Whatsapp Tips-Tricks: ನಿಮ್ಮ ವಾಟ್ಸ್ಆ್ಯಪ್ನಲ್ಲಿ ಈ 4 ನಂಬರ್ ತಪ್ಪದೆ ಸೇವ್ ಮಾಡಿಟ್ಟುಕೊಳ್ಳಿ: ಯಾಕೆ ಗೊತ್ತೇ?
ಇಂದು ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಮೂಲಕ ನಾವು ಎಲ್ಲ ಮಾಹಿತಿಯನ್ನು ಪಡೆಯಬಹುದು. ಮನೆಯಲ್ಲೇ ಕುಳಿತು ಗ್ಯಾಸ್ ಸಿಲಿಂಡರ್ ಆರ್ಡರ್ ಮಾಡುವುದರಿಂದ ಹಿಡಿದು ಫುಡ್ ಆರ್ಟರ್ ಕೂಡ ವಾಟ್ಸ್ಆ್ಯಪ್ನಲ್ಲಿ ಮಾಡಬಹುದು. ಅದಕ್ಕಾಗಿ ನೀವು ಈ ನಂಬರ್ಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕು.
ಇಂದಿನ ಮುಂದುವರೆದ ಜಗತ್ತಿನಲ್ಲಿ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನ್ನು ಬಳಸದೆ ಇರುವವರು ತೀರಾ ಕಡಿಮೆ. ನೀವೂ ವಾಟ್ಸ್ಆ್ಯಪ್ ಬಳಸುತ್ತಿದ್ದರೆ ಈ ಸಂಖ್ಯೆಗಳು ನಿಮಗೆ ತುಂಬಾ ಉಪಯುಕ್ತವಾಗುತ್ತವೆ. ಈ ನಂಬರ್ ಅನ್ನು ಸೇವ್ ಮಾಡಿದರೆ ನೀವು ಅವುಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಬಹುದು. ಯಾವುದೇ ಸರ್ಕಾರಿ ಉದ್ಯೋಗ, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಆರ್ಡರ್ ಮಾಡುವುದರಿಂದ ಹಿಡಿದು ಆಹಾರ ವಿತರಣೆಯವರೆಗೆ, ಎಲ್ಲಾ ಉಪಯೋಗಕ್ಕೆ ಈ ಸಂಖ್ಯೆಯನ್ನು ವಾಟ್ಸ್ಆ್ಯಪ್ನಲ್ಲಿ ಸೇವ್ ಮಾಡಿ.
ನಿಮ್ಮ ಎಲ್ಲ ಪ್ರಶ್ನೆಗ ಉತ್ತರ: ನಿಮಗೆ ವಿದ್ಯಾಭ್ಯಾಸದ ಕುರಿತು ಯಾವುದೇ ಗೊಂದಲ ಇದ್ದರೆ ಇದಕ್ಕಾಗಿ ನಿಮ್ಮ ಮೊಬೈಲ್‌ನಲ್ಲಿ Doubtnut +91-8400400400 ಸಂಖ್ಯೆಯನ್ನು ಸೇವ್ ಮಾಡಿ. ಇದು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಉತ್ತರಗಳ ಜೊತೆಗೆ ಅವರು ತಮ್ಮ ಸಂಬಂಧಿತ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಜೀವಶಾಸ್ತ್ರದಲ್ಲಿ ಯಾವುದೇ ಡೌಟ್ ಬಂದರೂ ಇದು ಬಗೆಹರಿಸುತ್ತದೆ.
ಮನೆಯಲ್ಲೇ ಸಿಲಿಂಡರ್ ಬುಕ್ ಮಾಡಿ: ನೀವು ಮನೆಯಲ್ಲಿ ಸಿಲಿಂಡರ್ ಅನ್ನು ಆರ್ಡರ್ ಮಾಡಲು ಬಯಸಿದರೆ ಈ ಸಂಖ್ಯೆ ನಿಮಗಾಗಿ. ಈ ಇಂಡಿಯನ್ ಆಯಿಲ್ +91-7588888824 ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿ. ಇದರಲ್ಲಿ ನೀವು ಸಿಲಿಂಡರ್ ಅನ್ನು ಬುಕ್ ಮಾಡುವುದು ಮಾತ್ರವಲ್ಲದೆ ನಿಮ್ಮ ಆಯ್ಕೆಯ ಪ್ರಕಾರ ವಿತರಣಾ ದಿನ ಮತ್ತು ಸಮಯವನ್ನು ಸಹ ಆಯ್ಕೆ ಮಾಡಬಹುದು. ಇಷ್ಟೇ ಅಲ್ಲ, ನೀವು ಅದರ ಪಾವತಿಯನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.
ರೈಲಿನಲ್ಲಿ ಫುಡ್ ಆರ್ಡರ್ ಮಾಡಿ: ನೀವು ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದರೆ, ನೀವು ವಾಟ್ಸ್ಆ್ಯಪ್ ನಂಬರ್ +91-7042062070 ಅನ್ನು ಬಳಸಬಹುದು. ಇಲ್ಲಿಂದ ನೀವು ರೈಲಿನಲ್ಲಿ ಕುಳಿತು ಆಹಾರವನ್ನು ಆರ್ಡರ್ ಮಾಡಬಹುದು. ಇದಲ್ಲದೇ ನಿಮ್ಮ PNR ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು. ನೀವು ರೈಲಿನಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಯಾರಾದರೂ ನಿಮಗೆ ಕಿರುಕುಳ ನೀಡುತ್ತಿದ್ದರೆ, ಈ ನಂಬರ್ನಿಂದ ದೂರು ನೀಡಬಹುದು.
ಇದನ್ನೂ ಓದಿ: ನೀವು ಮನೆಗೆ ಸಿಸಿಟಿವಿ ಅಳವಡಿಸುವ ಪ್ಲಾನ್ನಲ್ಲಿದ್ದೀರಾ?: ಖರೀದಿಸುವಾಗ ಈ 5 ತಪ್ಪುಗಳನ್ನು ಮಾಡಬೇಡಿ
ವಿಮಾನ ಸಂಬಂಧಿತ ಅಪ್‌ಡೇಟ್‌ಗಳು: ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸಂಖ್ಯೆ 7065145858 ಮೂಲಕ ನೀವು ಫ್ಲೈಟ್ ಬುಕಿಂಗ್ ಮಾಡಬಹುದು. ವಿಮಾನದ ಸ್ಥಿತಿಯನ್ನು ಸಹ ಪರಿಶೀಲಿಸಬಹುದು. ಈ ಸಂಖ್ಯೆಯು ನಿಮ್ಮ ಎಲ್ಲಾ ವಿಮಾನ ಸಂಬಂಧಿತ ಸಮಸ್ಯೆಗಳನ್ನು ಬರೆಹರಿಸುತ್ತದೆ. ನೀವು ಮಾಡಬೇಕಾಗಿರುವುದು ಈ ಸಂಖ್ಯೆಗಳಿಗೆ ‘ಹಾಯ್’ ಎಂದು ಕಳುಹಿಸಬೇಕಷ್ಟೆ. ಅದರ ನಂತರ, ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬಹುದು. ನಿಮ್ಮ ಪ್ರಶ್ನೆಯನ್ನು ಟೈಪ್ ಮಾಡುವ ಮೂಲಕ ಉತ್ತರವನ್ನು ಪಡೆಯಬಹುದು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ