Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಫೇಸ್​ಬುಕ್,​ ಇನ್​ಸ್ಟಾಗ್ರಾಮ್​ನಲ್ಲಿ ಹಣ ಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ?: ಇಲ್ಲಿದೆ ಟ್ರಿಕ್

ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ವೆರಫೈಡ್ ಸೇವೆಗಳನ್ನು ಹೊರತಂದಿದೆ. ಹಾಗಾದರೆ ಎಫ್​ಬಿ, ಇನ್​ಸ್ಟಾದಲ್ಲಿ ಹಣಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

Tech Tips: ಫೇಸ್​ಬುಕ್,​ ಇನ್​ಸ್ಟಾಗ್ರಾಮ್​ನಲ್ಲಿ ಹಣ ಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ?: ಇಲ್ಲಿದೆ ಟ್ರಿಕ್
Meta Verified
Follow us
Vinay Bhat
|

Updated on: Jun 13, 2023 | 6:55 AM

ಎಲಾನ್‌ ಮಸ್ಕ್‌ (Elon Musk) ಟ್ವಿಟ್ಟರ್‌ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡ ಬಳಿಕ ಮೆಟಾ ಒಡೆತನದ ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಂತಹ ಇತರೆ ಪ್ರಸಿದ್ಧ ಸಾಮಾಜಿಕ ಜಾಲತಾಣ ಕೂಡ ಸಾಕಷ್ಟು ಬದಲಾವಣೆ ಆಗಿವೆ. ಇದರಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಬ್ಲೂ ಟಿಕ್ ಚಂದಾದಾರಿಕೆ. ಟ್ವಿಟ್ಟರ್​ನಲ್ಲಿ ಹಣ ಕೊಟ್ಟು ವೆರಿಫೈಡ್ ಬ್ಯಾಡ್ಜ್ ಪಡೆದುಕೊಳ್ಳುವ ಆಯ್ಕೆ ಸಾಕಷ್ಟು ಸುದ್ದಿ ಮಾಡಿತು. ಇದೀಗ ಇದೇ ಹಣ ಕೊಟ್ಟು ಬ್ಲೂ ಟಿಕ್ ಪಡೆದುಕೊಳ್ಳಿ ಎಂಬ ನಿಯಮವನ್ನು ಮೆಟಾ (Meta) ಕಂಪನಿಯೂ ಪ್ರಾರಂಭಿಸಿದೆ. ಟ್ವಿಟರ್​ ಅನ್ನೇ ಅನುಸರಿಸಿರುವ ಮೆಟಾ ಭಾರತದಲ್ಲಿ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ (Blue Tick)​ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮೆಟಾ ಪ್ರಸ್ತುತ ಭಾರತಲ್ಲಿ ತನ್ನ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಈ ಸೇವೆಗಳನ್ನು ಹೊರತಂದಿದೆ. ಐಇಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಸಿಗುತ್ತಿದೆ. ಭಾರತದಲ್ಲಿ, Android ಮತ್ತು iOS ಬಳಕೆದಾರರಿಗೆ ಮೆಟಾ ವೆರಫೈಡ್ ಪ್ರತಿ ತಿಂಗಳಿಗೆ 699 ರೂ. ನಿಗದಿ ಮಾಡಲಾಗಿದೆ. ಇದನ್ನು ಶೀಘ್ರದಲ್ಲೇ ವೆಬ್ ಬಳಕೆದಾರರಿಗೆ ಕೂಡ ನೀಡಲಾಗುತ್ತದೆ ಎಂದು ಹೇಳಿದ್ದು 599 ರೂ. ಮಾಸಿಕ ಶುಲ್ಕ ಇರಲಿದೆ ಎಂದು ಕಂಪನಿಯು ಘೋಷಿಸಿದೆ. ಹಾಗಾದರೆ ಎಫ್​ಬಿ, ಇನ್​ಸ್ಟಾದಲ್ಲಿ ಹಣಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

Infinix Note 30 5G: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು ನೋಡಿ

ಇದನ್ನೂ ಓದಿ
Image
Google Pixel: ಎಫ್1 ಇನ್ಫೋ ಜೊತೆ ಗೂಗಲ್ ಸಹಭಾಗಿತ್ವ: ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳ ಸರ್ವೀಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ
Image
Best Camera Phones: 50,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್: ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸದ ಸುದ್ದಿ
Image
Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ತಿಳಿಯುವುದು ಹೇಗೆ?: ಇಲ್ಲಿದೆ ಟ್ರಿಕ್
  • Android ಅಥವಾ iOS ಸಾಧನದಲ್ಲಿ ಇನ್​ಸ್ಟಾಗ್ರಾಮ್ ಅಥವಾ ಫೇಸ್​ಬುಕ್ ಅಪ್ಲಿಕೇಶನ್ ತೆರೆಯಿರಿ.
  • ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
  • ಸೆಟ್ಟಿಂಗ್‌ ವಿಭಾಗಕ್ಕೆ ತೆರಳಿ, ಅಕೌಂಟ್ ಸೆಂಟರ್ ಅನ್ನು ಆಯ್ಕೆ ಮಾಡಿ.
  • ಮೆಟಾ ವೆರಿಫೈಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈ ಆಯ್ಕೆ ಕಾಣಿಸುತ್ತಿಲ್ಲ ಎಂದಾದಲ್ಲಿ, ನಿಮ್ಮ ಅಪ್ಲಿಕೇಶನ್‌ ಅನ್ನು ಅಪ್ಡೇಟ್ ಮಾಡಬೇಕು.
  • ಮೆಟಾ ವೆರಿಫೈಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಪೇಮೆಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  • ಸರ್ಕಾರಿ ಐಡಿಯನ್ನು ಬಳಸಿಕೊಂಡು ಸೂಚನೆಗಳನ್ನು ಪಾಲಿಸಿ.
  • ದೃಢೀಕರಣವನ್ನು ಮಾಡಿದ ನಂತರ, ಬಳಕೆದಾರರು ತಮ್ಮ ಖಾತೆಯಲ್ಲಿ ಬ್ಲೂ ಟಿಕ್ ಪಡೆಯುತ್ತಾರೆ.

ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂ ಟಿಕ್ ಅನ್ನು ಖರೀದಿಸಲು 18 ವರ್ಷ ವಯಸ್ಸಿನವರಾಗಿರಬೇಕು. ಇದಕ್ಕಾಗಿ ನಿಮ್ಮ ಫೋಟೋ ಐಡಿಯನ್ನು ಸಲ್ಲಿಸಬೇಕು. ಜೊತೆಗೆ ಸೆಲ್ಫೀ ವಿಡಿಯೋ ಕಳುಹಿಸಿ ಖಚಿತ ಪಡಿಸಬೇಕು. ಬಳಿಕವಷ್ಟೆ ನಿಮ್ಮ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್ ಅನ್ನು ಪಡೆಯಲು ಅನುಮತಿ ಕಳುಹಿಸಬಹುದು. ಟ್ವಿಟ್ಟರ್‌ನಲ್ಲಿ ಬ್ಲೂಟಿಕ್‌ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲಿಸಿದ ಬ್ಯಾಡ್ಜ್‌ ಹೊಂದಿರುವ ಖಾತೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪೋಸ್ಟ್‌ ಮಾಡಲಾದ ಯಾವುದೇ ಮಾಹಿತಿಯನ್ನು ಜನರು ಸುಲಭವಾಗಿ ನಂಬಬಹುದಾಗಿದೆ. ಹಾಗೂ ಅವರಿಗೆ ವಿಶೇಷ ಸ್ಥಾನಮಾನ ಸಹ ಸಾಮಾಜಿಕ ವಲಯದಲ್ಲಿ ಇರುತ್ತದೆ.

ಫೆಸ್​ಬುಕ್ ಹಾಗೂ ಇನ್‌ಸ್ಟಾಗ್ರಾಮ್​​ನಲ್ಲಿ ಈ ಹಿಂದೆ ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್‌ ಅಕೌಂಟ್‌ ನೀಡಲಾಗುತ್ತಿತ್ತು. ಇದೀಗ ಟ್ವಿಟ್ವರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್‌ ನೀಡಲಿದೆ. ಟ್ವಿಟ್ಟರ್‌ ಬ್ಲೂ ಟಿಕ್‌ ಪಡೆದುಕೊಳ್ಳಲು ತಿಂಗಳಿಗೆ 650 ರೂ. ವೆಬ್ ಬಳಕೆದಾರರಿಗೆ, 900 ರೂ. ಮೊಬೈಲ್ ಬಳಕೆದಾರರಿಗೆ ನಿಗದಿ ಮಾಡಲಾಗಿದೆ. ಅಂತೆಯೆ ವರ್ಷಕ್ಕೆ 6,800 ರೂ. ಪಾವತಿಸಬೇಕು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ