AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tree Scooter: ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!

ಮಂಗಳೂರಿನ ನಿವಾಸಿಯಾಗಿರುವ ರೈತ ಗಣಪತಿ ಭಟ್ ಅವರು ತಯಾರಿಸಿದ ವಿನೂತನವಾದ 'ಟ್ರೀ ಸ್ಕೂಟರ್' ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರಗಳನ್ನು ಏರಲು ಸಹಾಯ ಮಾಡುತ್ತದೆ, ಅಲ್ಲದೆ ರೈತರ ಹಣವನ್ನು ಉಳಿಸುತ್ತದೆ.

Tree Scooter: ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ 'ಟ್ರೀ ಸ್ಕೂಟರ್'!
ಟ್ರೀ ಸ್ಕೂಟರ್Image Credit source: HISTORY TV18.
TV9 Web
| Edited By: |

Updated on: Mar 31, 2023 | 7:00 AM

Share

ಮುಖ್ಯಾಂಶಗಳು

  • ಮಂಗಳೂರಿನ ನಿವಾಸಿಯಾಗಿರುವ ರೈತ ಗಣಪತಿ ಭಟ್ ಅವರು ತಯಾರಿಸಿದ ವಿನೂತನವಾದ 'ಟ್ರೀ ಸ್ಕೂಟರ್' ಕೆಲವೇ ಸೆಕೆಂಡುಗಳಲ್ಲಿ ಅರೆಕಾ ಮರಗಳನ್ನು ಏರಲು ಸಹಾಯ ಮಾಡುತ್ತದೆ, ಅಲ್ಲದೆ ರೈತರ ಹಣವನ್ನು ಉಳಿಸುತ್ತದೆ.
  • ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಅದು ಸತ್ಯವೂ ಹೌದು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ 'ಟ್ರೀ ಸ್ಕೂಟರ್' ಕಂಡುಹಿಡಿದಿದ್ದಾರೆ.
  • ಯಂತ್ರವು ಆಸನ ಮತ್ತು ಸೀಟ್-ಬೆಲ್ಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕೈಗಳನ್ನು ಬಳಸದೆ ಊಪಯೋಗಿಸಬಹುದಾಗಿದ್ದು, ಬಳಸಲು ಸುಲಭವಾಗಿದೆ. ಕಾರ್ಮಿಕರು ಇಲ್ಲದಿದ್ದರೂ ನಾವೇ ಊಪಯೋಗಿಸಬಹುದಾಗಿದೆ.

ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಅದು ಸತ್ಯವೂ ಹೌದು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ ‘ಟ್ರೀ ಸ್ಕೂಟರ್’ ಕಂಡುಹಿಡಿದಿದ್ದಾರೆ. ಕಾರ್ಮಿಕ ಶಕ್ತಿ ಮತ್ತು ಅಡಿಕೆ ಮರಗಳ ಅಕಾಲಿಕ ನಿರ್ವಹಣೆಯು ಕೃಷಿ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಂತರವನ್ನು ಮನಗಂಡ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ, ಇದು ಕಾರ್ಮಿಕರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದಿನಕ್ಕೆ 300 ಅರೆಕಾ ತಾಳೆಗಳನ್ನು ಕಟಾವು ಮಾಡಲು ರೈತರಿಗೆ ಸಹಾಯ ಮಾಡುತ್ತದೆ.

ಟ್ರೀ ಸ್ಕೂಟರ್​ ಯಂತ್ರದ ವಿಶೇಷತೆ:

ಯಂತ್ರವು ಆಸನ ಮತ್ತು ಸೀಟ್-ಬೆಲ್ಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕೈಗಳನ್ನು ಬಳಸದೆ ಊಪಯೋಗಿಸಬಹುದಾಗಿದ್ದು, ಬಳಸಲು ಸುಲಭವಾಗಿದೆ. ಕಾರ್ಮಿಕರು ಇಲ್ಲದಿದ್ದರೂ ನಾವೇ ಊಪಯೋಗಿಸಬಹುದಾಗಿದೆ. ಇದರಿಂದ ಅವಲಂಬನೆಯೂ ಕಡಿಮೆಯಾಗುತ್ತದೆ.ಅಲ್ಲದೆ ಇದು ರೈತರ 20 ಪ್ರತಿಶತದಷ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದು ಬೇರೆ ಎಲ್ಲ ವಿಧಾನಗಳಲ್ಲಿ ಕೊಯ್ಲು ಮಾಡಿದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತ ಪಡೆಯಲು ಸಹಾಯವಾಗುತ್ತದೆ.

ಇದನ್ನೂ ಓದಿ: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ

ಸಾಂಪ್ರದಾಯಿಕ ವಿಧಾನದಲ್ಲಿ ದಿನಕ್ಕೆ ಕಡಿಮೆ ಮರಗಳಿಗೆ ಏರುವುದರಿಂದ ಕಾರ್ಮಿಕರು ವಾರದಲ್ಲಿ ನಾಲ್ಕರಿಂದ ಐದು ದಿನಗಳವರೆಗೆ ಕೆಲಸ ಮಾಡುತ್ತಿದ್ದರು. ಆದರೆ ಇಂದು ಒಬ್ಬನೇ ಎರಡು ದಿನದಲ್ಲಿ ಕೆಲಸ ಪೂರ್ಣಗೊಳಿಸಬಲ್ಲ. ಇದರಿಂದ ಕೂಲಿ ವೆಚ್ಚದಲ್ಲಿ ವಾರಕ್ಕೆ ಸುಮಾರು 24,000 ರೂಪಾಯಿ ಉಳಿತಾಯವಾಗುತ್ತದೆ ಎಂದು ಗಣಪತಿ ಹೇಳಿದ್ದಾರೆ.

ಯಾವುದೇ ತಾಂತ್ರಿಕ ಅಥವಾ ಎಂಜಿನಿಯರಿಂಗ್ ಹಿನ್ನೆಲೆಯಿಲ್ಲದ ಅವರು ಈ ಸ್ಕೂಟರ್ ಅನ್ನು ತಯಾರಿಸಿದಾಗ ಗ್ರಾಮಸ್ಥರು ಅವರನ್ನು ಹುಚ್ಚ ಎಂದು ಕರೆದಿದ್ದರಂತೆ ಆದರೆ ಅವರ ಆವಿಷ್ಕಾರವು ವೀಳ್ಯದೆಲೆ ಕೊಯ್ಲು ಮಾಡುವಲ್ಲಿನ ತೊಂದರೆಗಳನ್ನು ನಿಭಾಯಿಸಲು ಸಹಾಯ ಮಾಡಿದಾಗ ಈಗ ಜನರಿಗೆ ಅರ್ಥವಾಗಿದೆ ಎನ್ನುತ್ತಾರೆ ಗಣಪತಿ ಭಟ್.

ಲೇಖನ: ಪ್ರೀತಿ ಭಟ್​, ಗುಣವಂತೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ