ಟೆಕ್ ಮಾರುಕಟ್ಟೆಯಲ್ಲಿ ಈಗ ನಾನಾರೀತಿಯ ಚಾರ್ಜರ್ಗಳಿವೆ. ಐಫೋನ್ಗಳಿಗೆ ಒಂದು ವಿಧದ ಚಾರ್ಜರ್ ಆದರೆ ಆಂಡ್ರಾಯ್ಡ್ನ ಒಂದೊಂದು ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಅದರದ್ದೇ ಆದ ಪೋರ್ಟ್ಗಳಿಗೆ ಬೇರೆ ಬೇರೆ ಚಾರ್ಜರ್ ಇರುತ್ತದೆ. ಐಪಾಡ್ ಮತ್ತು ಇಯರ್ ಫೋನ್ಗಳಿಗೂ ಪ್ರತ್ಯೇಕ ಚಾರ್ಜರ್ಗಳಿವೆ. ಹೆಚ್ಚಾಗಿ ಆ್ಯಂಡ್ರಾಯ್ಡ್ (Android) ಬಳಕೆದಾರರು ಟೈಪ್- ಸಿ ಚಾರ್ಜರ್, ಮೈಕ್ರೊ ಯುಎಸ್ಬಿ (Micro USB) ಬಳಸುತ್ತಿದ್ದಾರೆ. ಹೀಗೆ ಅನೇಕ ಮಾದರಿಯ ಚಾರ್ಜರ್ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಅರಿತಿರುವ ಯುರೋಪಿಯನ್ ಕಮಿಷನ್ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಮೊಬೈಲ್ ಫೋನ್, ಐಪ್ಯಾಡ್ ಹಾಗೂ ಇಯರ್ ಫೋನ್ಗಳಿಗೆ ಒಂದೇ ವಿಧದ ಚಾರ್ಜರ್ (Charger) ಪೋರ್ಟ್ ಇರಬೇಕೆಂದು ಆದೇಶ ಹೊರಡಿಸಿದೆ.
ಈ ಬಗ್ಗೆ ಮಾತನಾಡಿರುವ ಯುಎಸ್ಬಿ ಅನ್ನು ಮೊದಲ ಬಾರಿಗೆ 1995 ರಲ್ಲಿ ಕಂಡು ಹಿಡಿದ ಭಾರತ ಮೂಲದ ಇಂಜಿನಿಯರ್ ಅಜಯ್ ವಿ ಭಟ್, “ಮುಂದಿನ ದಿನಗಳಲ್ಲಿ ಬಳಕೆದಾರರು ಯುಎಸ್ಬಿ ಕೇವಲ ಅಥವಾ ಚಾರ್ಜರ್ಗಾಗಿ ಅಲೆದಾಡುವ ಪ್ರಮೆಯವೇ ಬರುವುದಿಲ್ಲ ಎಂದು ಹೇಳಿದ್ದಾರೆ. ಯುಎಸ್ಬಿ ಟೈ-ಸಿ ಚಾರ್ಜರ್ ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರವಹಿಸಲಿದೆ. ಇದರಿಂದ ಅತ್ಯಂತ ವೇಗವಾಗಿ ಚಾರ್ಜಿಂಗ್ ಆಗಲಿದೆ. ಇಷ್ಟು ಮಾತ್ರವಲ್ಲದೆ ನಿಮಗೆ ಫೈಲ್ ವರ್ಗಾವಣೆ ಕೂಡ ವೇಗವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
Jio vs Airtel: 666 ರೂ. ಪ್ಲಾನ್: ಜಿಯೋ ಏರ್ಟೆಲ್ನಲ್ಲಿ ಒಂದೇ ಬೆಲೆಯ ಯೋಜನೆ: ಯಾವುದು ಬೆಸ್ಟ್?
ಯುಎಸ್ಬಿ ಟೈಪ್-ಸಿಯು ತನ್ನ ಮುಂದಿನ ಅಪ್ಡೇಟ್ನಲ್ಲಿ 240W ವೇಗದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಸಾಕಷ್ಟು ಶಕ್ತಿಯುತವಾಗಿರುತ್ತದೆ. ದಿನಕಳೆದಂತೆ ಟೈಪ್-ಸಿ ಚಾರ್ಜರ್ನ ಅಗತ್ಯ ಹೆಚ್ಚಾಗಲಿದ್ದು ಎಲ್ಲ ಸಾಧನಕ್ಕೂ ಇದನ್ನೆ ಅಳವಡಿಸಬೇಕಾಗಿ ಬರುತ್ತದೆ. ಪ್ರಪಂಚದಾದ್ಯಂತ ಅಂದಾಜು 6 ಶತಕೋಟಿ ಯುಎಸ್ಬಿ ಕನೆಕ್ಟರ್‌ಗಳು ಬಳಕೆಯಲ್ಲಿವೆ ಎಂಬುದು ಅವರ ಮಾತು.
ಇನ್ನು ಯುರೋಪಿಯನ್ ಕಮಿಷನ್ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್ಫೋನ್ ಸಾಮಾನ್ಯ ಜಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್ಬಿ-ಸಿ ಕನೆಕ್ಟರ್ ಎಲ್ಲಾ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು, ಹೆಡ್ಫೋನ್ಗಳು, ಫೋರ್ಟಬಲ್ ಸ್ಪೀಕರ್ಗಳು ಮತ್ತು ಹ್ಯಾಂಡ್ಹೆಲ್ಡ್ ವಿಡಿಯೋಗೇಮ್ ಕನ್ಸೋಲ್ಗಳಿಗೆ ಪ್ರಮಾಣಿತ ಪೋರ್ಡ್ ನೀಡಬೇಕು ಎಂದಿದೆ. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ.
ಈ ವಿಚಾರ ತಿಳಿದು ಆ್ಯಪ್ ಸಂಸ್ಥೆಯೊಂದು ಯುರೋಪಿಯನ್ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ. ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್ ಮತ್ತು ಐಫೊನ್ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್ ಪೋರ್ಟ್ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್ಫೋನ್ ಮತ್ತು ಚಾರ್ಜರ್ ಫೋರ್ಟ್ಗಳು ಬೇರ ಬೇರೆ ಆಗಿದೆ.
POCO F4 5G: ರಿಲೀಸ್ ಆದ ಎರಡೇ ದಿನಕ್ಕೆ ಪೋಕೋ F4 5G ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್