ನೀವು ಮನೆಗೆ ಸಿಸಿಟಿವಿ ಅಳವಡಿಸುವ ಪ್ಲಾನ್​ನಲ್ಲಿದ್ದೀರಾ?: ಖರೀದಿಸುವಾಗ ಈ 5 ತಪ್ಪುಗಳನ್ನು ಮಾಡಬೇಡಿ

ಇಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಅನಿವಾರ್ಯವಾಗಿವೆ. ಸಿಸಿಟಿವಿ ಖರೀದಿಸುವ ಮೊದಲು, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಇಲ್ಲದಿದ್ದರೆ ನೀವು ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಹಾಕಿದರೂ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ.

ನೀವು ಮನೆಗೆ ಸಿಸಿಟಿವಿ ಅಳವಡಿಸುವ ಪ್ಲಾನ್​ನಲ್ಲಿದ್ದೀರಾ?: ಖರೀದಿಸುವಾಗ ಈ 5 ತಪ್ಪುಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 27, 2024 | 6:06 PM

ಇಂದಿನ ದಿನಗಳಲ್ಲಿ ನಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾಗಳು ಅನಿವಾರ್ಯವಾಗಿವೆ. ವಿಶೇಷವಾಗಿ ಮಹಿಳೆರಯ ವಾಸಿಸುವ ಅಥವಾ ಒಂಟಿಯಾಗಿರುವ ಜನರಿಗೆ ಪ್ರಮುಖ ಭದ್ರತಾ ಸಾಧನವಾಗಿದೆ. ಸಿಸಿಟಿವಿ ಅಂದರೆ ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾದ ಸಹಾಯದಿಂದ ನಾವು ನಮ್ಮ ಮನೆಯನ್ನು ಕೂತಲ್ಲಿಂದಲೇ ಗಮನಿಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿವೆ. ನೀವು ಸಹ ನಿಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಬಯಸಿದರೆ, ಖರೀದಿಸುವ ಮೊದಲು ಈ 5 ವಿಷಯಗಳನ್ನು ನೆನಪಿನಲ್ಲಿಡಿ.

ಕ್ಯಾಮೆರಾ ಗುಣಮಟ್ಟ

ಸ್ಮಾರ್ಟ್ ಫೋನ್ ಖರೀದಿಸುವಾಗ ಅದರ ಕ್ಯಾಮೆರಾದ ಮೇಲೆ ಹೇಗೆ ಫೋಕಸ್ ಮಾಡುತ್ತೇವೆಯೋ ಅದೇ ರೀತಿ ಸಿಸಿಟಿವಿ ಖರೀದಿಸುವಾಗ ಅದರ ಕ್ಯಾಮೆರಾದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಹೊಸ ಸಿಸಿಟಿವಿ ಖರೀದಿಸಲು ಹೋದಾಗ, ಅದರಲ್ಲಿ ಕನಿಷ್ಠ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಕಡಿಮೆ ಮೆಗಾಪಿಕ್ಸೆಲ್ ಸಂವೇದಕದಿಂದಾಗಿ ಚಿತ್ರದ ಗುಣಮಟ್ಟ ತೀರಾ ಕಳಪೆ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೂರದಲ್ಲಿನ ವ್ಯಕ್ತಿಯ ಮುಖ ಅಥವಾ ವಸ್ತು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನೀವು ಬಯಸಿದರೆ, 4MP ಅಥವಾ 8MP ಕ್ಯಾಮೆರಾ ಸಂವೇದಕದೊಂದಿಗೆ ಕೂಡ ಸಿಸಿಟಿವಿ ಖರೀದಿಸಬಹುದು.

ನೈಟ್ ಮೋಡ್ ಆಯ್ಕೆ ಹೊಂದಿರಬೇಕು

ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಬರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ನೈಟ್ ಮೋಡ್ ವೈಶಿಷ್ಟ್ಯವು ಲಭ್ಯವಿದೆ. ನೈಟ್ ಮೋಡ್ ಇರುವುದರಿಂದ, ಸಿಸಿಟಿವಿ ಕ್ಯಾಮೆರಾಗಳು ಕತ್ತಲೆಯಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ ಮತ್ತು ಮನೆಯ ಸುತ್ತಲೂ ಭದ್ರತೆಗೆ ಇದು ಉತ್ತಮವಾಗಿದೆ.

360 ಡಿಗ್ರಿ ವೀವ್

ಸಿಸಿಟಿವಿಯನ್ನು ಖರೀದಿಸುವಾಗ, ಅದು ಎಷ್ಟು ಪ್ರದೇಶವನ್ನು ಆವರಿಸುತ್ತದೆ ಎಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, 360 ಡಿಗ್ರಿ ಮೋಷನ್ ವ್ಯೂ ಹೊಂದಿರುವ ಸಿಸಿಟಿವಿ ಕ್ಯಾಮೆರಾವನ್ನು ಖರೀದಿಸುವುದು ಲಾಭದಾಯಕವಾಗಿದೆ. ಈ ಕ್ಯಾಮೆರಾ ಇಡೀ ಪ್ರದೇಶವನ್ನು ಕವರ್ ಮಾಡುತ್ತದೆ.

ಇದನ್ನೂ ಓದಿ: ಪೆನ್ ಡ್ರೈವ್ ವರ್ಕ್ ಆಗದಿದ್ದರೆ ಏನು ಮಾಡಬೇಕು?: ಈ ಟ್ರಿಕ್ ಮೂಲಕ ಎಲ್ಲ ಸಮಸ್ಯೆ ಬಗೆ ಹರಿಸಿ

ಸೈನ್ ಮೂವ್

ಇದು ಕೂಡ ಹೊಸ ತಂತ್ರಜ್ಞಾನವಾಗಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ಇರಲೇಬೇಕು. ಗೆಸ್ಚರ್ ಮೋಷನ್‌ನಿಂದಾಗಿ, ಚಲಿಸುತ್ತಿರುವ ವಸ್ತುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ಯಾಮೆರಾ ಸುಲಭವಾಗಿ ಕವರ್ ಮಾಡಲು ಸಾಧ್ಯವಾಗುತ್ತದೆ.

ಅಲರ್ಟ್

ಇತರ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ, ಸಿಸಿಟಿವಿ ಕ್ಯಾಮೆರಾಗಳು ಅಲರ್ಟ್ ನೋಟಿಫಿಕೇಷನ್ ಅನ್ನು ಸಹ ಹೊಂದಿರಬೇಕು. ಉನ್ನತ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅಲಾರ್ಮ್ ನೋಟಿಫಿಕೇಶನ್ ಲಭ್ಯವಿದ್ದು, ಯಾವುದೇ ಅಪರಿಚಿತ ವಸ್ತುವು ಅವರ ಬಳಿ ಬಂದಾಗ, ಅಲಾರಂ ಜೋರಾಗಿ ರಿಂಗಣಿಸಲು ಪ್ರಾರಂಭಿಸುತ್ತದೆ ಮತ್ತು ನೋಟಿಫಿಕೇಷನ್ ಅನ್ನು ಸ್ವೀಕರಿಸಲಾಗುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Fri, 27 September 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ