Smart TV: ಬರುತ್ತಿವೆ ಹಬ್ಬ ಹರಿದಿನ: ಡಿಸ್ಕೌಂಟ್​ನಲ್ಲಿ ಸ್ಮಾರ್ಟ್​ ಟಿವಿ ಖರೀದಿಸುವ ಪ್ಲಾನ್ ಇದ್ದರೆ ಇಲ್ಲಿದೆ ಟಿಪ್ಸ್

Best Smart TV: ಇಂದಿನ ಲೇಖನದಲ್ಲಿ ಒಂದು ಸ್ಮಾರ್ಟ್‌ಟಿವಿಯನ್ನು ಮನೆಗೆ ಕೊಂಡೊಯ್ಯಬೇಕಾದರೆ ನೀವು ಏನೆಲ್ಲಾ ತಿಳಿದಿರಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

Smart TV: ಬರುತ್ತಿವೆ ಹಬ್ಬ ಹರಿದಿನ: ಡಿಸ್ಕೌಂಟ್​ನಲ್ಲಿ ಸ್ಮಾರ್ಟ್​ ಟಿವಿ ಖರೀದಿಸುವ ಪ್ಲಾನ್ ಇದ್ದರೆ ಇಲ್ಲಿದೆ ಟಿಪ್ಸ್
Smart TV
Follow us
TV9 Web
| Updated By: Vinay Bhat

Updated on: Aug 08, 2021 | 3:12 PM

ಇನ್ನೇನು ಹಬ್ಬಗಳ ದಿನಗಳು ಬರಲಾರಂಭಿಸಿವೆ. ಪ್ರಸಿದ್ಧ ಇ ಕಾಮರ್ಸ್​ ತಾಣ, ಎಲೆಕ್ಟ್ರಾನಿಕ್ ಶಾಪ್​ಗಳನ್ನು ಆಫರ್​ಗಳ ಮಳೆ ಸುರಿಯಲಿದೆ. ಭರ್ಜರಿ ಡಿಸ್ಕೌಂಟರ್​ನಲ್ಲಿ ಸ್ಮಾರ್ಟ್​ಫೋನ್, ಸ್ಮಾರ್ಟ್​ ಟಿವಿ ಸೇರಿದಂತೆ ಅನೇಕ ಪ್ರಾಡಕ್ಟ್​ಗಳು ಲಭ್ಯವಾಗುತ್ತಿವೆ. ಅಂತೆಯೆ ನೀವು ಹೊಸ ಟಿವಿಯನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಒಮ್ಮೆ ಇಲ್ಲಿ ಕಣ್ಣು ಹಾಯಿಸಿ. ನಾವು ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ. ಹೊಸ ಟಿವಿಗಳಲ್ಲಿ ಏನೇನು ವೈಶಿಷ್ಟ್ಯಗಳಿರಬೇಕು, ಟಿವಿಯ ಗಾತ್ರ ದಿಂದ ಹಿಡಿದು, ಟಿವಿಯಲ್ಲಿರುವ ಗುಣ ವಿಶೇಷತೆಗಳೆಲ್ಲವನ್ನು ಸಹ ನೀವು ತಿಳಿದುಕೊಂಡಿರಬೇಕು.

ಹಾಗಾಗಿ, ಇಂದಿನ ಲೇಖನದಲ್ಲಿ ಒಂದು ಸ್ಮಾರ್ಟ್‌ಟಿವಿಯನ್ನು ಮನೆಗೆ ಕೊಂಡೊಯ್ಯಬೇಕಾದರೆ ನೀವು ಏನೆಲ್ಲಾ ತಿಳಿದಿರಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಟಿವಿಯ ಗಾತ್ರ ಮತ್ತು ವೀಕ್ಷಣೆ:

42 ಇಂಚು ಪರದೆಯ 1080ಪಿಕ್ಸೆಲ್ ಸ್ಕ್ರೀನ್ ಇರುವ ಟಿವಿಯನ್ನು ನೋಡಲು ಪ್ರಶಸ್ತವಾದ ಅಂತರವೆಂದರೆ 5.5 ಅಡಿ. 46 ಇಂಚಿನ ಟಿವಿ ನೋಡಬೇಕಾದ ಪ್ರಶಸ್ತ ಅಂತರ 6 ಅಡಿ. ಅಂತರಕ್ಕೆ ತಕ್ಕಂತೆ ಸ್ಕ್ರೀನ್ ಗಾತ್ರವಿರುವ ಟಿವಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತೆಯೆ ಹೆಚ್ಚು ರೆಸೊಲ್ಯುಶನ್ ಇದ್ದಷ್ಟೂ ಟಿವಿಯಲ್ಲಿ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹೀಗಾಗಿ, ನಿಮ್ಮ ಬಜೆಟ್ ಹೆಚ್ಚಿನದ್ದಾಗಿದ್ದರೆ 4ಕೆ ಟಿವಿ ಉತ್ತಮ. ಇಲ್ಲವಾಗಿದ್ದರೆ ಕನಿಷ್ಠಪಕ್ಷ ಫುಲ್ ಹೆಚ್‌ಡಿ ಟಿವಿ ಖರೀದಿಸಿ. ಮುಖ್ಯವಾಗಿ HD ರೆಡಿ (1366 x 768 ಪಿಕ್ಸೆಲ್ಸ್), ಫುಲ್ HD (1920 x 1080 ಪಿಕ್ಸೆಲ್ಸ್) ಮತ್ತು 4K (3840 x 2160 ಪಿಕ್ಸೆಲ್ಸ್) ಟಿವಿಗಳನ್ನು ಖರೀದಿ ಮಾಡಿ.

LED ಅಥವಾ OLED:

OLED (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್) ಡಿಸ್‌ಪ್ಲೇ ತಂತ್ರಜ್ಞಾನವು ಸಾಮಾನ್ಯ LED ಟಿವಿಗಳಿಗಿಂತ ಉತ್ತಮ. ಏಕೆಂದರೆ, ಸ್ಮಾರ್ಟ್‌ಫೋನ್‌ನಲ್ಲಿರುವಂತೆಯೇ OLED ಟಿವಿಗಳಲ್ಲಿ ನಿರ್ದಿಷ್ಟ ಪಿಕ್ಸೆಲ್‌ಗಳನ್ನು ಆನ್/ಆಫ್ ಮಾಡಬಹುದಾಗಿದೆ. ಇದು ವಿದ್ಯುತ್ ಉಳಿತಾಯಕ್ಕೆ ಪೂರಕ. OLED ಗಳಲ್ಲಿ ವೀಕ್ಷಣೆಯ ಕೋನವೂ ವಿಸ್ತಾರವಾಗಿರುತ್ತದೆ ಮತ್ತು ಬಣ್ಣಗಳು ಉತ್ತಮವಾಗಿ ಗೋಚರಿಸುತ್ತವೆ. ಇನ್ನೂ ಹೊಸ ಟಿವಿ ಖರೀದಿಸುವಾಗ ಹೆಚ್ಚಿನವರು ನಿರ್ಲಕ್ಷಿಸುವುದೆಂದರೆ ಅದರಲ್ಲಿ ಎಷ್ಟು ಪೋರ್ಟ್‌ಗಳಿರಬೇಕು ಎಂಬ ಅಂಶ. ಹೆಚ್ಚು ಪೋರ್ಟ್‌ಗಳಿದ್ದಷ್ಟು ಹೆಚ್ಚು ಸಾಧನಗಳನ್ನು ನಿಮ್ಮ ಟಿವಿಗೆ ಸಂಪರ್ಕಿಸಬಹುದಾಗಿದೆ. ಹೀಗಾಗಿ, ಕನಿಷ್ಠ 3 ಹೆಚ್‌ಡಿಎಂಐ ಪೋರ್ಟ್‌ಗಳು, ಎರಡು ಯುಎಸ್‌ಬಿ ಪೋರ್ಟ್‌ಗಳು ಹಾಗೂ ಆಪ್ಟಿಕಲ್ ಆಡಿಯೋ ಪೋರ್ಟ್ ಇರುವ ಟಿವಿ ಖರೀದಿಸುವುದು ಉತ್ತಮ.

ಇನ್ನೂ ಯಾವುದೇ ಸ್ಮಾರ್ಟ್ ಟಿವಿಯಲ್ಲಿ ಆನ್‌ಲೈನ್ ಮೂಲಗಳು ಅಥವಾ ಸ್ಥಳೀಯ ಸಾಧನಗಳಿಂದ ವೈವಿಧ್ಯಮಯ ಆಡಿಯೋ-ವೀಡಿಯೋ ಫೈಲುಗಳನ್ನು ಸ್ವೀಕರಿಸುವ ಇಂಟರ್ಫೇಸ್ ಇರುತ್ತದೆ. ಕೆಲವು ಟಿವಿಗಳಲ್ಲಿ ಆ್ಯಪ್‌ಗಳು, ಸೋಷಿಯಲ್ ನೆಟ್‌ವರ್ಕ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಸೌಲಭ್ಯವಿರುತ್ತದೆ. ಹಾಗಾಗಿ, ಆಂಡ್ರಾಯ್ಡ್ ಅಥವಾ ವೆಬ್ಒಎಸ್ ಇರುವ ಟಿವಿಗಳು ಅತ್ಯುತ್ತಮ ಆಯ್ಕೆ.

ಪ್ರಚಾರವಿರದ ಬ್ರ್ಯಾಂಡ್‌ಗಳನ್ನು ನಂಬಬಹುದೇ?:

ಹೆಚ್ಚಿನ ಖರೀದಿದಾರರು ಸ್ಯಾಮ್​ಸಂಗ್, ಎಲ್‌ಜಿ, ಸೋನಿ, ಪ್ಯಾನಾಸೋನಿಕ್ ಮತ್ತು ಫಿಲಿಪ್ಸ್‌ನಂಥ ಹೆಚ್ಚು ಪ್ರಚಾರದಲ್ಲಿರುವ ಬ್ರ್ಯಾಂಡ್‌ಗಳ ಮೊರೆ ಹೋಗುತ್ತಾರೆ. ಆದರೆ, ಕಡಿಮೆ ಪ್ರಚಾರ ಇರುವವುಗಳ ಗುಣಮಟ್ಟವೇನೂ ತೀರಾ ಕಳಪೆಯಾಗಿರುವುದಿಲ್ಲ. ಶವೋಮಿ, ಧಾಮ್ಸ್ನ್ ವಿಯು ಮತ್ತು ಇಂಟೆಕ್ಸ್ ಮುಂತಾದ ಕಂಪನಿಗಳ ಟಿವಿಗಳು ಕೂಡ ಉತ್ತಮ ಕ್ವಾಲಿಟಿಯನ್ನು ಹೊಂದಿರುತ್ತದೆ.

ಭಾರತದ ಮೈಕ್ರೋಮ್ಯಾಕ್ಸ್​ IN 2B ಸ್ಮಾರ್ಟ್​ಫೋನನ್ನು ಕೇವಲ 549 ರೂ. ಗೆ ಖರೀದಿಸುವ ಅವಕಾಶ

ಇಂದು ಮಾತ್ರ: ಭರ್ಜರಿ ಆಫರ್​ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್

(Smart TV Buying Guide What to Know Before Buying a Smart TV in Amazon Flipkart or offline store)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ