ವಿಶ್ವದಾದ್ಯಂತ ಗೂಗಲ್, ಜಿಮೇಲ್, ಗೂಗಲ್ ಮ್ಯಾಪ್, ಯೂಟ್ಯೂಬ್ ಸೇವೆ ಡೌನ್

ಕ್ರೌಡ್-ಸೋರ್ಸ್ಡ್ ಔಟ್ಟೇಜ್ ಡಿಟೆಕ್ಷನ್ ಪ್ಲಾಟ್‌ಫಾರ್ಮ್ DownDetector ಪ್ರಕಾರ, ಇಂದು ಸಂಜೆ 6:00 ಗಂಟೆಯಿಂದ ಜಿಮೇಲ್, ಸರ್ಚ್ , ಮ್ಯಾಪ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಗೂಗಲ್ ಸೇವೆಗಳನ್ನು ಬಳಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೆಬ್‌ಸೈಟ್ ಬಳಕೆದಾರರಿಂದ ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.

ವಿಶ್ವದಾದ್ಯಂತ ಗೂಗಲ್, ಜಿಮೇಲ್, ಗೂಗಲ್ ಮ್ಯಾಪ್, ಯೂಟ್ಯೂಬ್ ಸೇವೆ ಡೌನ್
ಗೂಗಲ್
Follow us
|

Updated on:May 31, 2024 | 7:53 PM

ದೆಹಲಿ ಮೇ 31:   ಪ್ರಪಂಚದಾದ್ಯಂತ ಗೂಗಲ್ ಸೇವೆಗಳು (Google) ಸ್ಥಗಿತಗೊಂಡಿರುವಂತೆ ತೋರುತ್ತಿದೆ. ಗೂಗಲ್ ಸರ್ಚ್ , ಗೂಗಲ್ ಮ್ಯಾಪ್ , ಯೂಟ್ಯೂಬ್ , ಗೂಗಲ್ ನ್ಯೂಸ್, ಜಿಮೇಲ್ ಮತ್ತು ಒಳಗೊಂಡಂತೆ ಗೂಗಲ್ ಸೇವೆಗಳನ್ನು ಪ್ರವೇಶಿಸುವಾಗ ಬಳಕೆದಾರರು ಸಮಸ್ಯೆಗಳನ್ನು (Google down) ಎದುರಿಸುತ್ತಿದ್ದಾರೆ ಎಂದು ವರದಿ ಆಗಿದೆ.  ಕ್ರೌಡ್-ಸೋರ್ಸ್ಡ್ ಔಟ್ಟೇಜ್ ಡಿಟೆಕ್ಷನ್ ಪ್ಲಾಟ್‌ಫಾರ್ಮ್ ಡೌನ್ ಡಿಟೆಕ್ಟರ್ (DownDetector) ಪ್ರಕಾರ, ಇಂದು ಸಂಜೆ 6:00 ಗಂಟೆಯಿಂದ ಜಿಮೇಲ್, ಸರ್ಚ್ , ಮ್ಯಾಪ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಗೂಗಲ್ ಸೇವೆಗಳನ್ನು ಬಳಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೆಬ್‌ಸೈಟ್ ಬಳಕೆದಾರರಿಂದ ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.

ಸುಮಾರು 66% ಜನರು ಗೂಗಲ್ ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರೆ 21% ಜನರು ಹುಡುಕಾಟದಲ್ಲಿ ಸಮಸ್ಯೆಯಾಗಿದೆ ಎಂದಿದ್ದಾರೆ.ಉಳಿದ 3% ಅವರು ಡೌನ್‌ಡೆಕ್ಟರ್ ವೆಬ್‌ಸೈಟ್‌ನಲ್ಲಿ ಮ್ಯಾಪ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಎಕ್ಸ್ ಮತ್ತು ಇನ್​​ಸ್ಟಾಗ್ರಾಮ್​​ನಂತಹ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಬಳಕೆದಾರರು ಪ್ರಮುಖ Google ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗದಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ.

X ನಲ್ಲಿ ಒಬ್ಬ ಬಳಕೆದಾರರೊಬ್ಬರು Google News ಮತ್ತು ಡಿಸ್ಕವರ್ ಡೌನ್ ಆಗಿರುವುದನ್ನು ಯಾರಾದರೂ ಗಮನಿಸಿದ್ದೀರಾ ಎಂದು  ಬರೆದಿದ್ದಾರೆ.

ಡೌನ್‌ಡೆಟೆಕ್ಟರ್‌ನಲ್ಲಿ ಥಾಮಸ್ ವಿಲ್ಕಿನ್ಸ್ ಎಂಬ  ಬಳಕೆದಾರರು ತಮ್ಮ ಫೋನ್‌ನಲ್ಲಿ ಗೂಗಲ್ ಹುಡುಕಾಟವನ್ನು ಪ್ರವೇಶಿಸಲು ತೊಂದರೆಯನ್ನು ಎದುರಿಸುತ್ತಿರುವುದಾಗಿ ಬರೆದಿದ್ದಾರೆ., “ಎಲ್ಲಾ ವೆಬ್‌ಸೈಟ್‌ಗಳು ನನ್ನ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತಿದೆ ಆದರೆ ಗೂಗಲ್ ಹುಡುಕಾಟವು ಸ್ಥಗಿತಗೊಂಡಿದೆ. ಗೂಗಲ್ ಸರ್ಚ್ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ವಿಚಿತ್ರವಾಗಿದೆ. ಏನಾಗುತ್ತಿದೆ ಎಂದು ಯಾರಿಗಾದರೂ ತಿಳಿದಿದೆಯೇ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಯುಎಸ್​ಬಿ ಟೈಪ್ ಎ ಮತ್ತು ಸಿ ಮಧ್ಯೆ ಏನು ವ್ಯತ್ಯಾಸ? ವಿವಿಧ ಯುಎಸ್​ಬಿ ಮತ್ತು ಕೇಬಲ್​ಗಳನ್ನು ತಿಳಿಯಿರಿ

“ಗೂಗಲ್ ನ್ಯೂಸ್ ಕಂಟೆಂಟ್ ಲೋಡ್ ಮಾಡುತ್ತಿಲ್ಲ .ಆದರೂ ಪೇಜ್ ಲೋಡ್ ಆಗುತ್ತದೆ ಎಂದು  ಡೌನ್‌ಡೆಕ್ಟರ್‌ನಲ್ಲಿ ‘ಡೇನಿಯಲ್ರವೆನೆಸ್ಟ್’ ಹೆಸರಿನ ಬಳಕೆದಾರರು ಬರೆದಿದ್ದಾರೆ.

ಮತ್ತಷ್ಟು ಟೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Fri, 31 May 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್