Tech Tips: ಇಂಟರ್ನೆಟ್ ಇಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಮೂವಿ, ವೆಬ್ ಸರಣಿ ವೀಕ್ಷಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ

Netflix Free Download: ಇಂಟರ್ನೆಟ್ ಇಲ್ಲದೆಯೂ ನೆಟ್‌ಫ್ಲಿಕ್ಸ್‌ನಲ್ಲಿ ಮೂವಿ, ವೆಬ್ ಸರಣಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಅದು ಹೇಗೆ?, ನೋಡೋಣ. ಇಲ್ಲಿ ತಿಳಿಸಲಾದ ಹಂತಗಳನ್ನು ಅನುಸರಿಸುವ ಮೂಲಕ, ಫೋನ್‌ನಲ್ಲಿ ಇಂಟರ್ನೆಟ್ ಇದ್ದರೂ ಅಥವಾ ಇಲ್ಲದಿದ್ದರೂ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ನಿಮ್ಮ ಆಯ್ಕೆಯ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಬಹುದು.

Tech Tips: ಇಂಟರ್ನೆಟ್ ಇಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ಮೂವಿ, ವೆಬ್ ಸರಣಿ ವೀಕ್ಷಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ
Netflix
Follow us
|

Updated on: Mar 03, 2024 | 11:43 AM

ತಮ್ಮ ಬಿಡುವಿನ ವೇಳೆಯಲ್ಲಿ ಮನರಂಜನೆಗಾಗಿ ಜನರು ಇಂಟರ್ನೆಟ್ ಮೂಲಕ ಓಟಿಟಿ (OTT) ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರಗಳು, ವೆಬ್ ಸರಣಿಗಳು, ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಆದರೆ ಬಳಕೆದಾರರು ಇಂಟರ್ನೆಟ್ ಸೌಲಭ್ಯವನ್ನು ಹೊಂದಿಲ್ಲದಿದ್ದಾಗ ಅಥವಾ ನೆಟ್​ವರ್ಕ್ ಕ್ಷೇತ್ರದಿಂದ ದೂರದಲ್ಲಿದ್ದಾಗ ಇದು ಯಾವುದನ್ನೂ ನೋಡಲು ಸಾಧ್ಯವಾಗುವುದಿಲ್ಲ. ಜನರ ಈ ತೊಂದರೆಗಳನ್ನು ಅರ್ಥಹಿಸಿರುವ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಪರಿಹಾರವನ್ನು ಒದಗಿಸಿದೆ. ಈ ಮೂಲಕ ಬಳಕೆದಾರರು ಇಂಟರ್ನೆಟ್ ಇಲ್ಲದೆಯೂ ನೆಟ್‌ಫ್ಲಿಕ್ಸ್‌ನಲ್ಲಿ ಮನರಂಜನೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಅದು ಹೇಗೆ?, ನೋಡೋಣ.

ಇಂಟರ್ನೆಟ್ ಇಲ್ಲದೆ ನೆಟ್‌ಫ್ಲಿಕ್ಸ್‌ನಲ್ಲಿ ವಿಡಿಯೋ ವೀಕ್ಷಿಸುವುದು ಹೇಗೆ?:

ನೆಟ್‌ಫ್ಲಿಕ್ಸ್ ಆಫ್‌ಲೈನ್ ಮೋಡ್‌ನಲ್ಲಿ ಚಲನಚಿತ್ರಗಳು, ವೆಬ್ ಸರಣಿಗಳು, ಧಾರಾವಾಹಿಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಇದಕ್ಕಾಗಿ, ನೀವು ಇಂಟರ್ನೆಟ್ ಇರುವಾಗ ನಿಮಗೆ ಬೇಕಾದ ವಿಡಿಯೋವನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ನಂತರ ನೀವು ಇಂಟರ್ನೆಟ್ ಇಲ್ಲದೆಯೂ ನೆಟ್‌ಫ್ಲಿಕ್ಸ್‌ನಲ್ಲಿ ಮನರಂಜನೆಯನ್ನು ಆನಂದಿಸಬಹುದು.

ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಮತ್ತೊಂದು ಆಕರ್ಷಕ ಬಜೆಟ್ ಸ್ಮಾರ್ಟ್​ಫೋನ್

ನೆಟ್‌ಫ್ಲಿಕ್ಸ್‌ನಲ್ಲಿ ಆಫ್​ಲೈನ್ ಡೌನ್‌ಲೋಡ್ ಮಾಡುವುದು ಹೇಗೆ?:

ಇದಕ್ಕಾಗಿ ನೀವು ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ನಂತರ ಡೌನ್‌ಲೋಡ್ ಮಾಡಲು ಬಯಸುವ ವಿಡಿಯೋವನ್ನು ಆಯ್ಕೆಮಾಡಿ. ಬಳಿಕ ಕೆಳಮುಖ ಬಾಣದ ಗುರುತು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ವಿಡಿಯೋವನ್ನು ಡೌನ್‌ಲೋಡ್ ಮಾಡಬಹುದು.

ನಂತರ, ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನಲ್ಲಿ ‘ಡೌನ್‌ಲೋಡ್’ ವಿಭಾಗಕ್ಕೆ ಹೋಗುವ ಮೂಲಕ ನೀವು ಡೌನ್‌ಲೋಡ್ ಪ್ರಗತಿಯನ್ನು ನೋಡಬಹುದು. ಡೌನ್‌ಲೋಡ್ ಮಾಡಲು ಇಂಟರ್ನೆಟ್ ಸಂಪರ್ಕವು ಉತ್ತಮವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಡೌನ್‌ಲೋಡ್ ಪೂರ್ಣಗೊಂಡ ನಂತರ, ನೆಟ್‌ಫ್ಲಿಕ್ಸ್ ಅಪ್ಲಿಕೇಶನ್‌ನ ‘ಡೌನ್‌ಲೋಡ್’ ವಿಭಾಗಕ್ಕೆ ಹೋಗುವ ಮೂಲಕ ನೀವು ಡೌನ್‌ಲೋಡ್ ಮಾಡಿದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸಬಹುದು.

ಸಿಲಿಂಡರ್ ಸಿಡಿಯುತ್ತೆ: ಗ್ಯಾಸ್ ಪೈಪ್‌ನ ಎಕ್ಸ್​ಪೈರ್ ಡೇಟ್ ಅನ್ನು ಹೇಗೆ ಪರಿಶೀಲಿಸುವುದು?

ನೆಟ್‌ಫ್ಲಿಕ್ಸ್​ನಲ್ಲಿ ಡೌನ್‌ಲೋಡ್ ಮಾಡಲಾದ ವಿಡಿಯೋ ಶಾಶ್ವತವಾಗಿ ಇರುವುದಿಲ್ಲ. ಸ್ವಲ್ಪ ಸಮಯದ ನಂತರ ಅದನ್ನು ತೆಗೆದುಹಾಕಲಾಗುತ್ತದೆ. ಇದು ನೀವು ಡೌನ್​ನೋಡ್ ಮಾಡಿದ ಚಲನಚಿತ್ರಗಳು ಅಥವಾ ವೆಬ್ ಸರಣಿಗಳ ಮೇಲೆ ನಿರ್ಧಾರವಾಗಿರುತ್ತದೆ. ಸಾಮಾನ್ಯವಾಗಿ ಇದು 2 ದಿನಗಳಿಂದ 30 ದಿನಗಳವರೆಗೆ ಇರುತ್ತದೆ. ನಿಮ್ಮ ನೆಟ್‌ಫ್ಲಿಕ್ಸ್ ಸದಸ್ಯತ್ವವನ್ನು ನೀವು ರದ್ದುಗೊಳಿಸಿದರೆ, ಡೌನ್‌ಲೋಡ್ ಮಾಡಿದ ಚಲನಚಿತ್ರಗಳು ಮತ್ತು ವೆಬ್ ಸರಣಿಗ ಅಟೋಮೆಟಿಕ್ ಆಗಿ ಡಿಲೀಟ್ ಆಗುತ್ತದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ