AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭರ್ಜರಿ ಡಿಮ್ಯಾಂಡ್: ಅತಿ ಹೆಚ್ಚು ಸೇಲ್ ಆಗುತ್ತಿರುವ ಯೂಸುಡ್ ಕಾರು ಯಾವುದು ಗೊತ್ತೇ?

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. ನೀವು ಕೂಡ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಕೆಲವು ವಿಶೇಷ ವಿಷಯಗಳನ್ನು ಅನುಸರಿಸಬೇಕು. ಯೂಸುಡ್ ಕಾರು ಕೊಳ್ಳುವಾಗ ಕೇವಲ ಪೇಂಟ್ ಬಗ್ಗೆ ಮಾತ್ರ ಗಮನ ಹರಿಸದೆ ಇದನ್ನು ಕೂಡ ನೋಡಿ.

ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭರ್ಜರಿ ಡಿಮ್ಯಾಂಡ್: ಅತಿ ಹೆಚ್ಚು ಸೇಲ್ ಆಗುತ್ತಿರುವ ಯೂಸುಡ್ ಕಾರು ಯಾವುದು ಗೊತ್ತೇ?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Sep 27, 2024 | 4:07 PM

Share

ದೇಶದಲ್ಲಿ ಕಾರು ಮಾರುಕಟ್ಟೆ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಈಗ ಬಳಸಿದ ಅಂದರೆ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಣ್ಣ ನಗರಗಳಲ್ಲಿ ಮಾತ್ರವಲ್ಲದೆ ದೊಡ್ಡ ಸಿಟಿಯಲ್ಲೂ ಬೇಡಿಕೆ ಹೆಚ್ಚುತ್ತಿದೆ. ಈಗಿನ ಸೆಕೆಂಡ್ ಹ್ಯಾಂಡ್ ಕಾರುಗಳು ಪ್ರಮಾಣೀಕರಿಸಲ್ಪಟ್ಟಿವೆ ಮತ್ತು 100 ಪ್ರತಿಶತದಷ್ಟು ಸಾಲ, ವ್ಯಾರಂಟಿ ಮತ್ತು ಸರ್ವಿಸ್ನಂತಹ ಸೌಲಭ್ಯಗಳು ಲಭ್ಯವಿರುವ ಕಾರಣ ಇದಕ್ಕೆ ಹೆಚ್ಚಿನ ಡಿಮ್ಯಾಂಡ್ ಇದೆ. ಹಾಗಾದರೆ, ಸದ್ಯ ಮಾರುಕಟ್ಟೆಯಲ್ಲಿ ಯಾವ ಯೂಸುಡ್ ಕಾರು ಭರ್ಜರಿ ಸೇಲ್ ಆಗುತ್ತಿದೆ?, ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಎಷ್ಟು ಬೆಳೆದು ನಿಂತಿದೆ ಎಂಬುದನ್ನು ನೋಡೋಣ.

ಮೊರ್ಡೋರ್ ಇಂಟೆಲಿಜೆನ್ಸ್ ವರದಿಯ ಪ್ರಕಾರ ಮತ್ತು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಬಳಸಿದ ಕಾರುಗಳ ಮಾರುಕಟ್ಟೆ ಗಾತ್ರವು ಬರೋಬ್ಬರಿ ಸುಮಾರು 2.64 ಲಕ್ಷ ಕೋಟಿ ರೂಪಾಯಿಗಳಷ್ಟಿದೆ, ಇದು ಮುಂಬರುವ ವರ್ಷಗಳಲ್ಲಿ ಶೇಕಡಾ 16 ರ ದರದಲ್ಲಿ ಏರಿಕೆಯಾಗಬಹುದು. ಅಂದರೆ 5.34 ಲಕ್ಷ ಕೋಟಿಗೆ ಏರಿಕೆಯಾಗಲಿದೆ.

ಬಳಸಿದ ಕಾರುಗಳ ಪೈಕಿ ಈ ಕಂಪನಿಯು ಮೊದಲ ಆಯ್ಕೆಯಾಗಿದೆ:

ಬಳಸಿದ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ, ಮಾರುತಿ ಮತ್ತು ರೆನಾಲ್ಡ್ಸ್ ಕಾರುಗಳು ಭರ್ಜರಿ ಸೇಲ್ ಆಗುತ್ತಿವೆ. ಈ ಎಲ್ಲಾ ಮಾದರಿಗಳು ಹ್ಯಾಚ್‌ಬ್ಯಾಕ್ ಕಾರುಗಳಾಗಿವೆ. ಬಳಕೆದಾರರು ಹ್ಯುಂಡೈನ ಗ್ರಾಂಡ್ ಐ10 ಮತ್ತು ಮಾರುತಿಯ ಸ್ವಿಫ್ಟ್, ಬಲೆನೊ, ರೆನಾಲ್ಡ್ಸ್ ಅವರ ಕ್ವಿಡ್ ಕಾರನ್ನು ಖರೀದಿಸಲು ಇಷ್ಟಪಡುತ್ತಾರೆ.

ಹಾಗೆಯೆ ಬಳಸಿದ ಕಾರುಗಳ ಬೇಡಿಕೆಯ ಹೆಚ್ಚಳದಿಂದಾಗಿ ಹೊಸ ಕಾರುಗಳ ಮಾರಾಟವು ನಿಧಾನಗೊಂಡಿದೆ ಎಂದು ವರದಿ ಹೇಳಿದೆ. ಆಗ್ರಾ, ಕೊಯಮತ್ತೂರು, ನಾಗ್ಪುರ, ವಡೋದರಾ ಮುಂತಾದ ನಗರಗಳಲ್ಲಿ ಉಪಯೋಗಿಸಿದ ಕಾರುಗಳ ಮಾರಾಟವು ಕಾರ್ಸ್ 24 ರ ವರದಿಯ ಪ್ರಕಾರ, ಮೊದಲಿಗಿಂತ ಶೇ.25ರಷ್ಟು ಹೆಚ್ಚಿಗಿದೆಯಂತೆ.

ಇದನ್ನೂ ಓದಿ: ನೀವು ಮನೆಯಲ್ಲಿ ಫ್ರಿಡ್ಜ್ ಅನ್ನು ಎಲ್ಲಿ ಇಟ್ಟಿದ್ದೀರಿ?: ಈ ಜಾಗದಲ್ಲಿದ್ದರೆ ತಕ್ಷಣವೇ ಸ್ಥಳ ಬದಲಾಯಿಸಿ

ಬಳಸಿದ ಕಾರನ್ನು ಖರೀದಿಸುವಾಗ ಇದನ್ನು ನೆನಪಿನಲ್ಲಿಡಿ

ಕಾರಿನ ದಾಖಲೆಗಳು ಮತ್ತು ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮೊದಲು, ಮೊದಲು ಆ ಕಾರಿನ ದಾಖಲೆಗಳನ್ನು ಪರಿಶೀಲಿಸಿ. ಚಾಸಿಸ್ ಮತ್ತು ಎಂಜಿನ್ ನಂಬರ್ಗಳು ಹೊಂದಾಣಿಕೆಯಾಗುತ್ತವೆಯೇ ಎಂದು ಪರಿಶೀಲಿಸಿ. ನೀವು ವಿಮಾ ದಾಖಲೆಗಳನ್ನು ಸಹ ಪರಿಶೀಲಿಸಬೇಕು. ಸಾಧ್ಯವಾದರೆ, ಕಾರಿನ ಫಿಲ್ಟರ್‌ಗಳು ಇತ್ಯಾದಿಗಳನ್ನು ಸಹ ನೋಡಿ.

ಕಾರಿನ ಬಣ್ಣವನ್ನು ಮಾತ್ರವಲ್ಲದೆ ಎಂಜಿನ್ ಅನ್ನು ಸಹ ಪರಿಶೀಲಿಸಿ: ಕಾರಿನ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಅದರ ಬಣ್ಣ(ಪೈಂಟ್ ಆಗಿರುವ ಕಾರೇ?) ಮತ್ತು ಸ್ಥಿತಿಯನ್ನು ಮಾತ್ರ ನೋಡಬೇಡಿ, ಆದರೆ ಕಾರಿನ ಎಂಜಿನ್ ಇತ್ಯಾದಿಗಳನ್ನು ಪರಿಶೀಲಿಸಿ. ಕಾರಿನ ಎಂಜಿನ್ ಅನ್ನು ನೋಡುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಮೆಕ್ಯಾನಿಕ್ ಸಹಾಯವನ್ನು ತೆಗೆದುಕೊಳ್ಳಬಹುದು.

ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮೊದಲು, ಅದು ಹಳೆಯ ಕಾರು ಮತ್ತು ಅದರ ಎಂಜಿನ್‌ನಲ್ಲಿ ಸಮಸ್ಯೆಗಳಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಕೆಲವು ಕಿಲೋಮೀಟರ್ಗಳಷ್ಟು ಚಾಲನೆ ಮಾಡುವ ಮೂಲಕ ಕಾರನ್ನು ಪರೀಕ್ಷಿಸುವುದು ಮುಖ್ಯವಾಗಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ