ನಿಮ್ಮ ಆ್ಯಂಡ್ರಾಯ್ಡ್ ಮೊಬೈಲ್​ನಲ್ಲಿ ಕನ್ನಡದಲ್ಲೇ ಬರೆಯುವುದು ಹೇಗೆ?

| Updated By: preethi shettigar

Updated on: Sep 11, 2021 | 9:00 AM

ಹಲವು ಆ್ಯಪ್​ಗಳ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ಕನ್ನಡದಲ್ಲಿ ಟೈಪ್ ಮಾಡಬಹುದು. 

ನಿಮ್ಮ ಆ್ಯಂಡ್ರಾಯ್ಡ್ ಮೊಬೈಲ್​ನಲ್ಲಿ ಕನ್ನಡದಲ್ಲೇ ಬರೆಯುವುದು ಹೇಗೆ?
ಕನ್ನಡದಲ್ಲೇ ಬರೆಯಿರಿ
Follow us on

ನಿಮ್ಮ ಮೊಬೈಲ್ ಯಾವುದು? ಆ್ಯಂಡ್ರಾಯ್ಡಾ? ಹಾಗಿದ್ದರೆ ಈ ಲೇಖನ ಓದಿ.
ಅರೇ! ನನ್ನ ಫ್ರೆಂಡ್ ಕನ್ನಡದಲ್ಲೇ ಮೆಸೆಜ್ ಕಳಿಸುತ್ತಾನೆ. ಅದು ಹೇಗೆ ಎಂದು ಈವರೆಗೆ ನಿಮಗೆ ಎಂದಾದರೂ ಅನಿಸಿಯೇ ಅನಿಸಿರುತ್ತೆ. ಕನ್ನಡ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕನ್ನಡ ಅಂದ್ರೆ ನಮ್ಮೆಲ್ಲರ ಅಮ್ಮ. ಜಗತ್ತು ಬದಲಾಗುತ್ತ ಹೋದಂತೆ ಕನ್ನಡದ ಸಾಮರ್ಥ್ಯವೂ ಹೆಚ್ಚುತ್ತಿದೆ. ಈಗಾಗಲೇ ಮೊಬೈಲ್ನಲ್ಲಿ ಕನ್ನಡದಲ್ಲಿ ಬರೆಯಲು ನೀವು ಪ್ರಯತ್ನಿಸರಲೂಬಹುದು. ನಿಜಕ್ಕೂ ಮೊಬೈಲ್ನಲ್ಲಿ ಕನ್ನಡದಲ್ಲಿ ಬರೆಯುವುದು ಸುಲಭ. ಇಂಗ್ಲಿಷ್ ಸ್ಪೆಲ್ಲಿಂಗ್ಗಳಿಗಾಗಿ ತಡಕಾಡುವ ಯಾವ ಪ್ರಮೇಯವಿಲ್ಲ.

ಸುಮ್ಮನೆ ಗೂಗಲ್ ಪ್ಲೇಸ್ಟೋರಿಗೆ ಹೋಗಿ. ಕನ್ನಡ ಕೀಬೋರ್ಡ್ ಎಂದು ಸರ್ಚಿಸಿ. ಅಲ್ಲಿ ಒಂದಲ್ಲ ಎರಡಲ್ಲ.. ಹತ್ತಾರು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವ ಆ್ಯಪ್​ಗಳು ಕಾಣಿಸುತ್ತವೆ. ಅವುಗಳಲ್ಲಿ ಹಲವಾರು ಉತ್ತಮ ಆ್ಯಪ್​ಗಳಿವೆ. ಅವುಗಳಲ್ಲಿ ಒಂದು ಜಸ್ಟ್ ಕನ್ನಡ. ಇಲ್ಲವೇ ನೀವು ಗೂಗಲ್​ನ ಇಂಡಿಕ್ ಕೀಬೋರ್ಡ್​ನ್ನು ಸಹ ಆರಿಸಿಕೊಳ್ಳಬಹುದು. ನೀವು ಗೂಗಲ್​ನ ಇಂಡಿಕ್ ಕೀಬೋರ್ಡ್ ಆಯ್ಕೆ ಮಾಡಿಕೊಂಡರೆ ಸ್ಪೇಸ್ ಬಾರ್ ಪಕ್ಕ ಇರುವ ಭೂಮಿಯ ಐಕಾನ್ ಒತ್ತಿ. ನಂತ್ರ ಅಲ್ಲಿ ಕಾಣಿಸುವ ಮೆನುವಿನಲ್ಲಿ ಕೊನೆಗೆ ತೋರಿಸುವ Language Settings ಅನ್ನು ಆಯ್ಕೆ ಮಾಡಿ.

ನಂತರ ಸ್ಕ್ರೀನ್ ಕೊನೆಯಲ್ಲಿ ಕಾಣಿಸುವ add keyboardನ್ನು ಆಯ್ಕೆ ಮಾಡಿ. ಅಲ್ಲಿ ಕನ್ನಡ ಭಾಷೆಯನ್ನು ಆರಿಸಿ. ನಂತರ ನಿಮ್ಮ ಸ್ಮಾರ್ಟ್​ಪೊನ್​ನ ಕೀಬೋರ್ಡ್​ನ ಸ್ಪೇಸ್ ಬಾರ್ ಒತ್ತಿ ಹಿಡಿದರೆ, ನಿಮಗೆ ಇಂಗ್ಲೀಶ್-ಕನ್ನಡ ಆಯ್ಕೆ ಕಾಣುತ್ತದೆ. ಇದನ್ನು ಕ್ಲಿಕ್ ಮಾಡಿದರೆ ನೀವು ನಿಮ್ಮ ಮೊಬೈಲ್​ನಲ್ಲಿ ಇಂಗ್ಲೀಷಿನಲ್ಲಿ ಬರೆದ ಪದಗಳು ಸಹ ಕನ್ನಡ ಅಕ್ಷರಗಳಲ್ಲಿಯೇ ಕಾಣಿಸುತ್ತವೆ.

ಜಸ್ಟ್ ಕನ್ನಡ ಆ್ಯಪ್ ಆದರೆ ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್​ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ ಲಾಂಗ್ವೇಜ್ ಆ್ಯಂಡ್ ಇನ್‌ಪುಟ್ಸ್​ನಲ್ಲಿ ಕೀಬೋರ್ಡ್‌ ಆ್ಯಂಡ್ ಇನ್‌ಪುಟ್‌ ಆರಿಸಿ. ನಂತರ ಡೀಪಾಲ್ಟ್‌ ಆಗಿ ಜಸ್ಟ್ ಕನ್ನಡ ಆ್ಯಪ್​ನ್ನು ಆಯ್ಕೆ ಮಾಡಿ. ಕೀಬೋರ್ಡ್​ನಲ್ಲಿ ಕಾಣಿಸುವ ಭೂಮಿಯ ಚಿತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು ಇಂಗ್ಲೀಷ್ ಅಕ್ಷರಗಳನ್ನೂ ಆರಿಸಬಹುದು.

ಇಷ್ಟೇ ಅಲ್ಲದೇ, ಇನ್ನೂ ಹಲವು ಆ್ಯಪ್​ಗಳ ಮೂಲಕ ಸ್ಮಾರ್ಟ್​ಫೋನ್​ನಲ್ಲಿ ಕನ್ನಡದಲ್ಲಿ ಟೈಪ್ ಮಾಡಬಹುದು.

ಇದನ್ನೂ ಓದಿ: 

ಕನ್ನಡಕ್ಕೆ ಸಿಕ್ತು ತಂತ್ರಜ್ಞಾನದ ಬಲ: ‘ಕ-ನಾದ’ ಕೀಲಿಮಣೆಯಿಂದ ಈಗ ಕನ್ನಡ ಟೈಪಿಂಗ್​ ಬಹು ಸುಲಭ!

Travel: ಪ್ರಪಂಚದ ಈ ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ಅಚ್ಚರಿಯ ಮಾಹಿತಿ ಇಲ್ಲಿದೆ

(How to type in Kannada in my smartphone easily Keyboards to easy typing)