ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone) ಬಳಕೆದಾರರು ಅಪ್ಲಿಕೇಷನ್ ಡೌನ್ಲೋಡ್ ಮಾಡಲು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ನಕಲಿ ಆ್ಯಪ್ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಮಾಲ್ವೇರ್ಗಳಿದ್ದ ಅಪಾಯಕಾರಿ ಆ್ಯಪ್ಗಳನ್ನ ಡಿಲೀಟ್ ಮಾಡಿದೆ. ಕಳೆದ ತಿಂಗಳು ಪ್ಲೇ ಸ್ಟೋರ್‌ನಿಂದ 12 ಡೇಂಜರಸ್ ಆ್ಯಪ್‌ಗಳನ್ನು ತೆಗೆದು ಹಾಕಿತ್ತು. ಇದೀಗ ಮತ್ತೆ ಒಂದು ಅಪ್ಲಿಕೇಶನ್ನಲ್ಲಿ ಗೂಗಲ್ ಮಾಲ್ವೇರ್ ಅನ್ನು ಪತ್ತೆಹಚ್ಚಿದ್ದು, ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಚೀನಾದ ಪ್ರಸಿದ್ಧ ಶಾಪಿಂಗ್ ಆ್ಯಪ್ ಪಿಂಡುವೊಡು (Pinduoduo) ಅಪ್ಲಿಕೇಷನ್ ಅನ್ನು ಪ್ಲೇ ಸ್ಟೋರ್‌ನಿಂದ ಕಿತ್ತೆಸೆದಿದೆ. ಇದನ್ನು ನೀವು ಇನ್‌ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದರೆ ಖಂಡಿತಾ ನೀವು ನಿಮ್ಮ ಖಾಸಗಿ ದಾಖಲೆ ಹಾಗೂ ಇನ್ನಿತರೆ ಮಾಹಿತಿಯನ್ನು ಬೇರೆಯವರಿಗೆ ನೀಡಿದಂತೆ ಆಗುತ್ತದೆ.
ಸಮಾರು 800 ಮಿಲಿಯನ್ ಬಳಕೆದಾರರನ್ನು ಹೊಂದಿದ್ದ ಈ ಪಿಂಡುವೊಡು ಆ್ಯಪ್ನಲ್ಲಿ ವೈರಸ್ ಕಂಡುಬಂದಿದೆ. ಇದು ಮಾಲ್ವೇರ್ ಅನ್ನು ಒಳಗೊಂಡಿರುವ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು TechCrunch ವರದಿ ಮಾಡಿದೆ. ”ಮಾಲ್ವೇರ್ ಅನ್ನು ಒಳಗೊಂಡಿರುವ ಈ ಅಪ್ಲಿಕೇಶನ್‌ನ ಆಫ್-ಪ್ಲೇ ಆವೃತ್ತಿಗಳನ್ನು ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಜಾರಿಗೊಳಿಸಲಾಗಿದೆ,” ಎಂದು ಗೂಗಲ್ ವಕ್ತಾರ ಎಡ್ ಫೆರ್ನಾಂಡಿಸ್ ಹೇಳಿದ್ದಾರೆ. “ನಾವು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದೇವೆ. ಭದ್ರತಾ ಕಾಳಜಿಗಳಿಗಾಗಿ ಗಗೂಗಲ್ ಪ್ಲೇ ಸ್ಟೋರ್‌ನಿಂದ ಪಿಂಡುವೊಡು ಅಧಿಕೃತ ಅಪ್ಲಿಕೇಶನ್ ಅನ್ನು ಅಮಾನತುಗೊಳಿಸಿದೆ,” ಎಂದು ಅವರು ಹೇಳಿದ್ದಾರೆ.
Twitter: ಶೀಘ್ರದಲ್ಲೇ ದೀರ್ಘ ರೂಪದ ಟ್ವೀಟ್‌ಗಳ ಅಕ್ಷರ ಮಿತಿ 10,000ಕ್ಕೆ ಹೆಚ್ಚಿಸಲಿದೆ ಟ್ವಿಟರ್: ಸಿಇಒ ಎಲಾನ್ ಮಸ್ಕ್
ಕಳೆದ ಫೆಬ್ರವರಿ ತಿಂಗಳಲ್ಲಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 12 ಡೇಂಜರಸ್ ಆ್ಯಪ್‌ಗಳನ್ನು ತೆಗೆದುಹಾಕಿತ್ತು. ಇವುದಗಳು ಅಪಾಯಕಾರಿ ಎಂದು ಸಾಬೀತಾಗಿರುವ ಕಾರಣ ಅವುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಎಚ್ಚರಿಸಿತ್ತು. ಅಚ್ಚರಿ ಎಂದರೆ ಈ ಎಲ್ಲ ಆ್ಯಪ್‌ಗಳನ್ನು ಲಕ್ಷಾಂತರ ಬಳಕೆದಾರರು ಇನ್‌ಸ್ಟಾಲ್ ಮಾಡಿಕೊಂಡು ಬಳಸುತ್ತಿದ್ದರಂತೆ. ಇದರಲ್ಲಿ ಹೆಚ್ಚು ಫಿಟ್ನೆಸ್ಗೆ ಸಂಬಂಧಿಸಿದ ಆ್ಯಪ್ ಮತ್ತು ಗೇಮಿಂಗ್ ಆ್ಯಪ್ಗಳಾಗಿವೆ.
10 ಮಿಲಿಯನ್ ಇನ್‌ಸ್ಟಾಲ್ ಕಂಡಿದ್ದ ಫಿಟ್‌ನೆಸ್ ಆ್ಯಪ್ ಲಕ್ಕಿ ಸ್ಟೆಪ್ ಅಪಾಯಕಾರಿ ಆ್ಯಪ್ ಎಂದು ಗೂಗಲ್ ಹೇಳಿದೆ. ಇದರ ಜೊತೆಗೆ 5 ಮಿಲಿಯಲ್ ಇನ್‌ಸ್ಟಾಲ್ ಆಗಿರುವ ವಾಕಿಂಗ್ ಜಾಯ್ ಆ್ಯಪ್, ಲಕ್ಕಿ ಹ್ಯಾಬಿಟ್ ಅನ್ನು ತೆಗೆದು ಹಾಖಿದೆ. ಅಂತೆಯೆ ಗೇಮಿಂಗ್ ವಿಭಾಗದಲ್ಲಿ 1 ಲಕ್ಷ ಜನರು ಬಳಸುತ್ತಿರುವ ಗೋಲ್ಡನ್ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲ್ಯಾಕ್‌ಜಾಕ್ ಆ್ಯಪ್ ಅನ್ನು ಕಿತ್ತೆಸೆದಿದೆ. ಇದರೊಂದಿಗೆ 50 ಲಕ್ಷ ಜನರು ಇನ್‌ಸ್ಟಾಲ್ ಮಾಡಿಕೊಂಡಿರುವ ಅನ್‌ಲಿಮಿಟೆಡ್ ಸ್ಕೋರ್, ಬಿಗ್ ಡಿಸಿಶನ್ ಹಾಗೂ ಜುವೆಲ್ ಸೀ ಲಕ್ಸ್ ಪ್ರೂಟ್ಸ್ ಗೇಮ್, ಲಕ್ಕಿ ಕ್ಲೋವರ್ ಆಪ್, ಕಿಂಗ್ ಬ್ಲಿಟ್ಜ್ ಮತ್ತು ಲಕ್ಕಿ ಹಮ್ಮರ್ ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.
ಆಂಡ್ರಾಯ್ಡ್‌ಗಾಗಿ ಡಾ. ವೆಬ್ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ಆಯ್ಡ್‌ವೇರ್ ಟ್ರೋಜನ್‌ಗಳು ಮತ್ತು ಸ್ಪೈವೇರ್‌ಗಳ ಚಟುವಟಿಕೆಯು ಡಿಸೆಂಬರ್ 2022 ರಲ್ಲಿ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಅದರಂತೆ ಡಾ. ವೆಬ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ರೀತಿಯ ಅಪಾಯಕಾರಿ ಆ್ಯಪ್‌ಗಳನ್ನು ಪತ್ತೆ ಮಾಡುತ್ತುದೆ. ಈ ಮೂಲಕ ಬಳಕೆದಾರರ ಬ್ಯಾಂಕಿಂಗ್ ವ್ಯವಹಾರ ಹಾಗೂ ಅವರ ಖಾಸಗಿ ಭದ್ರತೆಗೆ ಸಹಕಾರಿಯಾಗಿದೆ.
ತಂತ್ರಜ್ಞಾನದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ