Honor Play 7T: ಮಾರುಕಟ್ಟೆಗೆ ಬಂತು ಹಾನರ್ ನೂತನ ಸ್ಮಾರ್ಟ್​ಫೋನ್

ಗ್ಯಾಜೆಟ್ ಮತ್ತು ಟೆಕ್ ಲೋಕದಲ್ಲಿ ಚೀನಾ ಮೂಲದ ಕಂಪನಿಗಳ ವಿವಿಧ ಬ್ರ್ಯಾಂಡ್​ಗಳ ಸ್ಮಾರ್ಟ್​ಫೋನ್​ಗಳದ್ದೇ ಹವಾ. ಅದರಲ್ಲೂ ಏಷ್ಯಾದ ಅತಿದೊಡ್ಡ ಸ್ಮಾರ್ಟ್​ಫೋನ್ ಬಳಕೆದಾರ ದೇಶ ಭಾರತದಲ್ಲಿ ಹೊಸ ಹೊಸ ಮಾದರಿಗಳು ಒಂದರ ಹಿಂದೆ ಒಂದರಂತೆ ಲಗ್ಗೆ ಇರಿಸುತ್ತಿವೆ. ಹಾನರ್ ಕಂಪನಿಯ ಹೊಸ ಫೋನ್ ಪರಿಚಯ ಇಲ್ಲಿದೆ.

Honor Play 7T: ಮಾರುಕಟ್ಟೆಗೆ ಬಂತು ಹಾನರ್ ನೂತನ ಸ್ಮಾರ್ಟ್​ಫೋನ್
ಹಾನರ್ ಪ್ಲೇ 7T ಸ್ಮಾರ್ಟ್​ಫೋನ್
Follow us
ಕಿರಣ್​ ಐಜಿ
|

Updated on:Mar 30, 2023 | 5:23 PM

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಈಗ ವಿವಿಧ ಸ್ಮಾರ್ಟ್​ಫೋನ್ ಬಿಡುಗಡೆಯ ಸುಗ್ಗಿ. ವಿವಿಧ ಬ್ರ್ಯಾಂಡ್​ಗಳು ದಿನವೂ ಹೊಸ ಹೊಸ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಹೊಸ ಫೋನ್ ಪರಿಚಯಿಸುವಲ್ಲಿ ಹಾನರ್ ಕಂಪನಿ ಕೂಡ ಹಿಂದೆ ಬಿದ್ದಿಲ್ಲ. ಈ ಬಾರಿ ಹಾನರ್ ಪ್ಲೇ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಹಾನರ್ ಪ್ಲೇ 7T ಸ್ಮಾರ್ಟ್​ಫೋನ್ (Honor Play 7T) ಬಿಡುಗಡೆಯಾಗಿದೆ. ನೂತನ ಫೋನ್ ವೈಶಿಷ್ಟ್ಯಗಳು ಮತ್ತು ವಿವರ ಇಲ್ಲಿದೆ. ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ಈ ಫೋನ್ ಲಭ್ಯವಾಗಲಿದೆ.

ಹಾನರ್ ಪ್ಲೇ 7T ಹೊಸ ಸ್ಮಾರ್ಟ್​ಫೋನ್

ಹಾನರ್ ಕಂಪನಿ ಪರಿಚಯಿಸಿರುವ ಆಕರ್ಷಕ ವಿನ್ಯಾಸದ ಪ್ಲೇ 7T, 6.74 ಇಂಚಿನ ಡಿಸ್​ಪ್ಲೇ ಹೊಂದಿದೆ. ಹಾನರ್ ಪ್ಲೇ 7T ಸ್ಮಾರ್ಟ್​ಫೋನ್​ನಲ್ಲಿ MediaTek Dimensity 6020 ಪ್ರೊಸೆಸರ್ ಮತ್ತು Mali-G57 GPU ಗ್ರಾಫಿಕ್ಸ್ ಬೆಂಬಲವಿದೆ. ಜತೆಗೆ, ಫೋಟೊಗ್ರಫಿ ಪ್ರಿಯರಿಗಾಗಿ ನೂತನ ಮಾದರಿಯಲ್ಲಿ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್+ 2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಸಹಿತ ಎರಡು ಕ್ಯಾಮೆರಾ ವಿನ್ಯಾಸ ಹೊಂದಿದೆ. ಉಳಿದಂತೆ, ಹಾನರ್ ಪ್ಲೇ 7T ಸ್ಮಾರ್ಟ್​ಫೋನ್ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 6,000mAh ಬ್ಯಾಟರಿ ಜತೆಗೆ 22.5W ಫಾಸ್ಟ್​ ಚಾರ್ಜಿಂಗ್ ಬೆಂಬಲವನ್ನು ಹೊಸ ಹಾನರ್ ಸ್ಮಾರ್ಟ್​ಫೋನ್ ಹೊಂದಿದೆ.

ಹಾನರ್ ಪ್ಲೇ 7T ವೈಶಿಷ್ಟ್ಯಗಳು

8GB RAM ಮತ್ತು 128GB ಹಾಗೂ 256GB ಎಂಬ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಹೊಸ ಹಾನರ್ ಪ್ಲೇ 7T ಸ್ಮಾರ್ಟ್​ಫೋನ್ ಲಭ್ಯವಾಗಲಿದೆ. ನೂತನ ಫೋನ್ ಮ್ಯಾಜಿಕ್ ನೈಟ್ ಬ್ಲ್ಯಾಕ್, ಟೈಟಾನಿಯಂ ಸ್ಕೈ ಸಿಲ್ವರ್ ಮತ್ತು ಸೀ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಪ್ರಸ್ತುತ ಆರಂಭಿಕ ಹಂತದಲ್ಲಿ ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹಾನರ್ ಪ್ಲೇ 7T ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ದೊರೆಯಲಿದೆ. ಕಂಪನಿ, ಭಾರತದಲ್ಲಿ ಲಭ್ಯತೆ ಮತ್ತು ಬೆಲೆ ವಿವರವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Thu, 30 March 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ