ನಾನು ಇಂಜಿನಿಯರ್ ಆಗಬೇಕು ಅಥವಾ ನಾನು ಇಂಜಿನಿಯರ್ ಆಗಬೇಕಿತ್ತು. ಹೀಗೆ ಕನಸು ಕಂಡವರು ಅನೇಕರಿದ್ದಾರೆ. ಆದರೆ, ಕೆಲವು ಕಾರಣಗಳಿಂದ ಸಾಧ್ಯವಾಗದೆ ಅದು ಕನಸಾಗಿಯೇ ಉಳಿದಿರಬಹುದು. ಇಂಥವರಿಗೆ ಕನ್ನಡಿಗರೇ ಒಂದು ವಿಶೇಷ ವೇದಿಕೆ ಕಲ್ಪಿಸುತ್ತಿದ್ದಾರೆ. ಅದುವೆ ಬಾ ಗುರು ಟೆಕ್ಕಿ ಆಗು (Baa Guru Techie Aagu) ಎಂಬ ತಂಡ.
ಹೌದು, ನೀವು ಬಿಎ, ಬಿಎಸ್ಸಿ ಅಥವಾ ಬಿ.ಕಾಮ್ ಯಾವುದೇ ಕೋರ್ಸ್ ಕಲಿತಿದ್ದರೂ ಕೇವಲ 60 ದಿನಗಳಲ್ಲಿ ಇಂಜಿನಿಯರ್ ಆಗಬಹುದು. ವಿಶೇಷವಾಗಿ ಕನ್ನಡಿಗರಿಗೋಸ್ಕರವೇ ಕನ್ನಡದವರು ಮಾಡುತ್ತಿರುವ ವಿನೂತನ ಪ್ರಯತ್ನ ಇದಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತವರಿಗೆ ನಾವು ಸಹಾಯ ಮಾಡುತ್ತೇವೆ ಎಂತಿದೆ ಬಾ ಗುರು ಟೆಕ್ಕಿ ಆಗು ಟೀಮ್. ನೀವು ಟೆಕ್ಕಿ ಆಗಬೇಕು ಎಂದಿದ್ದರೆ ಇವರು ನಿಮ್ಮನ್ನ ತಯಾರು ಮಾಡುತ್ತಾರೆ. ಅದುಕೂಡ ಕೇವಲ 60 ದಿನಗಳಲ್ಲಿ ಎಂಬುದು ವಿಶೆಷ. ಈ ತಂಡದ ಬಗ್ಗೆ ಸದ್ಯಕ್ಕೆ ಇಷ್ಟೇ ಮಾಹಿತಿ ತಿಳಿದುಬಂದಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ಈಗಾಗಲೇ ಇವರು ತಮ್ಮ ಕೆಲಸವನ್ನು ಶುರುಕೂಡ ಮಾಡಿಕೊಂಡಿದ್ದಾರೆ.
How To: ಪಾಡ್ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?
WhatsAppನಲ್ಲಿ ನೀವು ಆನ್ಲೈನ್ ಇದ್ದರೂ ಆಫ್ಲೈನ್ ತೋರಿಸುವಂತೆ ಮಾಡೋದು ಹೇಗೆ?