ನೀವು ಮನೆಯಲ್ಲಿ ಫ್ರಿಡ್ಜ್ ಅನ್ನು ಎಲ್ಲಿ ಇಟ್ಟಿದ್ದೀರಿ?: ಈ ಜಾಗದಲ್ಲಿದ್ದರೆ ತಕ್ಷಣವೇ ಸ್ಥಳ ಬದಲಾಯಿಸಿ
ಫ್ರಿಡ್ಜ್ ಅಥವಾ ರೆಫ್ರಿಜರೇಟರ್ ಇಂದು ಎಲ್ಲರ ಮನೆಯಲ್ಲೂ ಇವೆ. ಆದರೆ, ಕೆಲವರು ಇದನ್ನು ಸರಿಯಾದ ಜಾಗದಲ್ಲಿ ಇರಿಸಿರುವುದಿಲ್ಲ. ಎಲ್ಲಿ ಜಾಗ ಇದೆಯೊ ಅಲ್ಲಿ ಫಿಕ್ಸ್ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮುಂದೆ ದೊಡ್ಡ ಅಪಾಯಕ್ಕೆ ನೀವೇ ದಾರಿ ಮಾಡಿ ಕೊಟ್ಟಂತಾಗುತ್ತದೆ. ಹಾಗಾದರೆ, ಫ್ರಿಡ್ಜ್ ಇಡಲು ಸೂಕ್ತ ಸ್ಥಳ ಯಾವುದು?.
ರೆಫ್ರಿಜರೇಟರ್ ಬಹಳ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತಾಗಿದ್ದು ಇಂದು ಹೆಚ್ಚಿನ ಮನೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರವನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಇದನ್ನು ಬಳಸಲಾಗುತ್ತದೆ. ಹಣ್ಣುಗಳು, ತರಕಾರಿಗಳು, ಹಾಲು, ಮೊಸರು ಮುಂತಾದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಹಾಳಾಗದಂತೆ ರಕ್ಷಿಸಲು ಇದರೊಳಗೆ ಇಡಲಾಗುತ್ತದೆ. ಹಾಗೆಯೆ ರೆಫ್ರಿಜರೇಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ತಪ್ಪಾದ ಸ್ಥಳದಲ್ಲಿ ಇಟ್ಟರೆ ಅದು ಸ್ಫೋಟಗೊಳ್ಳುವ ಅಪಾಯವಿದೆ.
ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬಾರದು?
ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇಡಬಾರದು. ಗಾಳಿ ಇಲ್ಲದ ಕೋಣೆಯಲ್ಲಿ ಇಡಬಾರದು. ಹಾಗೆಯೆ ಸಾಕಷ್ಟು ವಿದ್ಯುತ್ ವೈರಿಂಗ್ ಇರುವ ಕೋಣೆಯಲ್ಲಿ ರೆಫ್ರಿಜರೇಟರ್ ಅನ್ನು ಇಡುವುದು ಸೂಕ್ತವಲ್ಲ. ಅಲ್ಲದೆ, ರೆಫ್ರಿಜರೇಟರ್ ಅನ್ನು ಸಣ್ಣ ಮತ್ತು ಪ್ಯಾಕ್ ಮಾಡಿದ ಕೋಣೆಯಲ್ಲಿ ಇಡುವುದು ತುಂಬಾ ಅಪಾಯಕಾರಿ. ಇಂತಹ ಕೊಠಡಿಗಳಲ್ಲಿ ರೆಫ್ರಿಜರೇಟರ್ ಇಡುವುದು ಸರಿಯಲ್ಲ, ಇದಕ್ಕೆ ಹಲವು ಕಾರಣಗಳಿವೆ.
ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಏಕೆ ಇಡಬಾರದು?
ಶಾಖ – ಫ್ರಿಜ್ ಅನ್ನು ತಂಪಾಗಿರಿಸಲು ನಿರಂತರ ವಿದ್ಯುತ್ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ರೆಫ್ರಿಜರೇಟರ್ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ. ಮುಚ್ಚಿದ ಕೋಣೆಯಲ್ಲಿ ಫ್ರಿಡ್ಜ್ ಇರಿಸಿದರೆ, ಕೋಣೆಯ ಉಷ್ಣತೆಯು ಹೆಚ್ಚಾಗಬಹುದು, ಇದು ವಿದ್ಯುತ್ ಬಳಕೆಯನ್ನು ಕೂಡ ಹೆಚ್ಚಿಸುತ್ತದೆ.
ಕಂಪನ – ಫ್ರಿಡ್ಜ್ ಒಳಗೆ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿರುತ್ತದೆ ಮತ್ತು ಇದು ಕಂಪನವನ್ನು ಉಂಟುಮಾಡುತ್ತದೆ. ಹೀಗಿರುವಾಗ ಇದನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಈ ಕಂಪನವು ಸುತ್ತಮುತ್ತಲಿನ ವಸ್ತುಗಳ ಮೇಲೆ ಪರಿಣಾಮ ಬೀಳುತ್ತದೆ, ಸಾಕಷ್ಟು ಶಬ್ದವನ್ನು ಸಹ ಉಂಟುಮಾಡಬಹುದು.
ತೇವಾಂಶ – ರೆಫ್ರಿಜರೇಟರ್ ಒಳಗೆ ತೇವಾಂಶವಿದೆ. ಇದನ್ನು ತುಂಬಿರುವ ಕೋಣೆಯಲ್ಲಿ ಇರಿಸಿದರೆ, ಈ ತೇವಾಂಶವು ಕೋಣೆಯಲ್ಲಿ ಹರಡಿ ಗೋಡೆಗಳ ಮೇಲೆ ಕಲೆ ಮೂಡುತ್ತದೆ.
ಅಪಾಯ – ರೆಫ್ರಿಜರೇಟರ್‌ನಲ್ಲಿ ವಿದ್ಯುತ್ ತಂತಿಗಳಿದ್ದು, ಅವು ಹಾನಿಗೊಳಗಾದರೆ ಶಾರ್ಟ್ ಸರ್ಕ್ಯೂಟ್ ಅಪಾಯವಿದೆ. ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಬೆಂಕಿಯ ಅಪಾಯವೂ ಹೆಚ್ಚಾಗಬಹುದು.
ಗಾಳಿಯ ಹರಿವು – ಫ್ರಿಜ್ ಅನ್ನು ತಂಪಾಗಿರಿಸಲು ಗಾಳಿಯ ಹರಿವು ಅಗತ್ಯ. ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಗಾಳಿಯ ಹರಿವಿಗೆ ಅಡಚಣೆಯಾಗಬಹುದು, ಇದರಿಂದಾಗಿ ರೆಫ್ರಿಜರೇಟರ್ ಹಾನಿಗೊಳಗಾಗಬಹುದು.
ಇದನ್ನೂ ಓದಿ: ಫೇಕ್ ಮೊಬೈಲ್ ಚಾರ್ಜರ್ ಕಂಡುಹಿಡಿಯಲು ಬಂದಿದೆ ಹೊಸ ಸರ್ಕಾರಿ ಆ್ಯಪ್: ಕೂಡಲೇ ನಿಮ್ಮ ಚಾರ್ಜರ್ ಚೆಕ್ ಮಾಡಿ
ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬೇಕು?
ರೆಫ್ರಿಜರೇಟರ್ ಅನ್ನು ಯಾವಾಗಲೂ ಅಡುಗೆಮನೆಯಲ್ಲಿ ಅಥವಾ ಉತ್ತಮ ಗಾಳಿಯ ಹರಿವು ಇರುವ ಯಾವುದೇ ಕೋಣೆಯಲ್ಲಿ ಇರಿಸಬೇಕು. ಗೋಡೆಯಿಂದ ಸ್ವಲ್ಪ ದೂರದಲ್ಲಿ ಇರಿಸಿದರೆ ಉತ್ತಮ, ಇದರಿಂದ ಗಾಳಿಯು ಸುಲಭವಾಗಿ ಫ್ರಿಜ್ ಒಳಗೆ ಮತ್ತು ಹೊರಗೆ ಹೋಗಬಹುದು. ಇದು ಫ್ರಿಜ್‌ನ ಜೀವಿತಾವಧಿ ಮತ್ತು ಸಾಮರ್ಥ್ಯ ಎರಡನ್ನೂ ಹೆಚ್ಚಿಸುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ