Tech Tips: ಜಿಯೋ, ಏರ್ಟೆಲ್ ಹೊಸ ಸಿಮ್ ಕಾರ್ಡ್ ಅನ್ನು ಮನೆಗೇ ಆರ್ಡರ್ ಮಾಡುವುದು ಹೇಗೆ?

Get Sim Card Online: ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಅಥವಾ ವೊಡಾಫೋನ್-ಐಡಿಯಾದಂತಹ ಯಾವುದೇ ಕಂಪನಿಯಿಂದ ನೀವು ನೇರವಾಗಿ ಸಿಮ್ ಕಾರ್ಡ್ ಅನ್ನು ಮನೆಗೆ ಆರ್ಡರ್ ಮಾಡಬಹುದು. ಈ ಮೂರೂ ಕಂಪನಿಗಳು ಸಿಮ್ ಕಾರ್ಡ್‌ಗಳನ್ನು ಹೋಮ್ ಡೆಲಿವರಿ ನೀಡುತ್ತವೆ.

Tech Tips: ಜಿಯೋ, ಏರ್ಟೆಲ್ ಹೊಸ ಸಿಮ್ ಕಾರ್ಡ್ ಅನ್ನು ಮನೆಗೇ ಆರ್ಡರ್ ಮಾಡುವುದು ಹೇಗೆ?
Airtel JIO Sim
Follow us
Vinay Bhat
|

Updated on:Mar 04, 2024 | 1:07 PM

ದೇಶದಲ್ಲಿ ಸಿಮ್ ಕಾರ್ಡ್ (Sim Card) ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ಕಡಿವಾಣಕ್ಕೆ ಸರ್ಕಾರ ಒಂದಲ್ಲ ಒಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದರೆ ಯಾವುದೇ ಫಲ ಸಿಕ್ಕಿಲ್ಲ. ದೂರಸಂಪರ್ಕ ಇಲಾಖೆ ಅಥವಾ DoT ಕಾಗದ ಆಧಾರಿತ KYC ಪ್ರಕ್ರಿಯೆಯನ್ನು ನಿಲ್ಲಿಸಿದೆ. ಈ ನಿಯಮವು ಜನವರಿ 1, 2024 ರಿಂದ ಜಾರಿಗೆ ಬಂದಿದೆ. ಪರಿಶೀಲನಾ ಪ್ರಕ್ರಿಯೆಗಾಗಿ ಟೆಲಿಕಾಂ ಕಂಪನಿಗಳ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸಿಮ್ ಕಾರ್ಡ್ ವಂಚನೆಯನ್ನು ತಡೆಯಲು ಡಾಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸದ್ಯ ಮೊದಲಿನಂತೆ ಹೊಸ ಸಿಮ್ ಕಾರ್ಡ್ ಖರೀದಿಸಲು ಬಯಸಿದರೆ, ಅದು ನಿಮ್ಮ ಮನೆಗೇ ಬರುತ್ತದೆ.

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಅಥವಾ ವೊಡಾಫೋನ್-ಐಡಿಯಾದಂತಹ ಯಾವುದೇ ಕಂಪನಿಯಿಂದ ನೀವು ನೇರವಾಗಿ ಸಿಮ್ ಕಾರ್ಡ್ ಅನ್ನು ಮನೆಗೆ ಆರ್ಡರ್ ಮಾಡಬಹುದು. ಈ ಕಂಪನಿಗಳು ಸಿಮ್ ಕಾರ್ಡ್‌ಗಳನ್ನು ಹೋಮ್ ಡೆಲಿವರಿ ನೀಡುತ್ತವೆ. ಆದರೆ ಇದು ಎಲ್ಲ ವಲಯಕ್ಕೆ ಲಭ್ಯವಿಲ್ಲ. ಮನೆಗೇ ಸಿಮ್ ಕಾರ್ಡ್ ಬರುವಂತೆ ಆರ್ಡರ್ ಮಾಡುವುದು ಹೇಗೆ ಎಂದು ನೋಡೋಣ?.

ನೀವು ತೊಂದರೆಗೆ ಸಿಲುಕಿದ್ದರೆ ಚಿಂತಿಸಬೇಕಿಲ್ಲ: ನೇರವಾಗಿ ಪ್ರಧಾನಿ ಮೋದಿಗೆ ದೂರು ನೀಡಿ, ಹೇಗೆ ಗೊತ್ತೇ?

ರಿಲಯನ್ಸ್ ಜಿಯೋ ಸಿಮ್ ಪಡೆಯುವುದು ಹೇಗೆ?

  • ರಿಲಯನ್ಸ್ ಜಿಯೋ ವೆಬ್‌ಸೈಟ್‌ಗೆ ಹೋಗಿ (https://www.jio.com/) ಮತ್ತು ಸಿಮ್ ಹೋಮ್ ಡೆಲಿವರಿ ಆಯ್ಕೆಯನ್ನು ಆರಿಸಿ.
  • ಇಲ್ಲಿ ನಿಮ್ಮ ಹೆಸರು, ಪ್ರಸ್ತುತ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಜನರೇಟ್ OTP ಕ್ಲಿಕ್ ಮಾಡಿ.
  • OTP ಪರಿಶೀಲಿಸಿದ ನಂತರ, ನಿಮಗೆ ಹೊಸ ಸಿಮ್ ಬೇಕೇ ಅಥವಾ ಹಳೆಯ ಸಂಖ್ಯೆಯನ್ನು ಪೋರ್ಟ್ ಮಾಡಬೇಕೆ ಎಂದು ನಿಮ್ಮನ್ನು ಕೇಳಲಾಗುತ್ತದೆ.
  • ನಿಮಗೆ ಬೇಕಾದುದನ್ನು ನೀವು ಆರಿಸಬೇಕಾಗುತ್ತದೆ.
  • ಈಗ ನೀವು ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಸಿಮ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
  • ನಂತರ ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ವಿತರಣಾ ಸ್ಲಾಟ್ ಅನ್ನು ಆಯ್ಕೆ ಮಾಡಿ (ಸಮಯವನ್ನು ಬರೆಯಲಾಗುತ್ತದೆ).
  • ನಂತರ ನೀವು ಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
  • ನಿಗದಿತ ಸಮಯದಲ್ಲಿ, ಜಿಯೋ ಸಿಬ್ಬಂದಿ ಸಿಮ್‌ನೊಂದಿಗೆ ನಿಮ್ಮ ವಿಳಾಸಕ್ಕೆ ಬರುತ್ತಾರೆ ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ.
  • ಆಯ್ದ ಪ್ಲಾನ್‌ನ ಮೊತ್ತವನ್ನು ಪಾವತಿಸಿದ ನಂತರವೇ ನೀವು ಸಿಮ್ ಅನ್ನು ಪಡೆಯುತ್ತೀರಿ. ಹೋಮ್ ಡೆಲಿವರಿಗೆ ಪ್ರತ್ಯೇಕ ಶುಲ್ಕವಿಲ್ಲ.

ಭಾರತದಲ್ಲಿ ಇಂದು ಬರೋಬ್ಬರಿ 6,000mAh ಬ್ಯಾಟರಿಯ ಹೊಸ ಸ್ಯಾಮ್​ಸಂಗ್ ​ಫೋನ್ ಬಿಡುಗಡೆ

ಏರ್‌ಟೆಲ್ ಸಿಮ್ ಪಡೆಯುವುದು ಹೇಗೆ?

  • ಏರ್‌ಟೆಲ್ ವೆಬ್‌ಸೈಟ್ airtel.in ಗೆ ಭೇಟಿ ನೀಡಿ. ಇಲ್ಲಿ ನೀಡಿರುವ ಪ್ರಿಪೇಯ್ಡ್ ಆಯ್ಕೆಗೆ ಹೋಗಿ ಮತ್ತು ನ್ಯೂ ಪ್ರಿಪೇಯ್ಡ್ ಸಿಮ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಮೊದಲ ರೀಚಾರ್ಜ್ ಯೋಜನೆಯನ್ನು ಆಯ್ಕೆಮಾಡಿ ಮತ್ತು ಹೆಸರು, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಈಗ ಹೊಸ ಸಿಮ್ ಬೇಕೇ ಅಥವಾ ಹಳೆಯ ಸಂಖ್ಯೆಯನ್ನು ಪೋರ್ಟ್ ಮಾಡಬೇಕೆ ಎಂದು ಕೇಳಲಾಗುತ್ತದೆ.
  • ಇಲ್ಲಿ ನಿಮಗೆ ಬೇಕಾದುದನ್ನು ನೀವು ಆರಿಸಬೇಕಾಗುತ್ತದೆ.
  • ಬಳಿಕ ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
  • ನಿಗದಿತ ಸಮಯದಲ್ಲಿ, ಏರ್‌ಟೆಲ್ ಉದ್ಯೋಗಿ ಸಿಮ್‌ನೊಂದಿಗೆ ನಿಮ್ಮ ವಿಳಾಸಕ್ಕೆ ಬರುತ್ತಾರೆ. ದಾಖಲೆಗಳನ್ನು ಪರಿಶೀಲಿಸುತ್ತಾರೆ.
  • ಇಲ್ಲಿ ಸಿಮ್ ಕಾರ್ಡ್ ವಿತರಣೆಗೆ 100 ರೂಪಾಯಿಗಳನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Mon, 4 March 24

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ