Travel: ಪ್ರಪಂಚದ ಈ ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ಅಚ್ಚರಿಯ ಮಾಹಿತಿ ಇಲ್ಲಿದೆ

ಪ್ರಪಂಚದಾದ್ಯಂತ 70 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯಾಸ್ತವಾಗದ ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ಅಚ್ಚರಿಯ ಮಾಹಿತಿ.

Travel: ಪ್ರಪಂಚದ ಈ ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ಅಚ್ಚರಿಯ ಮಾಹಿತಿ ಇಲ್ಲಿದೆ
ನಾರ್ವೆ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Sep 09, 2021 | 6:25 PM

ನಮ್ಮ ದಿನಚರಿಯು 24 ಗಂಟೆಗಳ ಸುತ್ತ ಸುತ್ತುತ್ತದೆ. ಸುಮಾರು 12 ಗಂಟೆಗಳ ಕಾಲ ಸೂರ್ಯನ ಬೆಳಕು ಮತ್ತು ಉಳಿದ 12 ಗಂಟೆಗಳು ರಾತ್ರಿಯ ಅವಧಿಯಾಗಿರುತ್ತದೆ. ಆದರೆ, ಪ್ರಪಂಚದಾದ್ಯಂತ 70 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯಾಸ್ತವಾಗದ ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿದ್ದರೆ, ಭೂಮಿಯ ಮೇಲೆ ಸೂರ್ಯ ಮುಳುಗದ 6 ಸ್ಥಳಗಳು ಇಲ್ಲಿವೆ. ಈ ಸ್ಥಳಗಳಲ್ಲಿ ಸೂರ್ಯ 70 ದಿನಕ್ಕೂ ಹೆಚ್ಚು ಕಾಲ ಅಸ್ತಮಿಸುವುದೇ ಇಲ್ಲ. ಇಲ್ಲಿದೆ ಅಚ್ಚರಿಯ ಮಾಹಿತಿ.

ನಾರ್ವೆ: ಆರ್ಕ್ಟಿಕ್ ವೃತ್ತದಲ್ಲಿರುವ ನಾರ್ವೆಯನ್ನು ‘ಮಧ್ಯರಾತ್ರಿಯ ಸೂರ್ಯನ ಭೂಮಿ’(the land of the midnight sun) ಎಂದು ಕರೆಯಲಾಗುತ್ತದೆ. ಅಲ್ಲಿ ಮೇ ಅಂತ್ಯದಿಂದ ಜುಲೈವರೆಗೆ ಸೂರ್ಯನು ಅಸ್ತಮಿಸುವುದಿಲ್ಲ. ಅಂದರೆ ಸುಮಾರು 76 ದಿನಗಳವರೆಗೆ ಸೂರ್ಯ ಮುಳುಗುವುದಿಲ್ಲ. ನಾರ್ವೆಯ ಸ್ವಾಲ್‌ಬಾರ್ಡ್‌ನಲ್ಲಿ, ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯ ನಿರಂತರವಾಗಿ ಬೆಳಗುತ್ತಾನೆ. ಇದು ಯುರೋಪಿನ ಉತ್ತರದ ಜನವಸತಿ ಪ್ರದೇಶವೂ ಆಗಿದೆ. ಈ ಸಮಯದಲ್ಲಿ ನೀವು ಈ ಸ್ಥಳಕ್ಕೆ ಭೇಟಿ ನೀಡಲು ಯೋಜಿಸಬಹುದು ಮತ್ತು ರಾತ್ರಿಯಿಲ್ಲದ ದಿನಗಳನ್ನು ಎಂಜಾಯ್ ಮಾಡಬಹುದು.

ನೂನಾವುಟ್, ಕೆನಡಾ:  ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ಆರ್ಕ್ಟಿಕ್ ವೃತ್ತದ ಮೇಲೆ ಎರಡು ಡಿಗ್ರಿಗಳಷ್ಟು ದೂರದಲ್ಲಿದೆ ಈ ಪಟ್ಟಣ. ಕೇವಲ 3,000ದ ಆಸುಪಾಸಿನಲ್ಲಿ ಜನ ಸಂಖ್ಯೆ ಇರುವ ಇದರ ಹೆಸರು ನೂನಾವುಟ್. ಈ ಸ್ಥಳವು ಸುಮಾರು ಎರಡು ತಿಂಗಳುಗಳ ಕಾಲ 24X7 ಸೂರ್ಯನ ಬೆಳಕನ್ನು ಪಡೆಯುತ್ತದೆ, ಆದರೆ ಚಳಿಗಾಲದಲ್ಲಿ, ಈ ಸ್ಥಳವು ಸತತ 30 ದಿನಗಳವರೆಗೆ ಸಂಪೂರ್ಣ ಕತ್ತಲಿನಲ್ಲಿರುತ್ತದೆ.

ಐಸ್ಲ್ಯಾಂಡ್: ಗ್ರೇಟ್ ಬ್ರಿಟನ್ ನಂತರ ಯುರೋಪಿನ ಅತಿದೊಡ್ಡ ದ್ವೀಪ ಐಸ್ಲ್ಯಾಂಡ್. ಸೊಳ್ಳೆಗಳಿಲ್ಲದ ದೇಶವೆಂದೂ ಇದು ಹೆಸರುವಾಸಿಯಾಗಿದೆ. ಬೇಸಿಗೆಯ ಸಮಯದಲ್ಲಿ ಐಸ್‌ಲ್ಯಾಂಡ್‌ನಲ್ಲಿ ರಾತ್ರಿಗಳು ಸ್ಪಷ್ಟವಾಗಿರುತ್ತದೆ. ಆದರೆ ಜೂನ್ ತಿಂಗಳಿನಲ್ಲಿ ಸೂರ್ಯ ಎಂದಿಗೂ ಅಸ್ತಮಿಸುವುದಿಲ್ಲ. ಮಧ್ಯರಾತ್ರಿಯ ಸೂರ್ಯನ ಎಲ್ಲಾ ವೈಭವ ನೋಡಲು, ನೀವು ಆರ್ಕ್ಟಿಕ್ ವೃತ್ತದಲ್ಲಿರುವ ಅಕುರೆರಿ ಪಟ್ಟಣ ಮತ್ತು ಗ್ರಿಮ್ಸೆ ದ್ವೀಪಕ್ಕೆ ಭೇಟಿ ನೀಡಬಹುದು.

ಬಾರೋ, ಅಲಾಸ್ಕಾ:  ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ, ಸೂರ್ಯನು ನಿಜವಾಗಿಯೂ ಇಲ್ಲಿ ಅಸ್ತಮಿಸುವುದಿಲ್ಲ. ಆದರೆ ನವೆಂಬರ್ ಆರಂಭದಿಂದ ಮುಂದಿನ 30 ದಿನಗಳವರೆಗೆ ಸೂರ್ಯ ಉದಯಿಸುವುದಿಲ್ಲ. ಈ ಕಾಲವನ್ನು ಪೋಲಾರ್ ನೈಟ್ಸ್ ಎಂದು ಕರೆಯಲಾಗುತ್ತದೆ. ಇದರರ್ಥ ಕಠಿಣ ಚಳಿಗಾಲದ ತಿಂಗಳುಗಳಲ್ಲಿ ದೇಶವು ಕತ್ತಲೆಯಲ್ಲಿರುತ್ತದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಮೋಡಿಮಾಡುವ ಹಿಮನದಿಗಳಿಗೆ ಹೆಸರುವಾಸಿಯಾದ ಈ ಸ್ಥಳಕ್ಕೆ ಬೇಸಿಗೆ ಅಥವಾ ಚಳಿಗಾಲದಲ್ಲಿ ಭೇಟಿ ನೀಡಬಹುದು.

ಫಿನ್ಲ್ಯಾಂಡ್:  ಸಾವಿರಾರು ಸರೋವರಗಳು ಮತ್ತು ದ್ವೀಪಗಳ ಭೂಮಿ ಫಿನ್ಲ್ಯಾಂಡ್. ಫಿನ್ಲೆಂಡ್ ಬೇಸಿಗೆಯಲ್ಲಿ ಕೇವಲ 73 ದಿನಗಳ ಕಾಲ ನೇರ ಸೂರ್ಯನ ಬೆಳಕನ್ನು ನೋಡುತ್ತದೆ. ಈ ಸಮಯದಲ್ಲಿ, ಸೂರ್ಯನು ಸುಮಾರು 73 ದಿನಗಳವರೆಗೆ ಪ್ರಕಾಶಿಸುತ್ತಲೇ ಇರುತ್ತಾನೆ, ಆದರೆ ಚಳಿಗಾಲದ ಸಮಯದಲ್ಲಿ, ಈ ಪ್ರದೇಶವು ಸೂರ್ಯನ ಬೆಳಕನ್ನು ಕಾಣುವುದೇ ಇಲ್ಲ. ಇಲ್ಲಿ ಜನರು ಬೇಸಿಗೆಯಲ್ಲಿ ಕಡಿಮೆ ನಿದ್ರೆ ಮಾಡಲು ಮತ್ತು ಚಳಿಗಾಲದಲ್ಲಿ ಹೆಚ್ಚು ನಿದ್ರಿಸಲು ಇದು ಕೂಡ ಒಂದು ಕಾರಣವಾಗಿದೆ.

ಸ್ವೀಡನ್:  ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ, ಸ್ವೀಡನ್‌ನಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಸೂರ್ಯ ಮುಳುಗುತ್ತಾನೆ. ಇಲ್ಲಿ, ನಿರಂತರ ಬಿಸಿಲಿನ ಅವಧಿಯು ವರ್ಷದಲ್ಲಿ ಆರು ತಿಂಗಳುಗಳವರೆಗೆ ಇರುತ್ತದೆ. ಇಲ್ಲಿಗೆ ಪ್ರವಾಸ ಕೈಗೊಂಡರೆ, ಸಾಹಸಮಯ ಚಟುವಟಿಕೆಗಳು, ಗಾಲ್ಫಿಂಗ್, ಮೀನುಗಾರಿಕೆ, ಚಾರಣದ ಹಾದಿಗಳನ್ನು ಅನ್ವೇಷಿಸುವುದು ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.

ಇದನ್ನೂ ಓದಿ:

Bank Rules Change: ಅಕ್ಟೋಬರ್​ 1ರಿಂದ ಈ ಬ್ಯಾಂಕ್‌ಗಳ ಚೆಕ್ ಬುಕ್ ಕೆಲಸ ಮಾಡುವುದಿಲ್ಲ

Dengue Symptoms: ನಿಮ್ಮ ಜ್ವರ ಡೆಂಗ್ಯೂ ಜ್ವರವಾ ಎಂದು ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಉಪಯುಕ್ತ ಮಾಹಿತಿ

(6 places on earth where the sun never sets here is the details)

Published On - 6:22 pm, Thu, 9 September 21

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್