Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ ವೈರಲ್ ಆಗದಿರಲು ಇದೇ ಕಾರಣ: ಸೆಟ್ಟಿಂಗ್ಸ್​ನಲ್ಲಿ ಜಸ್ಟ್ ಹೀಗೆ ಮಾಡಿ

ಇನ್​ಸ್ಟಾಗ್ರಾಮ್​ನಲ್ಲಿ ನಾನು ಅಪ್ಲೋಡ್ ಮಾಡುವ ರೀಲ್ಸ್ ಹೆಚ್ಚು ವೈರಲ್ ಆಗಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂದಾದರೆ ನಾವು ಕೆಲವೊಂದು ಟ್ರಿಕ್ ಹೇಳುತ್ತೇವೆ. ಸೆಟ್ಟಿಂಗ್ಸ್​ನಲ್ಲಿ ನೀವು ಈ ಬದಲಾವಣೆಯನ್ನು ಮಾಡಿದರೆ ಸಾಕು.

Tech Tips: ನಿಮ್ಮ ಇನ್​ಸ್ಟಾಗ್ರಾಮ್ ರೀಲ್ ವೈರಲ್ ಆಗದಿರಲು ಇದೇ ಕಾರಣ: ಸೆಟ್ಟಿಂಗ್ಸ್​ನಲ್ಲಿ ಜಸ್ಟ್ ಹೀಗೆ ಮಾಡಿ
Follow us
| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 1:54 PM

ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡುವ ಫೋಟೋ-ರೀಲ್ಸ್ ವೈರಲ್ ಆಗಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ, ಏನೇ ಅಪ್ಲೋಡ್ ಮಾಡಿದರೂ ಹೆಚ್ಚು ವೀವ್ಸ್, ಲೈಕ್ಸ್, ಕಾಮೆಂಟ್ ಬರುವುದಿಲ್ಲ. ಫಾಲೋವರ್ಸ್ ಕೂಡ ಹೆಚ್ಚಾಗುವುದಿಲ್ಲ. ನೀವು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಚಿಂತಿಸಬೇಡಿ. ಈ ತೊಂದರೆಯಿಂದ ಪಾರಾಗಲು ಇಲ್ಲಿ ನಾವು ಕೆಲವು ವೈಶಿಷ್ಟ್ಯಗಳ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದು ನಿಮ್ಮ ಇನ್​ಸ್ಟಾಗ್ರಾಮ್​ ವ್ಯಾಪ್ತಿ ಮತ್ತು ಫಾಲೋವರ್ಸ್ ಅನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ನೀವು ಇನ್​ಸ್ಟಾಗ್ರಾಮ್​ನಲ್ಲಿ ಏನೇ ಪೋಸ್ಟ್ ಮಾಡುವ ಮೊದಲು ಇದನ್ನು ಸಕ್ರಿಯಗೊಳಿಸಬೇಕು.

ಇನ್​ಸ್ಟಾಗ್ರಾಮ್​ನಲ್ಲಿ ಈ ಸೆಟ್ಟಿಂಗ್‌ಗಳನ್ನು ಮಾಡಿ:

ಇದಕ್ಕಾಗಿ ಮೊದಲು ಇನ್​ಸ್ಟಾಗ್ರಾಮ್​ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್‌ಗೆ ಹೋಗಿ. ಬಲ ಮೂಲೆಯಲ್ಲಿ ತೋರಿಸಿರುವ ಮೂರು ಲೈನ್​​ಗಳ ಮೇಲೆ ಕ್ಲಿಕ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಮೀಡಿಯಾ ಕ್ವಾಲಿಟಿ ಆಯ್ಕೆಯನ್ನು ಕ್ಲಿಕ್ ಮಾಡಿ, ಮೀಡಿಯಾ ಕ್ವಾಲಿಟಿ ಕ್ಲಿಕ್ ಮಾಡಿದ ನಂತರ ಕಡಿಮೆ ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿ, ಎರಡನೇ ಸಂಖ್ಯೆಯಲ್ಲಿ ತೋರಿಸಿರುವ ಅಪ್‌ಲೋಡ್ ಹೈ ಕ್ವಾಲಿಟಿ ಆಯ್ಕೆಯನ್ನು ಸಕ್ರಿಯಗೊಳಿಸಿ, ಮೂರನೇ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಹೀಗೆ ಮಾಡಿದ ನಂತರ, ನಿಮ್ಮ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ಉತ್ತಮ ಗುಣಮಟ್ಟದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ನೀವು ಹಂಚಿಕೊಂಡ ಪೋಸ್ಟ್ ಹೈ-ಕ್ವಾಲಿಟಿಯಲ್ಲಿ ಇದ್ದರೆ ನಿಮ್ಮ ಫಾಲೋವರ್ಸ್ ಆ ವಿಡಿಯೋಗಳು ಮತ್ತು ಫೋಟೋಗಳನ್ನು ಇಷ್ಟಪಡುತ್ತಾರೆ. ಮತ್ತು ಅವರು ಬೇರೆಯವರಿಗೆ ಕಳುಹಿಸಿ ನಿಮಗೂ ಫಾಲೋವರ್ಸ್ ಬರಲಿ ಸಹಕಾರಿ ಆಗುತ್ತದೆ.

ಡಿಜಿಟಲ್ ಕ್ರಿಯೇಟರ್:

ಇತರ ಸೆಟ್ಟಿಂಗ್‌ಗಳನ್ನು ಮಾಡಲು, ನಿಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪ್ರೊಫೈಲ್ ಸಂಪಾದಿಸು ಕ್ಲಿಕ್ ಮಾಡಿ. ಇದರ ನಂತರ, What Best Describes You ಎಂಬಲ್ಲಿಗೆ ಹೋಗಿ, ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಡಿಜಿಟಲ್ ಕ್ರಿಯೇಟರ್ ಮೇಲೆ ಕ್ಲಿಕ್ ಮಾಡಿ. ಮೇಲ್ಭಾಗದಲ್ಲಿ ನೀಡಲಾದ ಪ್ರೊಫೈಲ್‌ನಲ್ಲಿ ಡಿಸ್​ಪ್ಲೇಯನ್ನು ನೀವು ನಿಷ್ಕ್ರಿಯಗೊಳಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ರೀಲ್ ಅನ್ನು ಪೋಸ್ಟ್ ಮಾಡುವ ಮೊದಲು ಹೀಗೆ ಮಾಡಿ:

ನೀವು ರೀಲ್ ಅನ್ನು ಪೋಸ್ಟ್ ಮಾಡಿದಾಗ, ಅದರ ಆಡಿಯೋ ಆಯ್ಕೆಗೆ ಹೋಗಿ. ಇಲ್ಲಿ ನಿಮಗೆ ಆಡಿಯೋವನ್ನು ಮರು-ಹೆಸರಿಸುವ ಆಯ್ಕೆಯನ್ನು ತೋರಿಸಲಾಗುತ್ತದೆ. ಮರು-ಹೆಸರಿಸು ಆಡಿಯೊ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಇನ್​ಸ್ಟಾಗ್ರಾಮ್​ ಸಲಹೆಗಳನ್ನು ಬರೆಯುವ ಮೂಲಕ ಮತ್ತು ಆಡಿಯೋ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡಬಹುದು.

ಇದನ್ನೂ ಓದಿ: ಅದ್ಭುತ ವೈಶಿಷ್ಟ್ಯಗಳೊಂದಿಗೆ 2 ಹೊಸ ರೀಚಾರ್ಜ್ ಪ್ಲಾನ್ ತಂದ ಜಿಯೋ

ಇದರೊಂದಿಗೆ, ನಿಮ್ಮ ರೀಲ್‌ನಲ್ಲಿ ಬೇರೆ ಯಾವುದೇ ಬಳಕೆದಾರರ ಹೆಸರನ್ನು ತೋರಿಸಲಾಗುವುದಿಲ್ಲ, ಯಾರಾದರೂ ನಿಮ್ಮ ಆಡಿಯೋವನ್ನು ವೀಕ್ಷಿಸಿದರೆ ಮತ್ತು ಅದರ ಮೇಲೆ ರೀಲ್ ಮಾಡಿದರೆ, ನಿಮ್ಮ ಹೆಚ್ಚು ಜನರಿಗೆ ರೀಚ್ ಆಗುತ್ತೀರಿ.

ಕಂಟೆಟ್ ರಚಿಸುವಾಗ ಜಾಗರೂಕರಾಗಿರಿ:

ನೀವು ಟ್ರೆಂಡಿಂಗ್ ವಿಷಯವನ್ನು ಮಾತ್ರ ಕ್ರಿಯೇಟ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ, ಬಳಕೆದಾರರು ಟ್ರೆಂಡ್ ಆಗಿರುವುದನ್ನು ನೋಡಲು ಇಷ್ಟಪಡುತ್ತಾರೆ. ವಿಡಿಯೋ ಗುಣಮಟ್ಟ ಮತ್ತು ಸಂಪಾದನೆಗೆ ಗಮನ ಕೊಡಿ ಮತ್ತು ಆ ವಿಡಿಯೋಕ್ಕೆ ಸಂಬಂಧ ಪಟ್ಟಂತೆ ಸಣ್ಣದಾದ ವಿವರಣೆ ವಿಡಿಯೋದ ಕೆಳಗೆ ನೀಡಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?