ಉಚಿತ OTT, ಅನಿಯಮಿತ 5G ಡೇಟಾ: ಇದು ಏರ್‌ಟೆಲ್​ನ ಬಂಪರ್ ಪ್ಲಾನ್

Airtel Best Prepaid Plans: ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನ ಸಂಪಾದಿಸಿರುವ ಭಾರ್ತಿ ಏರ್​ಟೆಲ್ ತನ್ನ ಬಳಕೆದಾರರಿಗಾಗಿ ನೂತನ ಯೋಜನೆಗಳನ್ನು ತರುತ್ತಿದೆ. ಇದರಲ್ಲಿ ಅನಿಯಮಿತ ಡೇಟಾ, ದೀರ್ಘ ಕಾಲದ ವ್ಯಾಲಿಡಿಟಿ ಸೇರಿದಂತೆ ಓಟಿಟಿ ಪ್ರಯೋಜನವನ್ನು ಕೂಡ ನೀಡುತ್ತಿದೆ. ನೀವು ದೀರ್ಘ ವ್ಯಾಲಿಡಿಟಿ ಹೊಂದಿರುವ ಯೋಜನೆಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಏರ್​ಟೆಲ್​ನ ಬೆಸ್ಟ್ ಪ್ಲಾನ್.

ಉಚಿತ OTT, ಅನಿಯಮಿತ 5G ಡೇಟಾ: ಇದು ಏರ್‌ಟೆಲ್​ನ ಬಂಪರ್ ಪ್ಲಾನ್
Airtel Prepaid Plans
Follow us
Vinay Bhat
|

Updated on: Feb 12, 2024 | 12:53 PM

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲಾನ್​ಗಳನ್ನು ಲಾಂಚ್ ಮಾಡುತ್ತಿದೆ. ಪ್ರಮುಖ ಕಂಪನಿಗಳಾದ ಜಿಯೋ, ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ ಒಂದರ ಹಿಂದೆ ಒಂದರಂತೆ ಆಕರ್ಷಕ ಯೋಜನೆಗಳನ್ನು ತರುತ್ತಿದೆ. ಏರ್‌ಟೆಲ್ ಮತ್ತು ಜಿಯೋ ಈಗಾಗಲೇ ದೇಶಾದ್ಯಂತ 5G ಸೇವೆಗಳನ್ನು ಆರಂಭಿಸಿವೆ. ಬಳಕೆದಾರರಿಗೆ ಅನಿಯಮಿತ ಡೇಟಾ ಸಂಪರ್ಕವನ್ನು ನೀಡುತ್ತಿದೆ. ವಿ ಕೂಡ ಹೊಸ ಸೇವೆಗಳನ್ನು ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತಿದೆ. ಈಗ ಹೆಚ್ಚಿನ ಜನರು ದೀರ್ಘ ವ್ಯಾಲಿಡಿಟಿ ಹೊಂದಿರುವ ಯೋಜನೆಗಳನ್ನು ಬಯಸುತ್ತಾರೆ. ಈ ಕ್ರಮದಲ್ಲಿ, ಏರ್‌ಟೆಲ್ 84 ದಿನಗಳ ಮಾನ್ಯತೆಯೊಂದಿಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಿದೆ. ಆ ಯೋಜನೆಗಳ ವಿವರಗಳು ಇಲ್ಲಿದೆ.

ಏರ್‌ಟೆಲ್ ರೂ. 455:

ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ದೀರ್ಘಾವಧಿಯ ಯೋಜನೆಗಳಲ್ಲಿ ಅಗ್ಗವಾದ ಪ್ಲಾನ್ ಆಗಿದೆ. 6GB ವೇಗದ ಡೇಟಾವನ್ನು ನೀಡುತ್ತದೆ. ಅನಿಯಮಿತ ಕರೆಗಳು, 900 ಉಚಿತ SMS ಹೊರತುಪಡಿಸಿ, ಅಪೊಲೊ 24/7 ಸರ್ಕಲ್, ಉಚಿತ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್‌ನಂತಹ ಹೆಚ್ಚುವರಿ ಪ್ರಯೋಜನಗಳಿಂದ ಕೂಡಿದೆ.

ವಾಟ್ಸ್​ಆ್ಯಪ್​ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ

ಏರ್‌ಟೆಲ್ ರೂ. 719:

ಈ ಯೋಜನೆಯು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ದಿನಕ್ಕೆ 1.5GB ವೇಗದ ಡೇಟಾವನ್ನು ಒದಗಿಸುತ್ತದೆ. ಈ ಪ್ರಯೋಜನಗಳಲ್ಲಿ ಅನಿಯಮಿತ ಕರೆಗಳು, ಅನಿಯಮಿತ 5G ಡೇಟಾ, ಅಪೊಲೊ 24/7 ಸರ್ಕಲ್, ಉಚಿತ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಸೇರಿವೆ. ದಿನಕ್ಕೆ 100 SMS ಉಚಿತವಾಗಿ.

ಏರ್‌ಟೆಲ್ ರೂ. 869:

ಈ ಪ್ಯಾಕ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ದಿನಕ್ಕೆ 2GB ಹೈಸ್ಪೀಡ್ ಡೇಟಾವನ್ನು ಒದಗಿಸುತ್ತದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, ಅನಿಯಮಿತ 5G ಡೇಟಾ, 15+ OTT ಅಪ್ಲಿಕೇಶನ್‌ಗಳು, ಏರ್​ಟೆಲ್ ಎಕ್ಸ್ಟ್ರೀಮ್, ಪ್ಲೇ, ರಿವಾರ್ಡ್ ಮಿನಿ ಚಂದಾದಾರಿಕೆ, Apollo 24/7 ಸರ್ಕಲ್, ಉಚಿತ ಹಲೋ ಟ್ಯೂನ್ಸ್, ವಿಂಗ್ ಮ್ಯೂಸಿಕ್ ಮತ್ತು ಡಿಸ್ನಿ+ ಹಾಟ್​ಸ್ಟಾರ್ 3 ತಿಂಗಳ ಚಂದಾದಾರಿಕೆಯೂ ಲಭ್ಯವಿದೆ. ಅಲ್ಲದೆ ನೀವು ಪ್ರತಿದಿನ 100 SMS ಅನ್ನು ಉಚಿತವಾಗಿ ಪಡೆಯಬಹುದು.

ನಿಮ್ಮ ಇನ್​ಸ್ಟಾಗ್ರಾಮ್ ಖಾತೆಯನ್ನು ಬೇರೆಯವರು ಬಳಸುತ್ತಿದ್ದಾರಾ?: ಈ ಟ್ರಿಕ್ ಮೂಲಕ ಕಂಡುಹಿಡಿಯಿರಿ

ಏರ್‌ಟೆಲ್ ರೂ. 999:

ಇದು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ದಿನಕ್ಕೆ 2.5GB ಹೈ-ಸ್ಪೀಡ್ ದೈನಂದಿನ ಡೇಟಾವನ್ನು ಒದಗಿಸುತ್ತದೆ. ಇದು ಅನಿಯಮಿತ ಕರೆಗಳು, ಅನಿಯಮಿತ 5G ಡೇಟಾ, 15+ OTT ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡುತ್ತಿದೆ. ಇದರಲ್ಲಿ ಏರ್​ಟೆಲ್ ಎಕ್ಸ್ಟ್ರೀಮ್, ಪ್ಲೇ, ರಿವಾರ್ಡ್ ಮಿನಿ ಚಂದಾದಾರಿಕೆ, Apollo 24/7 ಸರ್ಕಲ್, ಉಚಿತ ಹಲೋ ಟ್ಯೂನ್ಸ್, ವಿಂಗ್ ಮ್ಯೂಸಿಕ್ ಮುಂತಾದ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ಯಾಕ್ 84 ದಿನಗಳವರೆಗೆ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಯನ್ನು ಕೂಡ ನೀಡುತ್ತದೆ. ಪ್ರತಿದಿನ 100 ಎಸ್​ಎಮ್​ಎಸ್ ಉಚಿತವಿದೆ.

ಏರ್‌ಟೆಲ್ ರೂ. 1499:

ಈ ಪ್ಯಾಕ್ 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ದಿನಕ್ಕೆ 3GB ಹೈ-ಸ್ಪೀಡ್ ಡೇಟಾ ನೀಡಲಾಗಿದೆ. ಇದು ಅನಿಯಮಿತ ಕರೆಗಳು, ಅನಿಯಮಿತ 5G ಡೇಟಾ, 15+ OTT ಅಪ್ಲಿಕೇಶನ್‌ಗಳು, ಏರ್​ಟೆಲ್ ಎಕ್ಸ್ಟ್ರೀಮ್, ಪ್ಲೇ, ರಿವಾರ್ಡ್ ಮಿನಿ ಚಂದಾದಾರಿಕೆ, Apollo 24/7 ಸರ್ಕಲ್, ಉಚಿತ ಹಲೋ ಟ್ಯೂನ್ಸ್, ವಿಂಗ್ ಮ್ಯೂಸಿಕ್ ಮುಂತಾದ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ಯಾಕ್ 84 ದಿನಗಳವರೆಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡುತ್ತದೆ. ಗ್ರಾಹಕರು ದಿನಕ್ಕೆ 100 SMS ಸಹ ಪಡೆಯುತ್ತಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್