AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಕಳೆದುಹೋದ ಫೋನ್ ಸ್ವಿಚ್ ಆಫ್ ಆಗಿದ್ರೆ ಕಂಡುಹಿಡಿಯುವುದು ಹೇಗೆ?

Find My Device: ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

Tech Tips: ಕಳೆದುಹೋದ ಫೋನ್ ಸ್ವಿಚ್ ಆಫ್ ಆಗಿದ್ರೆ ಕಂಡುಹಿಡಿಯುವುದು ಹೇಗೆ?
Find My Phone
Vinay Bhat
|

Updated on: Mar 18, 2024 | 12:12 PM

Share

ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Smartphone) ಬಳಕೆದಾರರು ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಖಾಲಿಯಾದರೆ ಅಥವಾ ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅನ್ನು ಹುಡುಕುವುದು. ಹೀಗಾದಾಗ ಫೋನ್ ಹುಡುಕುವುದು ಒಂಟೆಯ ಬಾಯಿಯಲ್ಲಿ ಜೀರಿಗೆಯನ್ನು ಕಂಡುಕೊಂಡಂತೆ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇದಕ್ಕಾಗಿ ಬಳಕೆದಾರರು ಯಾವುದೇ ಪ್ರಯತ್ನವನ್ನು ಪಡಬೇಕಾಗಿಲ್ಲ.

ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ. ಗೂಗಲ್ ಮೊದಲು ತನ್ನ ಪಿಕ್ಸೆಲ್ ಸರಣಿಯಲ್ಲಿ ಈ ನವೀಕರಣವನ್ನು ಹೊರತರುತ್ತದೆ. ಉಳಿದ ಆಂಡ್ರಾಯ್ಡ್ ಬಳಕೆದಾರರು ಈ ವೈಶಿಷ್ಟ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ನೀವು ಯೂಟ್ಯೂಬ್ ಚಾನೆಲ್ ತೆರೆಯುವ ಪ್ಲಾನ್​ನಲ್ಲಿದ್ದೀರಾ?: ಈ ವಿಷಯ ನೆನಪಿನಲ್ಲಿಡಿ

ಗೂಗಲ್ ಕಳೆದ ವರ್ಷ ಆಂಡ್ರಾಯ್ಡ್ 14 ಸಿಸ್ಟಮ್ ಅನ್ನು ಪ್ರಾರಂಭಿಸಿತ್ತು. ಈಗ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

ಹಾಗೆಯೆ ಆಂಡ್ರಾಯ್ಡ್ 15 ಅಪ್‌ಡೇಟ್‌ನಲ್ಲಿ ಫೈಂಡ್ ಮೈ ವೈಶಿಷ್ಟ್ಯವನ್ನು ಗೂಗಲ್ ನಿಲ್ಲಿಸುತ್ತದೆ. ಈ ವೈಶಿಷ್ಟ್ಯವು ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳು ಮತ್ತು ಗೂಗಲ್​ನ ಮುಂಬರುವ ಯಾವುದೇ ಫೋನ್‌ಗಳಲ್ಲಿ ಲಭ್ಯವಿರುವುದಿಲ್ಲ.

ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಆದಾಗ್ಯೂ, ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಫೋನ್ ಸ್ವಿಚ್ ಆಫ್ ಆದಾಗ ಬ್ಲೂಟೂತ್ ನಿಯಂತ್ರಣವು ವಿದ್ಯುತ್ ಪೂರೈಕೆಯನ್ನು ಪಡೆದು ಕೆಲಸ ಮಾಡುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಬಲಿಷ್ಠ ಬ್ಯಾಟರಿ ಬ್ಯಾಕಪ್ ಸ್ಮಾರ್ಟ್​ಫೋನ್‌ ಹುಡುಕುತ್ತಿರುವಿರಾ?: ಇಲ್ಲಿದೆ ಅತ್ಯುತ್ತಮ ಆಯ್ಕೆಗಳು

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಆದರೆ ಗೂಗಲ್ ಈ ವರ್ಷದ ಅಂತ್ಯದಲ್ಲಿ ಈ ಅಪ್ಡೇಟ್ ನೀಡಬಹುದು ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ