WhatsApp Chat Lock: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಅನ್ನು ಬೇರೆಯವರು ನೋಡದಂತೆ ಲಾಕ್ ಮಾಡಬಹುದು: ಹೇಗೆ ಗೊತ್ತೇ?

|

Updated on: Jun 29, 2023 | 2:37 PM

ವಾಟ್ಸ್​ಆ್ಯಪ್ ಚಾಟ್ ಲಾಕ್ ಫೀಚರ್ ತುಂಬಾ ಉಪಯುಕ್ತವಾದ ಆಯ್ಕೆ ಆಗಿದ್ದು, ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಸ್ಮಾರ್ಟ್​ಫೋನನ್ನು ಹಂಚಿಕೊಳ್ಳುವವರಿಗೆ ಸಹಕಾರಿ ಆಗಲಿದೆ. ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ.

WhatsApp Chat Lock: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಅನ್ನು ಬೇರೆಯವರು ನೋಡದಂತೆ ಲಾಕ್ ಮಾಡಬಹುದು: ಹೇಗೆ ಗೊತ್ತೇ?
WhatsApp Chat Lock
Follow us on

ವಾಟ್ಸ್​ಆ್ಯಪ್​ನಲ್ಲಿ (WhatsApp) ನಿಮ್ಮ ಚಾಟ್ ಅನ್ನು ಬೇರೆಯವರು ನೋಡುತ್ತಾರೆ ಅಥವಾ ಓದುತ್ತಾರೆ ಎಂಬ ಅನುಮಾನ ನಿಮಗೆ ಇದ್ದರೆ ಕಂಪನಿ ಒಂದು ಅದ್ಭುತ ಆಯ್ಕೆಯನ್ನು ನೀಡಿದೆ. ಅದುವೇ ಚಾಟ್ ಲಾಕ್ (Chat Lock) ಫೀಚರ್. ಇದರ ಮೂಲಕ ನಿಮ್ಮ ವಾಟ್ಸ್​ಆ್ಯಪ್ ಚಾಟ್ ಅನ್ನು ನೀವು ಪಾಸ್ವರ್ಡ್ ಹಾಕಿ ಲಾಕ್ ಮಾಡಬಹುದು. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ ಈ ಆಯ್ಕೆಯನ್ನು ಆಂಡ್ರಾಯ್ಡ್ ಮತ್ತು ಐಫೋನ್ (iPhone) ಬಳಕೆದಾರರಿಗೆ ನೀಡುವುದಾಗಿ ಹೇಳಿದೆ. ಇದು ತುಂಬಾ ಉಪಯುಕ್ತವಾದ ಆಯ್ಕೆ ಆಗಿದ್ದು, ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಸ್ಮಾರ್ಟ್​ಫೋನನ್ನು ಹಂಚಿಕೊಳ್ಳುವವರಿಗೆ ಸಹಕಾರಿ ಆಗಲಿದೆ.

ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ. ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫೇಸ್ ಐಡಿ, ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.

Taara: ಭಾರತದಲ್ಲಿ ಬೆಳಕಿನ ಕಿರಣ ಬಳಸಿ ಅತ್ಯಂತ ವೇಗದ, ಅಗ್ಗದ ಇಂಟರ್ನೆಟ್ ಸೌಲಭ್ಯ

ಇದನ್ನೂ ಓದಿ
Amazon Prime Day Sale: ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ದಿನಾಂಕ ಬಹಿರಂಗ: ಯಾವಾಗ?, ಈ ಬಾರಿ ಏನು ಆಫರ್ ನೋಡಿ
Amazon: ಆಕಸ್ಮಿಕವಾಗಿ ಮೂರು ಸ್ಮಾರ್ಟ್​ಫೋನ್​ಗಳ ಬೆಲೆ ಬಹಿರಂಗ ಪಡಿಸಿದ ಅಮೆಜಾನ್: ಗ್ರಾಹಕರಲ್ಲಿ ಅಚ್ಚರಿ
Realme GT 2: ರಿಯಲ್​ಮಿ ಫೋನ್ ಖರೀದಿಗೆ ಬೆಸ್ಟ್ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್
Samsung Galaxy S20 FE: ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959ಕ್ಕೆ ಮಾರಾಟ

ಚಾಟ್ ಲಾಕ್ ಫೀಚರ್ ಹೇಗೆ ಬಳಸುವುದು?:

ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಮೊದಲು ಅಪ್​ಡೇಟ್​ ಕೊಡಿ

ನಂತರ ಆ್ಯಪ್ ತೆರೆದು ಚಾಟ್‌ಗಳನ್ನು ಲಾಕ್ ಮಾಡಲು ವಾಟ್ಸ್​ಆ್ಯಪ್​ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗ ಓಪನ್​ ಮಾಡಬೇಕು.

ಕೆಳಗೆ ಸ್ಕ್ರೋಲ್​ ಮಾಡಿದಾಗ ಚಾಟ್ ಲಾಕ್ ಆಯ್ಕೆ ಕಾಣಸಿಗುತ್ತದೆ

ಚಾಟ್ ಲಾಕ್ ಟ್ಯಾಪ್ ಮಾಡಿದರೆ ಲಾಕ್ ದಿಸ್ ಚಾಟ್ ವಿತ್ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಆಕ್ಟೀವ್​ ಮಾಡಿ.

ಫಿಂಗರ್‌ಪ್ರಿಂಟ್‌, ಪಾಸ್​ ಕೋಡ್​ ಅಥವಾ ಫೇಸ್​ ಐಡಿಯೊಂದಿಗೂ ಚಾಟ್ ಅನ್ನು ಲಾಕ್ ಮಾಡಬಹುದು.

ಲಾಕ್ಡ್ ಚಾಟ್ಸ್ ಎಂಬ ಫೋಲ್ಡರ್‌ನಲ್ಲಿ ಈ ಚಾಟ್​​ಗಳು ಗೌಪ್ಯವಾಗಿ ಇರುತ್ತದೆ.

ವಾಟ್ಸ್​ಆ್ಯಪ್ ವೆಬ್​ನಲ್ಲಿ ವರ್ಕ್ ಆಗಲ್ಲ:

ಬೇಸರದ ಸಂಗತಿ ಎಂದರೆ ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್​ಆ್ಯಪ್ ಚಾಟ್‌ಗಳನ್ನು ಚಾಟ್ ಲಾಕ್ ಫೀಚರ್ ಮೂಲಕ ಆನ್ ಮಾಡಿದ್ದರೆ, ಅದು ವೆಬ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ನೀವು ವೆಬ್ ಆವೃತ್ತಿಯನ್ನು ಬಳಸಿಕೊಂಡು ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಈ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ನಿಮ್ಮ ಲಾಕ್ ಮಾಡಿದ ಚಾಟ್‌ಗಳನ್ನು ಇಲ್ಲಿ ಹೈಡ್ ಆಗುವುದಿಲ್ಲ. ಲಾಕ್ ಮಾಡಿದ ಚಾಟ್‌ಗಳು ಮೊಬೈಲ್ ಆವೃತ್ತಿಯಲ್ಲಿ ಮಾತ್ರ ಇರುತ್ತದೆ. ಕಂಪನಿಯು ವಾಟ್ಸ್​ಆ್ಯಪ್ ವೆಬ್ ಆವೃತ್ತಿಗೆ ಚಾಟ್ ಲಾಕ್ ಫೀಚರ್ ಅನ್ನು ಇನ್ನೂ ಹೊರತಂದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ