ಜಗತ್ತಿನಾದ್ಯಂತ ಹೆಚ್ಚು ವ್ಯಾಪಕವಾಗಿ ಬಳಸುವ ವೆಬ್ ಬ್ರೌಸರ್‌ಗಳಲ್ಲಿ (Web browser) ಗೂಗಲ್ ಕ್ರೋಮ್ (Chrome) ಕೂಡ ಒಂದು. ವಿಶ್ವದ ಪ್ರಮುಖ ಇಂಟರ್ನೆಟ್ ಬ್ರೌಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರೋಮ್ ಬಗ್ಗೆ ಇದೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅಟ್ಲಾಸ್ VPN ಮಾಡಿರುವ ವರದಿಯ ಪ್ರಕಾರ, 2022 ರಲ್ಲಿ 303 ದುರ್ಬಲತೆಗಳು ಮತ್ತು ಒಟ್ಟಾರೆಯಾಗಿ 3,159 ದುರ್ಬಲತೆಗಳು ಕಂಡಿಬಂದಿರುವ ಗೂಗಲ್ ಕ್ರೋಮ್ ಅತ್ಯಂತ ದುರ್ಬಲ ಬ್ರೌಸರ್ ಆಗಿದೆ ಎಂದು ಹೇಳಿದೆ. ಜನವರಿ 1, 2022 ರಿಂದ ಅಕ್ಟೋಬರ್ 5, 2022 ರವರೆಗೆ VulDB ದುರ್ಬಲತೆಯ ಡೇಟಾಬೇಸ್‌ನಿಂದ ಈ ಅಂಕಿಅಂಶಗಳನ್ನು ಆಧರಿಸಲಾಗಿದೆ ಎಂದು ಅಟ್ಲಾಸ್ VPN ಹೇಳಿದೆ.
ವರದಿಯ ಪ್ರಕಾರ, ಅಕ್ಟೋಬರ್‌ನಲ್ಲಿ ಐದು ದಿನಗಳ ಒಳಗೆ ಹೊಸ ದೋಷಗಳು ಕಂಡುಬಂದ ಏಕೈಕ ಬ್ರೌಸರ್ ಗೂಗಲ್ ಕ್ರೋಮ್ ಆಗಿದೆ. ಈ ವರ್ಷದಲ್ಲಿಯೇ ಕ್ರೋಮ್ ಆರು ಬಾರಿ ಝೀರೋ ಡೇ ವಲ್ನರೇಬಿಲಿಟಿ ಕೊರತೆ ಅನುಭವಿಸಿದೆ. ಆಗಸ್ಟ್ 30 ರಂದು ಗೂಗಲ್ ಕ್ರೋಮ್ನ 105ನೇ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಅಪ್ಡೇಟ್ ಪರಚಯಿಸಿತ್ತು. ಇದೀಗ ಬಳಕೆದಾರರು ಗೂಗಲ್ ಕ್ರೋಮ್ ಆವೃತ್ತಿ 106.0.5249.61 ಗೆ ಅಪ್ಡೇಟ್ ಮಾಡುವ ಮೂಲಕ ತೊಂದರೆಗಳನ್ನು ಸರಿಪಡಿಸಬಹುದು. ವರದಿಯ ಪ್ರಕಾರ, ಮೊಜಿಲ್ಲಾದ ಫೈರ್‌ಫಾಕ್ಸ್ ಬ್ರೌಸರ್ 117 ದೋಷಗಳನ್ನು ಹೊಂದಿರುವ ಎರಡನೇ ಸ್ಥಾನದಲ್ಲಿದೆ.
ಅಂತೆಯೆ ಮೈಕ್ರೋಸಾಫ್ಟ್ ಎಡ್ಜ್ ಅಕ್ಟೋಬರ್ 5 ರ ಹೊತ್ತಿಗೆ 103 ದುರ್ಬಲತೆಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಇದು 2021 ರ ಸಂಪೂರ್ಣ ವರ್ಷಕ್ಕಿಂತ 61% ಹೆಚ್ಚು ಎಂದು ಹೇಳಬಹುದು. ಒಟ್ಟಾರೆಯಾಗಿ, ಮೈಕ್ರೋಸಾಫ್ಟ್ ಎಡ್ಜ್ ಬಿಡುಗಡೆಯಾದಾಗಿನಿಂದ ಈವರೆಗೆ ಒಟ್ಟು 806 ದುರ್ಬಲತೆಗಳನ್ನು ಹೊಂದಿದೆ. ಇನ್ನು ಸಫಾರಿ ಬ್ರೌಸರ್ ಇತರರಿಗೆ ಹೋಲಿಸಿದರೆ ಕಡಿಮೆ ಮಟ್ಟದ ದುರ್ಬಲತೆಗಳನ್ನು ಹೊಂದಿದೆ. 2022 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 26 ದುರ್ಬಲತೆ ಕಂಡುಬಂದಿದೆ. ಮೇ 2022 ರ ಹೊತ್ತಿಗೆ, ಸಫಾರಿ ಒಂದು ಬಿಲಿಯನ್ ಬಳಕೆದಾರರಿಗೆ ಸಾಕ್ಷಿಯಾಗಿದೆ. ಆ್ಯಪಲ್ ಕಂಪನಿ ತನ್ನ ಬ್ರೌಸರ್ ಬಗ್ಗೆ ಹೆಚ್ಚು ಸುರಕ್ಷಿತವಾಗಿದೆ. ಅಚ್ಚರಿ ಎಂದರೆ, Opera ಬ್ರೌಸರ್ 2022 ರಲ್ಲಿ ಇಲ್ಲಿಯವರೆಗೆ ಯಾವುದೇ ದೋಷಗಳು ಕಂಡುಬಂದಿಲ್ಲ.
ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವುದು ಹೇಗೆ?:
Published On - 1:26 pm, Sat, 8 October 22