Tech Tips: ಪೆನ್ ಡ್ರೈವ್ ವರ್ಕ್ ಆಗದಿದ್ದರೆ ಏನು ಮಾಡಬೇಕು?: ಈ ಟ್ರಿಕ್ ಮೂಲಕ ಎಲ್ಲ ಸಮಸ್ಯೆ ಬಗೆ ಹರಿಸಿ
ಇಂದು ಪೆನ್ ಡ್ರೈವ್ ಕಡಿಮೆ ಬೆಲೆಗೆ ಸಿಗುವುದರಿಂದ ಒಂದು ಹಾಳಾದರೆ ಮತ್ತೊಂದು ತೆಗೆದುಕೊಳ್ಳುವವರು ಅನೇಕರಿದ್ದಾರೆ. ಆದರೆ, ಕೆಲವೊಂದು ಟ್ರಿಕ್ ಮೂಲಕ ಕೆಲಸ ಮಾಡದ ಪೆನ್ ಡ್ರೈವ್ ಅನ್ನು ಸುಲಭವಾಗಿ ಸರಿ ಮಾಡಬಹುದು. ಅದು ಹೇಗೆ?, ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಪೆನ್ ಡ್ರೈವ್ ದೀರ್ಘಕಾಲದವರೆಗೆ ಬಳಸದೆ ಇದ್ದಾಗ ಅಥವಾ ವಿವಿಧ ಸಿಸ್ಟಮ್ಗಳಿಗೆ ಅಳವಡಿಸಿದ ಕಾರಣ ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಪೆನ್‌ಡ್ರೈವ್‌ನಲ್ಲಿ ಪ್ರಮುಖ ಡೇಟಾ ಇದ್ದು, ಅದು ದಿಢೀರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅನೇಕ ತೊಂದರೆ ಉಂಟಾಗುತ್ತದೆ. ಬಹಳ ಮುಖ್ಯವಾದ ಫೈಲ್ ಅದರಲ್ಲಿದ್ದರೆ ತುಂಬಾ ಎಲ್ಲ ಕೆಲಸ ಹಾಳಾಗುತ್ತದೆ. ಆದರೆ ಇನ್ಮುಂದೆ ಈ ರೀತಿ ಆದರೆ ನೀವು ಟೆನ್ಶನ್ ಪಡಬೇಕಿಲ್ಲ. ಯಾಕೆಂದರೆ ಪೆನ್ ಡ್ರೈವ್ ಡೇಟಾವನ್ನು ಮರುಪಡೆಯಲು ಅಥವಾ ಪೆನ್ ಡ್ರೈವ್ ಪುನಃ ಕಾರ್ಯನಿರ್ವಹಿಸುವಂತೆ ಮಾಡಲು ಕೆಲವು ಸುಲಭ ಟ್ರಿಕ್ ಅನ್ನು ನಾವಿಲ್ಲಿ ಹೇಳುತ್ತೇವೆ.
USB ಪೋರ್ಟ್, ಪೆನ್ ಡ್ರೈವ್ ಪರಿಶೀಲಿಸಿ:
ಮೊದಲಿಗೆ, ಕಂಪ್ಯೂಟರ್‌ನಲ್ಲಿರುವ ಪೆನ್ ಡ್ರೈವ್ ಮತ್ತು ಯುಎಸ್‌ಬಿ ಪೋರ್ಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿ. ಮತ್ತೊಂದು ಕಂಪ್ಯೂಟರ್‌ನಲ್ಲಿ ಪೆನ್ ಡ್ರೈವ್ ಅನ್ನು ಹಾಕಿ ನೋಡಿ ಅಥವಾ ಅದನ್ನು ಕಂಪ್ಯೂಟರ್‌ನಲ್ಲಿರುವ ಇನ್ನೊಂದು USB ಪೋರ್ಟ್‌ಗೆ ಸಂಪರ್ಕಿಸಲು ಪ್ರಯತ್ನಿಸಿ.
ಅಪ್ಡೇಟ್ ಡ್ರೈವ್:
ಕನೆಕ್ಟ್ ಮಾಡಿದರೂ ಪೆನ್ ಡ್ರೈವ್ ಕಾಣುತ್ತಿಲ್ಲ ಎಂದಾದರೆ ಡ್ರೈವರ್ ಅಪ್ಡೇಟ್ ಬೇಕಾಗಬಹುದು. ಇದಕ್ಕಾಗಿ ಡಿವೈಸ್ ಮ್ಯಾನೇಜರ್ ತೆರೆಯಿರಿ. ನಂತರ ಯುನಿವರ್ಸಲ್ ಸೀರಿಯಲ್ ಬಸ್ ಕಂಟ್ರೋಲರ್ ಮೇಲೆ ಕ್ಲಿಕ್ ಮಾಡಿ. ಬಳಿಕ, ನಿಮ್ಮ ಪೆನ್ ಡ್ರೈವ್ ಅನ್ನು ಸರ್ಚ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಅಪ್‌ಡೇಟ್ ಡ್ರೈವರ್ ಆಯ್ಕೆಯನ್ನು ಆರಿಸಿ.
ಡಿಸ್ಕ್ ಮ್ಯಾನೇಜ್ಮೆಂಟ್ ಬಳಸಿ:
ಪೆನ್ ಡ್ರೈವ್ ಕಾಣಿಸುತ್ತಿದ್ದರೂ ಅದರಲ್ಲಿರುವ ಡೇಟಾ ಲಭ್ಯವಿಲ್ಲದಿದ್ದರೆ, ಅದನ್ನು ‘ಡಿಸ್ಕ್ ಮ್ಯಾನೇಜ್‌ಮೆಂಟ್’ ನಿಂದ ಪರಿಶೀಲಿಸಬಹುದು. ಇದಕ್ಕಾಗಿ ವಿಂಡೋಸ್‌ನ ‘ರನ್’ ನಲ್ಲಿ ‘diskmgmt.msc’ ಎಂದು ಟೈಪ್ ಮಾಡಿ. ಪೆನ್ ಡ್ರೈವ್ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಿ. ಅದು ‘ಅನ್‌ಲೊಕೇಟೆಡ್.. ಅಥವಾ ‘ರಾ’ ಎಂದು ತೋರಿಸಿದರೆ, ಅದನ್ನು ಫಾರ್ಮ್ಯಾಟ್ ಮಾಡಬೇಕಾಗುತ್ತದೆ. ಫಾರ್ಮ್ಯಾಟಿಂಗ್ ಅಗತ್ಯವಿದ್ದರೆ, ನೀವು ಡಾಟಾ ರಿಕವರಿ ಟೂಲ್ ಉಪಯೋಗ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಭರ್ಜರಿ ಡಿಮ್ಯಾಂಡ್: ಅತಿ ಹೆಚ್ಚು ಸೇಲ್ ಆಗುತ್ತಿರುವ ಯೂಸುಡ್ ಕಾರು ಯಾವುದು ಗೊತ್ತೇ?
CMD ಬಳಸಿ ಪರಿಶೀಲಿಸಿ:
ನೀವು CMD ಮೂಲಕ ಪೆನ್ ಡ್ರೈವ್ ದೋಷಗಳನ್ನು ಸರಿಪಡಿಸಬಹುದು. ಇದಕ್ಕಾಗಿ ಅಡ್ಮಿಮಿನಿಸ್ಟ್ರೇಟರ್ ಮೋಡ್‌ನಲ್ಲಿ ಕಮಾಂಡ್ ಪ್ರಾಂಪ್ಟ್ ತೆರೆಯಿರಿ. ಈಗ chkdsk X: /f’ X: ಪೆನ್ ಡ್ರೈವ್ ಅಕ್ಷರ ಟೈಪ್ ಮಾಡಿ. ಇದು ಪೆನ್ ಡ್ರೈವ್ ದೋಷಗಳನ್ನು ಪರಿಶೀಲಿಸುತ್ತದೆ.
ಡಾಟಾ ರಿಕವರಿ ಸಾಫ್ಟ್‌ವೇರ್ ಬಳಸಿ:
ಮೇಲಿನ ವಿಧಾನಗಳು ಕಾರ್ಯನಿರ್ವಹಿಸದಿದ್ದರೆ ನೀವು ಕೆಲವು ಡಾಟಾ ರಿಕವರಿ ಸಾಫ್ಟ್ವೇರ್ ಬಳಸಬಹುದು. Recuva ಒಂದು ಉಚಿತ ಆ್ಯಪ್ ಆಗಿದ್ದು ಪೆನ್ ಡ್ರೈವ್‌ನಿಂದ ಅಳಿಸಲಾದ ಅಥವಾ ಕಳೆದುಹೋದ ಡೇಟಾವನ್ನು ಮರುಪಡೆಯಬಹುದು. EaseUS ಡೇಟಾ ರಿಕವರಿ ವಿಝಾರ್ಡ್ ಸಾಫ್ಟ್‌ವೇರ್ ಕೂಡ ಉತ್ತಮವಾಗಿದೆ. ಡಿಸ್ಕ್ ಡ್ರಿಲ್ ಪೆನ್ ಡ್ರೈವ್ ಅನ್ನು ಫಾರ್ಮ್ಯಾಟ್ ಮಾಡಿದ ನಂತರವೂ ಪೆನ್ ಡ್ರೈವ್‌ನಿಂದ ಫೈಲ್‌ಗಳನ್ನು ರಿಕವರಿ ಮಾಡಬಹುದು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ