Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ತೆರೆಯದೆ ಮೆಸೇಜ್ ಓದುವ ಟ್ರಿಕ್ ನಿಮಗೆ ಗೊತ್ತೇ?

|

Updated on: Jun 19, 2023 | 6:55 AM

WhatsApp Tricks: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೆಲವೊಂದು ಸೆಟ್ಟಿಂಗ್​ಗಳನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ವಾಟ್ಸ್​ಆ್ಯಪ್ ಚಾಟ್ ಅನ್ನು ತೆರೆಯದೆ ಓದಬಹುದು.

Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ತೆರೆಯದೆ ಮೆಸೇಜ್ ಓದುವ ಟ್ರಿಕ್ ನಿಮಗೆ ಗೊತ್ತೇ?
whatsapp
Follow us on

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ವಿಶ್ವದಲ್ಲಿ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ವಾರಕ್ಕೊಂದು ಹೊಸ ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಅಚ್ಚರಿಯ ಆಯ್ಕೆಗಳು ಬರಲಿಕ್ಕಿದೆ. ವಾಟ್ಸ್​ಆ್ಯಪ್ ಹೊಸ ಅಪ್ಡೇಟ್​​ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಅದಕ್ಕೆ ಸಂಬಂಧಿಸಿದಂತೆ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು (Third Party App) ಹುಟ್ಟಿಗೊಳ್ಳುತ್ತವೆ. ಈಗಾಗಲೇ ಡಿಲೀಟ್ ಆಗಿರುವ ಮೆಸೇಜ್ ಅನ್ನು ನೋಡುವಂತಹ ಆಯ್ಕೆ, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಹೀಗೆ ಕೆಲ ಥರ್ಡ್ ಪಾರ್ಟಿ ಆ್ಯಪ್ ಮೂಲ ವಾಟ್ಸ್​ಆ್ಯಪ್​ನ ಕೆಲ ಟ್ರಿಕ್ ತಿಳಿದುಕೊಳ್ಳಬಹುದು. ಅದರಂತೆ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ ಎಂಬುದಕ್ಕೂ ಒಂದು ಟ್ರಿಕ್ (Tricks) ಇದೆ.

ವಾಟ್ಸ್​ಆ್ಯಪ್​ನಲ್ಲಿ ಆ್ಯಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್​ಗಳಿವೆ. ಹಾಗಂತ ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ಸಾಮಾನ್ಯವಾಗಿ ನೋಟಿಫಿಕೇಶನ್ ಪ್ಯಾನೆಲ್​ನಲ್ಲಿ ಈ ಮೆಸೇಜ್ ಒದಬಹುದು. ಆದರೆ, ಇಲ್ಲಿ ತೀರಾ ಉದ್ದವಿದ್ದ ಮೆಸೇಜ್ ಓದಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೆಲವೊಂದು ಸೆಟ್ಟಿಂಗ್​ಗಳನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ವಾಟ್ಸ್​ಆ್ಯಪ್ ಚಾಟ್ ಅನ್ನು ತೆರೆಯದೆ ಓದಬಹುದು. ಅದು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.

Tech Tips: ಸಿಮ್ ಕಾರ್ಡ್ ಅನ್ನು ಜಸ್ಟ್ ಹೀಗೆ ಮಾಡಿ: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ

ಇದನ್ನೂ ಓದಿ
Best Camera Phones: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಅದ್ಭುತ ಕ್ಯಾಮೆರಾದ ಸ್ಮಾರ್ಟ್​ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ
WhatsApp New Feature: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್
iQoo Neo 7 Pro: ಗೇಮಿಂಗ್ ಪ್ರಿಯರು ಸಿದ್ಧರಾಗಿ: ಬರುತ್ತಿದೆ ಬಲಿಷ್ಠ ಪ್ರೊಸೆಸರ್​ನ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್
Vivo Y35: ಹೊಸ ವಿವೋ ಫೋನ್ ಖರೀದಿಗೆ ₹1,500 ಡಿಸ್ಕೌಂಟ್ ಲಭ್ಯ
  • ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಮೈನ್ ಸ್ಕ್ರೀನ್​ನಲ್ಲಿರುವ ಹೋಮ್ ಪೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ
  • ಈಗ ಅಲ್ಲಿ ಕಾಣಿಸುವ Widgets ಆಯ್ಕೆ ಮೇಲೆ ಒತ್ತಿರಿ
  • ನಂತರ ಮೈನ್ ಸ್ಕ್ರೀನ್​ನಲ್ಲಿ ಎಲ್ಲ Widgets ಕಾಣಿಸುತ್ತದೆ. ಇದರಲ್ಲಿ ವಾಟ್ಸ್​ಆ್ಯಪ್ ಆಯ್ಕೆ ಮಾಡಿ
  • ವಾಟ್ಸ್​ಆ್ಯಪ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೈನ್ ಸ್ಕ್ರೀನ್​ನಲ್ಲಿ ಕಾಣಿಸುತ್ತದೆ
  • ನಂತರ ಡನ್ ಆಯ್ಕೆಯನ್ನು ಒತ್ತಿರಿ. ಈ ಸಂದರ್ಭ ಬೇಕಾದಲ್ಲಿ ಫುಲ್ ಸ್ಕ್ರೀನ್ ವರೆಗೂ ಸೆಲೆಕ್ಟ್ ಮಾಡಬಹುದು.
  • ಈ ಸೆಟ್ಟಿಂಗ್ ನಂತರ ಸ್ಕ್ರಾಲ್ ಮಾಡುವ ಮೂಲಕ ವಾಟ್ಸ್​ಆ್ಯಪ್ ತೆರೆಯದೆ ಮೆಸೇಜ್ ಓದಬಹುದು
  • ಯಾವುದೇ ಕಾರಣಕ್ಕೂ ಮೆಸೇಜ್ ಮೇಲೆ ಕ್ಲಿಕ್ ಮಾಡಬೇಡಿ, ಮಾಡಿದರೆ ವಾಟ್ಸ್​ಆ್ಯಪ್ ಓಪನ್ ಆಗಿ ನೇರವಾಗಿ ಚಾಟ್​ಗೆ ಪ್ರವೇಶಿಸುತ್ತದೆ.

ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್:

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಸಿಮ್​ಗಳಿದ್ದರೆ ಈ ಎರಡೂ ಸಿಮ್​ಗೆ ಒಂದೇ ಮೊಬೈಲ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ತೆರೆಯಬಹುದು. ಸದ್ಯ ವಾಟ್ಸ್​ಆ್ಯಪ್​ ಈ ಫೀಚರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗುವ ನಿರೀಕ್ಷೆ ಇದೆ.

ವಾಟ್ಸ್​ಆ್ಯಪ್ ಪರಿಚಯಿಸಲಿರುವ ಈ ಹೊಸ ಆಯ್ಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಖ್ಯ ಡಿವೈಸ್‌ಗೆ ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಅವರು ಡ್ಯುಯಲ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನೂತನ ಫೀಚರ್ ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನ ಬಿಸಿನೆಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಆವೃತ್ತಿಗೆ ಸಹ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ