ಕೆಲ ಸಮಯದ ವರೆಗೆ ಭಾರತದಲ್ಲಿ ಸ್ಥಗಿತಗೊಂಡಿದ್ದ ಹಾನರ್ ಕಂಪನಿಯ ಸ್ಮಾರ್ಟ್ಫೋನ್ಗಳು ಕಳೆದ ವರ್ಷಾಂತ್ಯಕ್ಕೆ ಹಾನರ್ 90 (Honor 90 5G) ಸ್ಮಾರ್ಟ್‌ಫೋನ್‌ನೊಂದಿಗೆ ಮರಳಿತು. 200 ಮೆಗಾ ಫಿಕ್ಸೆಲ್ ಕ್ಯಾಮೆರಾ ಫೋನಿನ ಮೂಲಕ ಭಾರತಕ್ಕೆ ಕಮ್ಬ್ಯಾಕ್ ಮಾಡಿದ ಹಾನರ್ ಇದೀಗ ಈ ಫೋನನ್ನು ಭರ್ಜರಿ ರಿಯಾಯಿತಿ ದರಕ್ಕೆ ಮಾರಾಟ ಮಾಡುತ್ತಿದೆ. 37,999 ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಲಾದ ಹಾನರ್ 90 ಇದೀಗ ನಡೆಯುತ್ತಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ರೂ. 20,000 ಕ್ಕೆ ಖರೀದಿಸಬಹುದು.
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗಿದೆ. ಈ ಮಾರಾಟ ಸಮಾರಂಭದಲ್ಲಿ ಹಾನರ್ 90 ಸ್ಮಾರ್ಟ್‌ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದರ 8/256GB ರೂಪಾಂತರಕ್ಕೆ 28,999 ಮತ್ತು 12/512GB ರೂಪಾಂತರಕ್ಕೆ 30,999 ರೂ. ಇದೆ. ಇದರ ಮೇಲೆ ಅಮೆಜಾನ್ ರೂ. 6,000 ರಿಯಾಯಿತಿ ನೀಡುತ್ತಿದೆ. ಈ ಮೂಲಕ 22,999 ರೂ. ಮತ್ತು 24,999 ರೂ. ಗಳಿಸಿಗೆ ಇದನ್ನು ಪಡೆಯಬಹುದು.
ಇದಲ್ಲದೆ, SBI ಕಾರ್ಡ್ ಬಳಕೆದಾರರು ವಿವಿಧ ರಿಯಾಯಿತಿಗಳನ್ನು ಪಡೆಯುತ್ತಾರೆ. ಕ್ರೆಡಿಟ್ ಕಾರ್ಡ್ EMI ನಲ್ಲಿ ಗರಿಷ್ಠ ರಿಯಾಯಿತಿ ರೂ. 3,750 ವರೆಗೆ ಇದೆ. ಇದು ಫೋನ್‌ನ ಬೆಲೆಯನ್ನು ಅದರ ಮೂಲ ಬೆಲೆಗಿಂತ ಕಡಿಮೆ ಮಾಡಿ 19,249 ರೂ. ಗೆ ಇಳಿಯುತ್ತದೆ. ಆದರೆ, ಬಾಕ್ಸ್‌ನಲ್ಲಿ ಯಾವುದೇ ಚಾರ್ಜರ್ ಇರುವುದಿಲ್ಲ. ಹೀಗಿದ್ದರೂ ಹಾನರ್ ಬ್ರ್ಯಾಂಡ್ ಅಮೆಜಾನ್ ಮೂಲಕ 30W ಅಡಾಪ್ಟರ್ ಅನ್ನು ಉಚಿತವಾಗಿ ಒದಗಿಸುತ್ತದೆ. ದೀಪಾವಳಿ ನಂತರ ಈ ಸ್ಮಾರ್ಟ್‌ಫೋನ್ ರಿಯಾಯಿತಿ ಪಡೆಯುತ್ತಿರುವುದು ಇದೇ ಮೊದಲು.
ಡಿಸ್ಪ್ಲೇ: ಹಾನರ್ 90 6.7-ಇಂಚಿನ 1.5K ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1,600 nits ಗರಿಷ್ಠ ಬ್ರೈಟ್‌ನೆಸ್ ಮತ್ತು 3840Hz PWM ಡಿಮ್ಮಿಂಗ್ ಟೆಕ್ ಅನ್ನು ಒಳಗೊಂಡಿದೆ.
ಪ್ರೊಸೆಸರ್: ಈ ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 7 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
RAM ಮತ್ತು ಸಂಗ್ರಹಣೆ: ಇದು 8GB ಅಥವಾ 12GB LPDDR5 RAM ಜೊತೆಗೆ ಕ್ರಮವಾಗಿ 256GB ಮತ್ತು 512GB UFS 3.1 ಸಂಗ್ರಹಣೆಯಲ್ಲಿ ಬರುತ್ತದೆ.
ಕ್ಯಾಮೆರಾಗಳು: ಟ್ರಿಪಲ್ ಹಿಂಬದಿಯ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 200MP ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್ ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ, ಚಾರ್ಜಿಂಗ್: ಈ ಸಾಧನವು 5,000mAh ಬ್ಯಾಟರಿಯನ್ನು ಹೊಂದಿದೆ.
ಸಾಫ್ಟ್‌ವೇರ್: ಆಂಡ್ರಾಯ್ಡ್ 13 ಆಧಾರಿತ MagicOS 7.1 ನೊಂದಿಗೆ ರನ್ ಆಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ