Redmi 12 4G Price Cut: ರೆಡ್ಮಿ ಪ್ರಿಯರಿಗೆ ಬಂಪರ್: ನೋಟ್ 12 4G ಮತ್ತು ರೆಡ್ಮಿ 12 4G ಬೆಲೆಯಲ್ಲಿ ಭರ್ಜರಿ ಇಳಿಕೆ

Redmi Note 12 4G Price Cut: ಶವೋಮಿ ತನ್ನ ರೆಡ್ಮಿ ನೋಟ್ 12 4G ಮತ್ತು ರೆಡ್ಮಿ 12 4G ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್, 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬೆಲೆ ಕಡಿತವಾಗಿದೆ. ಇದೀಗ ಈ ಫೋನ್ 10,000 ರೂ. ಫೋನ್‌ಗಳಿಗೆ ಪ್ರಮುಖ ಸ್ಪರ್ಧಿಯಾಗುವ ಸಾಧ್ಯತೆಯಿದೆ.

Redmi 12 4G Price Cut: ರೆಡ್ಮಿ ಪ್ರಿಯರಿಗೆ ಬಂಪರ್: ನೋಟ್ 12 4G ಮತ್ತು ರೆಡ್ಮಿ 12 4G ಬೆಲೆಯಲ್ಲಿ ಭರ್ಜರಿ ಇಳಿಕೆ
Redmi 12 4G
Follow us
Vinay Bhat
|

Updated on: Mar 03, 2024 | 2:57 PM

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ರೆಡ್ಮಿ ನೋಟ್ 12 4G (Redmi 12 4G) ಮತ್ತು ರೆಡ್ಮಿ 12 4G ಬೆಲೆಗಳನ್ನು ಕಡಿತಗೊಳಿಸಿದೆ. ಇದೀಗ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾದ ನೋಟ್ 12 4G ಸ್ಮಾರ್ಟ್‌ಫೋನ್, 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬೆಲೆ ಕಡಿತವಾಗಿದೆ. ಇದೀಗ 10,000 ರೂ. ಫೋನ್‌ಗಳಿಗೆ ಪ್ರಮುಖ ಸ್ಪರ್ಧಿಯಾಗುವ ಸಾಧ್ಯತೆಯಿದೆ. ಈ ಎರಡು ಫೋನ್‌ಗಳ ನೂತನ ಬೆಲೆ ಎಷ್ಟು?, ಇವುಗಳ ಫೀಚರ್ಸ್ ಏನು? ಎಂಬುದನ್ನು ನೋಡೋಣ.

ರೆಡ್ಮಿ ನೋಟ್ 12 4G

  • ಈ ಫೋನ್‌ನ ಬೆಲೆ ಪ್ರಸ್ತುತ 12,999 ರೂ. ಆಗಿದೆ. ಇದಕ್ಕೂ ಮುನ್ನ ರೆಡ್ಮಿ ನೋಟ್ 12 4G ಬೆಲೆ 13,999 ರೂ. ಗಳಿಗೆ ಮಾರಾಟವಾಗುತ್ತಿತ್ತು. ಇದರ ಬೆಲೆಯಲ್ಲಿ 1,000 ರೂಪಾಯಿ ಕಡಿಮೆ ಮಾಡಲಾಗಿದೆ.
  • ರೆಡ್ಮಿ ನೋಟ್ 12 4G ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 685 ಪ್ರೊಸೆಸರ್ ಹೊಂದಿದೆ.
  • ಈ ಫೋನ್ 6.67 ಇಂಚಿನ AMOLED ಡಿಸ್​ಪ್ಲೇಯನ್ನು ಹೊಂದಿದ್ದು, ಇದು 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.
  • ಟ್ರಿಪಲ್ ಕ್ಯಾಮೆರಾ ಸೆಟಪ್ ಈ ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಲಭ್ಯವಿದೆ. ಇದು 50MP+8MP+2MP ಆಗಿದೆ. ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.
  • ಇದು 33-ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯನ್ನ ಹೊಂದಿದೆ.

ಇಂಟರ್ನೆಟ್ ಇಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಮೂವಿ, ವೆಬ್ ಸರಣಿ ವೀಕ್ಷಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

ರೆಡ್ಮಿ 12 4G

  • ರೆಡ್ಮಿ 12 4G ಫೋನ್ ಈ ಹಿಂದೆ 10,999 ರೂ. ಗೆ ಮಾರಾಟ ಆಗುತ್ತಿತ್ತು. ಇದೀಗ ಬೆಲೆ ಇಳಿಕೆಯ ನಂತರ ಈ ಫೋನ್ 10,499 ರೂ. ಗೆ ಮಾರಾಟ ಆಗುತ್ತಿದೆ.
  • ಈ ಫೋನ್ 6.79-ಇಂಚಿನ FHD+ ಡಿಸ್​ಪ್ಲೇ ಹೊಂದಿದೆ. ಇದು 90 Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಾಗಿದೆ.
  • ಇದು 18-ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000 mAh ಬ್ಯಾಟರಿಯನ್ನು ಹೊಂದಿದೆ.
  • ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್ ಅನ್ನು ಹೊಂದಿದೆ.
  • ನೀರು ಮತ್ತು ಧೂಳನ್ನು ತಡೆದುಕೊಳ್ಳುವಂತೆ ಮಾಡಲು ಐಪಿ53 ರೇಟಿಂಗ್ ನೀಡಲಾಗಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ