ಫೇಕ್ ಮೊಬೈಲ್ ಚಾರ್ಜರ್ ಕಂಡುಹಿಡಿಯಲು ಬಂದಿದೆ ಹೊಸ ಸರ್ಕಾರಿ ಆ್ಯಪ್: ಕೂಡಲೇ ನಿಮ್ಮ ಚಾರ್ಜರ್ ಚೆಕ್ ಮಾಡಿ

ಇಂದು ಎಲ್ಲ ಸ್ಮಾರ್ಟ್​​ಫೋನ್​ಗಳ ಚಾರ್ಜರ್ ಟೈಪ್-ಸಿ ಆಗಿರುವುದರಿಂದ ಇದು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ, ಇದರಲ್ಲಿ ಅದೆಷ್ಟೊ ನಕಲಿ ಚಾರ್ಜರ್ಗಳು ಇರುತ್ತವೆ. ಬಳಕೆದಾರರು ಅದನ್ನು ಉಪಯೋಗಿಸಿ ಮೋಸ ಹೋಗುತ್ತಾರೆ. ಇದೀಗ ಇದನ್ನು ತಿಳಿಯಲು ಸರ್ಕಾರ ಆ್ಯಪ್ ಬಿಡುಗಡೆ ಮಾಡಿದೆ.

ಫೇಕ್ ಮೊಬೈಲ್ ಚಾರ್ಜರ್ ಕಂಡುಹಿಡಿಯಲು ಬಂದಿದೆ ಹೊಸ ಸರ್ಕಾರಿ ಆ್ಯಪ್: ಕೂಡಲೇ ನಿಮ್ಮ ಚಾರ್ಜರ್ ಚೆಕ್ ಮಾಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2024 | 12:28 PM

ಸ್ಮಾರ್ಟ್​​ಫೋನ್ ಅನ್ನು ಚಾರ್ಜ್ ಮಾಡಲು ಟೈಪ್-ಸಿ ಚಾರ್ಜರ್ ಇಂದು ಸಾಮಾನ್ಯವಾಗಿದೆ. ಇದು ಸುಲಭವಾಗಿ ಸಿಗುವ ಕಾರಣ ಎಲ್ಲಿಂದಲಾದರೂ ಚಾರ್ಜರ್ ಖರೀದಿಸಿ ಫೋನ್ ಅನ್ನು ಚಾರ್ಜ್ ಮಾಡಬಹುದು. ಅಥವಾ ಬೇರೊಬ್ಬರ ಚಾರ್ಜರ್ ತೆಗೆದುಕೊಂಡು ಫೋನ್ ಅನ್ನು ಚಾರ್ಜ್ ಮಾಡಬಹುದು. ಆದರೆ ಹಾಗೆ ಮಾಡುವುದು ಅಪಾಯಕಾರಿ. ನಕಲಿ ಚಾರ್ಜರ್ ಫೋನ್‌ ಸ್ಫೋಟಕ್ಕೆ ಕಾರಣವಾಗಬಹುದು. ಇದಕ್ಕೂ ಮೊದಲು ಚಾರ್ಜ್ ಮಾಡುವಾಗ ಫೋನ್ ಸ್ಫೋಟಗೊಂಡ ಅನೇಕ ಘಟನೆಗಳು ಕಂಡುಬಂದಿವೆ.

ಫೋನ್ ಸ್ಫೋಟದಿಂದ ಜೀವಗಳು ಕಳೆದುಹೋಗಿವೆ. ಅಂತಹ ಘಟನೆ ನಿಮಗೆ ಸಂಭವಿಸಬಾರದು ಎಂದು ನೀವು ಬಯಸಿದರೆ, ನೀವು ಮೂಲ ಚಾರ್ಜರ್ನೊಂದಿಗೆ ಫೋನ್ ಅನ್ನು ಚಾರ್ಜ್ ಮಾಡಬೇಕು. ಇದಕ್ಕಾಗಿ ನೀವು ಸರ್ಕಾರಿ ಬಿಐಎಸ್ ಕೇರ್ ಆ್ಯಪ್ ಅನ್ನು ಬಳಸಬಹುದು. BIS ಕೇರ್ ಆಪ್‌ನ ಮಾಲೀಕರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಗಿದೆ. ನಿಮಗೆ ತಿಳಿದಿರುವಂತೆ, BIS ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. BIS ಭಾರತದಲ್ಲಿ ಮಾರಾಟವಾಗುವ ಸರಕುಗಳ ಗುಣಮಟ್ಟದ ಪ್ರಮಾಣೀಕರಣ ಸಂಸ್ಥೆಯಾಗಿದೆ.

ಪ್ರತಿಯೊಬ್ಬ ಮೊಬೈಲ್ ಫೋನ್ ಬಳಕೆದಾರರು ಬಿಐಎಸ್ ಕೇರ್ ಆ್ಯಪ್ ಡೌನ್‌ಲೋಡ್ ಮಾಡಬಹುದು. ಇದು ಐಒಎಸ್ ಜೊತೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.

ನಿಜವಾದ ಮತ್ತು ನಕಲಿ ಚಾರ್ಜರ್ ನಡುವೆ ಹೇಗೆ ತಿಳಿಯುವುದು?

ಮೊದಲು ನೀವು ಐಒಎಸ್ ಮತ್ತು ಆಂಡ್ರಾಯ್ಡ್ ಫೋನಿನಲ್ಲಿ ಬಿಐಎಸ್ ಕೇರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ನಂತರ ನೀವು ಅಪ್ಲಿಕೇಶನ್ ಅನ್ನು ತೆರೆಯಬೇಕು ಮತ್ತು R ಸಂಖ್ಯೆಯನ್ನು ಪರಿಶೀಲಿಸಬೇಕು. ಜೊತೆಗೆ CRS ಅನ್ನು ಟ್ಯಾಪ್ ಮಾಡಬೇಕು.

ನಂತರ ನೀವು ಎರಡು ಆಯ್ಕೆಗಳನ್ನು ನೋಡುತ್ತೀರಿ. ಇಲ್ಲಿ ಉತ್ಪನ್ನ ನೋಂದಣಿ ಸಂಖ್ಯೆ ಅಥವಾ ಉತ್ಪನ್ನ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನಿಜವಾದ ಅಥವಾ ನಕಲಿ ಚಾರ್ಜರ್ ಅನ್ನು ಗುರುತಿಸಬಹುದು.

ಇದರ ನಂತರ ನೀವು ಚಾರ್ಜರ್‌ನ ಹೆಸರು, ಉತ್ಪನ್ನ ವರ್ಗ, ಚಾರ್ಜರ್ ಅನ್ನು ಯಾವ ದೇಶದಲ್ಲಿ ತಯಾರಿಸಲಾಗುತ್ತದೆ, ಭಾರತೀಯ ಪ್ರಮಾಣಿತ ಸಂಖ್ಯೆ ಮತ್ತು ಮಾದರಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಸ್ಮಾರ್ಟ್ಫೋನ್ನಲ್ಲಿರುವ ಏರ್‌ಪ್ಲೇನ್ ಮೋಡ್ನಿಂದ ಇಷ್ಟೆಲ್ಲ ಉಪಯೋಗ ಇದೆಯಾ?, ಅನೇಕರಿಗೆ ತಿಳಿದಿಲ್ಲ ಈ ಟ್ರಿಕ್

ನೋಂದಣಿ ಸಂಖ್ಯೆಯನ್ನು ಹುಡುಕುವುದು ಹೇಗೆ?:

ನೀವು ಹೊಸ ಚಾರ್ಜರ್ ಅನ್ನು ಖರೀದಿಸಿದಾಗ, ಉತ್ಪನ್ನ ಸಂಖ್ಯೆ ಮತ್ತು QR ಕೋಡ್ ಎರಡನ್ನೂ ಅದರಲ್ಲಿ ದಾಖಲಿಸಲಾಗುತ್ತದೆ. ಇದು ಇಲ್ಲದಿದ್ದರೆ ಮೊದಲ ನೋಟದಲ್ಲೇ ಚಾರ್ಜರ್ ನಕಲಿ ಎಂದು ತಿಳಿಯಬಹುದು. ಇದಲ್ಲದೆ, ಚಾರ್ಜರ್ ಖರೀದಿಸಿದ ರಶೀದಿಯಲ್ಲಿ ನೋಂದಣಿ ಸಂಖ್ಯೆಯನ್ನು ಸಹ ದಾಖಲಿಸಲಾಗುತ್ತದೆ. ಇದು R-XXXXXXX ಸ್ವರೂಪದಲ್ಲಿ ಪ್ರಾರಂಭವಾಗುತ್ತದೆ. ಈ ಮೂಲಕ ನೋಂದಣಿ ಸಂಖ್ಯೆಯನ್ನು ತಿಳಿಯಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ