Kannada News Technology Honor 70 5G A Snapdragon processor and 54MP Sony IMX800 sensor camera launched check price and other specs
ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ಹಾನರ್ 70 5G ಸ್ಮಾರ್ಟ್‌ಫೋನ್: ಏನಿದೆ ಫೀಚರ್ಸ್?, ಬೆಲೆ ಎಷ್ಟು?
ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್ 70 5ಜಿ (Honor 70 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ನೀಡಲಾಗಿದೆ.
Honor 70 5G
Follow us on
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಮೊಬೈಲ್ಗಳನ್ನು ಪರಿಚಯಿಸುವ ಪ್ರಸಿದ್ಧ ಹಾನರ್ (Honor) ಕಂಪನಿ ಇದೀಗ ನೂತನ ಫೋನ್ನೊಂದಿಗೆ ಮತ್ತೆ ಬಂದಿದೆ. ಈ ಬಾರಿ ಹಾನರ್ ಕಂಪನಿ ತನ್ನ ಬಹುನಿರೀಕ್ಷಿತ ಹಾನರ್ 70 5ಜಿ (Honor 70 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬಲಿಷ್ಠವಾದ ಆಕ್ಟಾ–ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ನೀಡಲಾಗಿದೆ. ಇದರಲ್ಲದೆ ಸೋನಿ ಸೆನ್ಸಾರ್ ಹೊಂದಿರುವ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೌಲಭ್ಯ ಕೂಡ ಇದೆ. ಹಾಗಾದರೆ ಇದರ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಹಾನರ್ 70 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದೆ. ಸದ್ಯಕ್ಕೆ ಮಲೇಷ್ಯಾದಲ್ಲಿ ರಿಲೀಸ್ ಆಗಿರುವ ಇದರ 8GB RAM + 256GB ಸ್ಟೋರೇಜ್ ಮಾದರಿಗೆ MYR 1,999, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 35,600ರೂ. ಎನ್ನಬಹುದು.
ಈ ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ನೋಡುವುದಾದರೆ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು 120Hz ರಿಫ್ರೆಶ್ ರೇಟ್ ನೀಡಲಾಗಿದೆ.
ಆಕ್ಟಾ–ಕೋರ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12-ಆಧಾರಿತ ಮ್ಯಾಜಿಕ್ UI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾನರ್ 70 5G ಸ್ಮಾರ್ಟ್ಫೋನ್ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾ 54 ಮೆಗಾಪಿಕ್ಸೆಲ್ನಲ್ಲಿದೆ. ಇದು ಸೋನಿ IMX800 ಸೆನ್ಸಾರ್ ಹೊಂದಿದೆ.
ಇದನ್ನೂ ಓದಿ
ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
4,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಇದಕ್ಕೆ ತಕ್ಕಂತೆ 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೇಸ್ ಅನ್ಲಾಕ್ ಫೀಚರ್ಸ್ ಇದರಲ್ಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.2, GPS, AGPS, OTG, USB ಟೈಪ್-C ಪೋರ್ಟ್ ನೀಡಲಾಗಿದೆ.