Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌

Flipkart Offer: ಕಳೆದ ವರ್ಷ ಭಾರತದಲ್ಲಿ ಸ್ಯಾಮ್​ಸಂಗ್ ಬಜೆಟ್ ಬೆಲೆಗೆ ಗ್ಯಾಲಕ್ಸಿ F13 ಫೋನನ್ನು ಲಾಂಚ್‌ ಮಾಡಿತ್ತು. ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಈ ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಈಗ ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡು ಸೇಲ್ ಕಾಣುತ್ತಿದೆ.

Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌
samsung galaxy f13
Follow us
|

Updated on: Jun 13, 2023 | 1:06 PM

ನೀವು ದೊಡ್ಡ ಬ್ಯಾಟರಿ, ಉತ್ತಮ ಡಿಸ್ ಪ್ಲೇ, ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ (Smartphone) ಹುಡುಕುತ್ತಿದ್ದರೆ ಇಲ್ಲೊಂದು ಬೆಸ್ಟ್ ಆಯ್ಕೆಯಿದೆ. ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಸ್ಯಾಮ್​ಸಂಗ್ (Samsung) ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ತನ್ನ ಫೋನೊಂದನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಕಳೆದ ವರ್ಷ ಭಾರತದಲ್ಲಿ ಸ್ಯಾಮ್​ಸಂಗ್ ಬಜೆಟ್ ಬೆಲೆಗೆ ಗ್ಯಾಲಕ್ಸಿ ಎಫ್​​13 (Samsung Galaxy F13) ಫೋನನ್ನು ಲಾಂಚ್‌ ಮಾಡಿತ್ತು. ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಈ ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಈಗ ಶೇ. 35 ರಷ್ಟು ರಿಯಾಯಿತಿ ಪಡೆದುಕೊಂಡು ಸೇಲ್ ಕಾಣುತ್ತಿದೆ.

ಏನಿದೆ ಆಫರ್?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ ಭಾರತದಲ್ಲಿ 14,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಭರ್ಜರಿ ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಕೇವಲ 9,699 ರೂ. ಗೆ ಮಾರಾಟ ಆಗುತ್ತಿದೆ. 5,300 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಇದರ ಜೊತೆಗೆ ಸ್ಯಾಮ್​ಸಂಗ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಮೂಲಕ ಖರೀದಿಸಿದರೆ ಶೇ. 10 ರಷ್ಟು ಕ್ಯಾಶ್​ಬ್ಯಾಕ್ ಪಡೆಯಬಹುದು.

ಇದನ್ನೂ ಓದಿ
Image
Nothing Phone 2: ಶವೋಮಿ, ಸ್ಯಾಮ್​ಸಂಗ್​ಗೆ ಶುರುವಾಯಿತು ನಡುಕ: ಬರುತ್ತಿದೆ ನಥಿಂಗ್‌ ಫೋನ್ 2 ಸ್ಮಾರ್ಟ್​ಫೋನ್
Image
Tech Tips: ಫೇಸ್​ಬುಕ್,​ ಇನ್​ಸ್ಟಾಗ್ರಾಮ್​ನಲ್ಲಿ ಹಣ ಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ?: ಇಲ್ಲಿದೆ ಟ್ರಿಕ್
Image
Realme GT Neo 5 Pro: ಬಿಡುಗಡೆಗೆ ಸಜ್ಜಾಗಿ ನಿಂತಿದೆ ರೋಚಕತೆ ಸೃಷ್ಟಿಸಿರುವ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್
Image
Google Pixel: ಎಫ್1 ಇನ್ಫೋ ಜೊತೆ ಗೂಗಲ್ ಸಹಭಾಗಿತ್ವ: ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳ ಸರ್ವೀಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ

Best Camera Phones: 50,000 ರೂ. ಒಳಗೆ ಸಿಗುತ್ತಿರುವ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಫೀಚರ್ಸ್ ಏನಿದೆ?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ 6.6 ಫುಲ್‌ ಹೆಚ್‌ಡಿ + LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಗೀರುಗಳಿಂದ ರಕ್ಷಣೆಯನ್ನು ಪಡೆಯಲಿದೆ. ಎಕ್ಸಿನೋಸ್‌ 850 ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್‌ RAM ಪ್ಲಸ್‌ ಟೆಕ್ನಾಲಜಿಯನ್ನು ಹೊಂದಿದ್ದು, ಹೆಚ್ಚಿನ RAM ಸಾಮರ್ಥ್ಯವನ್ನು ನೀಡಲು ಐಡಲ್ ಸ್ಟೋರೇಜ್‌ ಅನ್ನು ಬಳಸಲಿದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ದೀರ್ಘ ಸಮಯ ಬಾಳಿಕೆ ಬರುವ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲುಟೂತ್‌ v5.0, ವೈಫೈ, ಯುಎಸ್‌ಬಿ ಪೋರ್ಟ್‌, 3.5ಮಿ.ಮೀ ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್