಾಹಕರ ಮುಂದಿದೆ. ಫ್ಲಿಪ್‌ಕಾರ್ಟ್ ಮಾಹಿತಿಯ ಪ್ರಕಾರ, ಫೋನ್ ಅನ್ನು ಕೇವಲ ರೂ .7,499 ಕ್ಕೆ ಲಭ್ಯವಿದ್ದು, ಸೆಪ್ಟೆಂಬರ್ 8 ರೊಳಗೆ ಈ ಮೊತ್ತದಲ್ಲಿ ಖರೀದಿಸಬಹುದಾಗಿದೆ. ಹಾಗಿದ್ರೆ ರಿಯಲ್‌ಮಿ ಸಿ 20 ವೈಶಿಷ್ಟ್ಯಗಳೇನು ನೋಡೋಣ.
ಡಿಸ್ಪ್ಲೇ: ರಿಯಲ್‌ಮಿ C20 ಸ್ಮಾರ್ಟ್ಫೋನ್ನಲ್ಲಿ 6.5-ಇಂಚಿನ HD + IPS ಡಿಸ್ಪ್ಲೇಯನ್ನು ನೀಡಲಾಗಿದ್ದು, ಇದು 720 × 1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.
ಪ್ರೊಸೆಸರ್: ಈ ಫೋನ್ ಮೀಡಿಯಾ ಟೆಕ್ ಹೆಲಿಯೋ ಜಿ 35 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ ರಿಯಲ್‌ಮಿ ಯುಐ ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಸ್ಟೊರೇಜ್: ಈ ಫೋನ್ ಫೋನ್ 2 GB RAM ಮತ್ತು 32 GB ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಹಾಗೆಯೇ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ ಸ್ಟೊರೇಜ್ ಅನ್ನು 256 ಜಿಬಿಗೆ ವಿಸ್ತರಿಸಬಹುದು.
ಕ್ಯಾಮೆರಾ: ಈ ಫೋನಿನ ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಷ್ ಹೊಂದಿರುವ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇನ್ನು ನೈಟ್ ಮೋಡ್, ಪನೋರಮಿಕ್ ವ್ಯೂ, ಟೈಮ್ ಲ್ಯಾಪ್ಸ್, ಪೋರ್ಟ್ರೇಟ್ ಮೋಡ್ ನಂತಹ ವೈಶಿಷ್ಟ್ಯಗಳನ್ನು ಕ್ಯಾಮೆರಾದಲ್ಲಿ ನೀಡಲಾಗಿದೆ.
ಬ್ಯಾಟರಿ: ರಿಯಲ್‌ಮಿ ಸಿ20ಯಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದಲ್ಲದೆ 4G LTE, Wi-Fi 802.11 b/g/n, ಬ್ಲೂಟೂತ್ ಆವೃತ್ತಿ 5.0, GPS ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ.
ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್
ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(flipkart smartphone carnival sale realme c20 price under 7 thousand rs)