Hanuman Chalisa: ಇತಿಹಾಸ ಸೃಷ್ಟಿಸಿದ ಶ್ರೀ ಹನುಮಾನ್ ಚಾಲೀಸಾ: ಯೂಟ್ಯೂಬ್‌ನಲ್ಲಿ 5 ಬಿಲಿಯನ್‌ಗಿಂತಲೂ ಅಧಿಕ ವೀಕ್ಷಣೆ
"ಶ್ರೀ ಹನುಮಾನ್ ಚಾಲೀಸಾ" ವಿಡಿಯೋ ಯೂಟ್ಯೂಬ್‌ನಲ್ಲಿ 5 ಬಿಲಿಯನ್ ವೀಕ್ಷಣೆಗಳನ್ನು ಮೀರಿದೆ, ಇದು ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಹಾಡಾಗಿದ್ದು, ಹಲವಾರು ಬಾಲಿವುಡ್ ಹಾಡುಗಳನ್ನು ಮೀರಿಸಿದೆ. 14 ವರ್ಷ ಹಳೆಯದಾದ ಈ ವಿಡಿಯೋ ಇನ್ನೂ ಜನಪ್ರಿಯವಾಗಿದೆ. ಹರಿಹರನ್ ಅವರ ಧ್ವನಿ ಮತ್ತು ಲಲಿತ್ ಸೇನ್ ಅವರ ಸಂಗೀತವನ್ನು ಒಳಗೊಂಡಿದೆ.

ಬೆಂಗಳೂರು (ನ. 27): “ಶ್ರೀ ಹನುಮಾನ್ ಚಾಲೀಸಾ” ಯೂಟ್ಯೂಬ್‌ನಲ್ಲಿ (Youtube) 5 ಬಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ತಲುಪಿದ ಮೊದಲ ಭಾರತೀಯ ವಿಡಿಯೋ ಎಂಬ ದಾಖಲೆ ಬರೆದಿದೆ. ಇದು ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ವಿಡಿಯೋವನ್ನು ಮೇ 10, 2011 ರಂದು ಟಿ-ಸೀರೀಸ್‌ನಲ್ಲಿ ಬಿಡುಗಡೆ ಮಾಡಲಾಯಿತು. 14 ವರ್ಷ ಹಳೆಯದಾದ ಈ ವಿಡಿಯೋ ಇನ್ನೂ ಜನಪ್ರಿಯವಾಗಿದೆ. ಹರಿಹರನ್ ಅವರ ಧ್ವನಿ ಮತ್ತು ಲಲಿತ್ ಸೇನ್ ಅವರ ಸಂಗೀತವನ್ನು ಒಳಗೊಂಡ ಇದು ಅನೇಕ ಬಾಲಿವುಡ್ ಹಾಡುಗಳನ್ನು ಮೀರಿಸಿದೆ.
ಶ್ರೀ ಹನುಮಾನ್ ಚಾಲೀಸಾ ನಂತರ, ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಹಿಂದಿ ಹಾಡಲ್ಲ, ಬದಲಾಗಿ ಪಂಜಾಬಿ ಹಾಡು. ಎರಡನೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಪಂಜಾಬಿ ಹಾಡು ಲೆಹೆಂಗಾ, ಇದು 1.8 ಬಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನಂತರ ಹರ್ಯಾಣವಿ ಹಾಡು 52 ಗಜ್ ಕಾ ದಮನ್ ಮತ್ತು ತಮಿಳು ಹಾಡು ರೌಡಿ ಬೇಬಿ ಇವೆರಡೂ ವೀಡಿಯೊಗಳು 1.7 ಬಿಲಿಯನ್ ವೀಕ್ಷಣೆಗಳನ್ನು ಪಡೆದಿವೆ.
Nothing Phone 3a Lite: ಭಾರತಕ್ಕೆ ಬಂತು ನಥಿಂಗ್ ಕಂಪನಿಯ ಹೊಸ ಬಜೆಟ್ ಸ್ಮಾರ್ಟ್ಫೋನ್: ಬೆಲೆ ಕೇವಲ…
ಭಾರತವನ್ನು ಮೀರಿ, ವಿಶ್ವಾದ್ಯಂತ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಪಟ್ಟಿಯಲ್ಲಿ 16.38 ಬಿಲಿಯನ್ ವೀಕ್ಷಣೆಗಳೊಂದಿಗೆ “ಬೇಬಿ ಶಾರ್ಕ್ ಡ್ಯಾನ್ಸ್”, 8.85 ಬಿಲಿಯನ್ ವೀಕ್ಷಣೆಗಳೊಂದಿಗೆ “ಡೆಸ್ಪಾಸಿಟೊ”, 8.16 ಬಿಲಿಯನ್ ವೀಕ್ಷಣೆಗಳೊಂದಿಗೆ “ವೀಲ್ಸ್ ಆನ್ ದಿ ಬಸ್”, 7.28 ಬಿಲಿಯನ್ ವೀಕ್ಷಣೆಗಳೊಂದಿಗೆ “ಬಾತ್ ಸಾಂಗ್” ಮತ್ತು 7.12 ಬಿಲಿಯನ್ ವೀಕ್ಷಣೆಗಳೊಂದಿಗೆ “ಜಾನಿ ಜಾನಿ ಯೆಸ್ ಪಾಪಾ” ಸೇರಿವೆ. “ಶ್ರೀ ಹನುಮಾನ್ ಚಾಲೀಸಾ” ಕೂಡ ಆಯ್ದ ಜಾಗತಿಕ ವಿಡಿಯೋಗಳ ಈ ಲೀಗ್‌ಗೆ ಸೇರಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




