Airtel: ಏರ್​ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ

| Updated By: ಝಾಹಿರ್ ಯೂಸುಫ್

Updated on: Aug 08, 2021 | 9:21 PM

Airtel Recharge Plans: ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ಯೋಜನೆಗಳನ್ನು ಸಹ ಪರಿಚಯಿಸಿದೆ. 299 ರೂ. ಪ್ಲ್ಯಾನ್​ನಲ್ಲಿ ರೀಚಾರ್ಜ್ ಮಾಡಿದರೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಜೊತೆಗೆ 30GB ಡೇಟಾ, ಅನಿಯಮಿತ ಕರೆ ಅವಕಾಶ ನೀಡಲಿದೆ. ಇದರ ವಾಲಿಡಿಟಿ 30 ದಿನಗಳು.

Airtel: ಏರ್​ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ
ನೀವು ಇಂತಹ ದೀರ್ಘಾವಧಿಯ ರಿಚಾರ್ಜ್​ ಪ್ಲ್ಯಾನ್​ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಣವನ್ನು ಸಹ ಉಳಿಸಿಕೊಳ್ಳಬಹುದು. ಏಕೆಂದರೆ ಪ್ರತಿ ತಿಂಗಳಿಗೆ 100 ರಿಂದ 200 ರೂ ರಿಚಾರ್ಜ್ ಮಾಡುವ ಗ್ರಾಹಕರು ಒಂದು ವರ್ಷ ವಾಲಿಡಿಟಿಯ ಪ್ಯಾಕ್ ಹಾಕಿಕೊಳ್ಳುವುದರಿಂದ ತಿಂಗಳಿಗೆ ಕಡಿಮೆ ಮೊತ್ತವನ್ನು ಪಾವತಿಸದಂತಾಗುತ್ತದೆ. ಅಂತಹ ಮೂರು ರಿಚಾರ್ಜ್​ ಪ್ಲ್ಯಾನ್​ಗಳನ್ನು ಇಲ್ಲಿ ತಿಳಿಸಲಾಗಿದೆ.
Follow us on

ನೀವು ಏರ್‌ಟೆಲ್ (Airtel) ಗ್ರಾಹಕರಾಗಿದ್ದರೆ, ನಿಮ್ಮ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶವೊಂದು ಬಂದಿರಬಹುದು. ಈಗಾಗಲೇ ಅನೇಕರಿಗೆ ಇಂತಹದೊಂದು ಮೆಸೇಜ್ ಕಂಪನಿಯಿಂದ ಕಡೆಯಿಂದ ಕಳುಹಿಸಲಾಗಿದೆ. ಈ ಮೆಸೇಜ್​ನಲ್ಲಿ ನಿಮ್ಮ ಸೇವೆಯನ್ನು ಸ್ಥಗಿತಗೊಂಡಿದ್ದು, ಹೀಗಾಗಿ ಸೇವೆಯನ್ನು ಮುಂದುವರಿಸಲು ಮೊಬೈಲ್ ಸಂಖ್ಯೆಗಳನ್ನು ರೀಚಾರ್ಜ್ ಮಾಡುವಂತೆ ಕೇಳಲಾಗಿದೆ. ಆದರೆ ಇಂತಹ ಮೆಸೇಜ್ ಬಂದರೆ ಚಿಂತಿಸುವ ಅವಶ್ಯಕತೆಯಿಲ್ಲ ಎಂದು ಖುದ್ದು ಏರ್​​ಟೆಲ್ ಸ್ಪಷ್ಟಪಡಿಸಿದೆ.

ಏರ್​​ಟೆಲ್ ಕಂಪೆನಿಯಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಇಂತಹ ಸಂದೇಶಗಳು ರವಾನೆಯಾಗುತ್ತಿದೆ. ಈ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಏರ್​ಟೆಲ್ ಕಂಪೆನಿಯು ತಿಳಿಸಿದೆ. ಈಗಾಗಲೇ ಅನೇಕರಿಗೆ ಈ ಮೆಸೇಜ್ ಬಂದಿದ್ದು, ಈ ಬಗ್ಗೆ ಹಲವರು ಏರ್​ಟೆಲ್ ಕಂಪೆನಿಗಳಿಗೆ ದೂರು ನೀಡಿದ್ದಾರೆ. ಈ ದೂರಿಗೆ ಉತ್ತರವಾಗಿ ಇದೀಗ ಏರ್​ಟೆಲ್ ಕಂಪೆನಿಯು ಸ್ಪಷ್ಟನೆ ನೀಡಿದೆ.

‘ನಿಮ್ಮ ಚಾಲನೆಯಲ್ಲಿರುವ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದುವರಿಸಲು, airtel.in ಮೇಲೆ ಕ್ಲಿಕ್ ಮಾಡಿ ಪ್ರಿಪೇಯ್ಡ್/ಪ್ರಿಪೇಯ್ಡ್-ರೀಚಾರ್ಜ್ ಮಾಡಿ ಅಥವಾ 121 ಡಯಲ್ ಮಾಡಿ. ಈಗ ನಿಮ್ಮ ಪ್ರಿಪೇಯ್ಡ್ ಪ್ಯಾಕ್ ಖಾಲಿಯಾದರೆ, ನೀವು ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಬೇಕು. ಆದರೆ ನೀವು ಇತ್ತೀಚೆಗೆ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿದ್ದರೆ ಈ ಸಂದೇಶವನ್ನು ನಿರ್ಲಕ್ಷಿಸಬೇಕು ಎಂದು ಈ ಮೆಸೇಜ್​ನಲ್ಲಿ ತಿಳಿಸಲಾಗಿದೆ.

“ನಮ್ಮ ಕಡೆಯಿಂದ ಉಂಟಾದ ತಾಂತ್ರಿಕ ದೋಷದಿಂದಾಗಿ, ಸೇವೆಯನ್ನು ನಿಷ್ಕ್ರಿಯಗೊಳಿಸುವ ಕುರಿತು ನಿಮಗೆ ತಪ್ಪಾದ SMS ಬಂದಿರಬಹುದು. ದಯವಿಟ್ಟು ಅದನ್ನು ನಿರ್ಲಕ್ಷಿಸಿ. ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ” ಎಂದು ಏರ್​ಟೆಲ್ ತನ್ನದೇ ಫೇಕ್ ಮೆಸೇಜ್ ಬಗ್ಗೆ ಸ್ಪಷ್ಟನೆ ನೀಡಿದೆ.

ಏರ್‌ಟೆಲ್‌ನ ಇತ್ತೀಚಿನ ರಿಚಾರ್ಜ್​ ಯೋಜನೆಗಳು:
ಏರ್​ಟೆಲ್ ಈಗಾಗಲೇ 49 ರೂ. ಪ್ಲ್ಯಾನ್​ ಅನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ 79 ರೂ. ಯೋಜನೆಯನ್ನು ಪರಿಚಯಿಸಿದೆ. ಈ ರಿಚಾರ್ಜ್​ನಲ್ಲಿ ಗ್ರಾಹಕರಿಗೆ 64 ರೂ. ಟಾಕ್​ಟೈಮ್ ಹಾಗೂ 200 ಎಂಬಿ ಡೇಟಾ ಸಿಗಲಿದೆ ಇದರ ವಾಲಿಟಿಡಿ 28 ದಿನಗಳು.

ಇದಲ್ಲದೇ, ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ಯೋಜನೆಗಳನ್ನು ಸಹ ಪರಿಚಯಿಸಿದೆ. 299 ರೂ. ಪ್ಲ್ಯಾನ್​ನಲ್ಲಿ ರೀಚಾರ್ಜ್ ಮಾಡಿದರೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಜೊತೆಗೆ 30GB ಡೇಟಾ, ಅನಿಯಮಿತ ಕರೆ ಅವಕಾಶ ನೀಡಲಿದೆ. ಇದರ ವಾಲಿಡಿಟಿ 30 ದಿನಗಳು.

ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್​ ಹೋಸ್ಟೆಸ್: ಆಮೇನಾಯ್ತು?

ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್​ಪ್ರೀತ್ ಬುಮ್ರಾ

(If Airtel informs you that your services have been discontinued, just ignore it)