Lava Blaze 2: ಕೇವಲ 8,999 ರೂ. ಗೆ ಮಾರಾಟ ಕಾಣುತ್ತಿದೆ ನಮ್ಮ ಭಾರತದ ಸ್ಮಾರ್ಟ್​ಫೋನ್

|

Updated on: Apr 18, 2023 | 6:15 PM

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಬೆಲೆಗೆ ತಕ್ಕಂತೆ 6.5-ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದ್ದು ಪಂಚ್‌ ಹೋಲ್‌ ವಿನ್ಯಾಸದಿಂದ ಕೂಡಿದೆ.

Lava Blaze 2: ಕೇವಲ 8,999 ರೂ. ಗೆ ಮಾರಾಟ ಕಾಣುತ್ತಿದೆ ನಮ್ಮ ಭಾರತದ ಸ್ಮಾರ್ಟ್​ಫೋನ್
lava blaze 2
Follow us on

ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು (Smartphones) ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ (Lava) ಕಂಪನಿ ಕಳೆದ ವಾರ ದೇಶದಲ್ಲಿ ಊಹಿಸಲಾಗದ ಬೆಲೆಗೆ ಆಕರ್ಷಕ ಫೋನೊಂದನ್ನು ಅನಾವರಣ ಮಾಡಿತ್ತು. ಇದರ ಹೆಸರು ಲಾವಾ ಬ್ಲೇಜ್‌ 2 (Lava Blaze 2). ಇದು ಲಾವಾ ಬ್ಲೇಜ್‌ ಫೋನ್​ನ ಮುಂದಿನ ವರ್ಷನ್ ಆಗಿದೆ. ಇದುಕೂಡ ಬಜೆಟ್ ಬೆಲೆ ಫೋನಾಗಿದೆ. ಹೀಗಿದ್ದರು, 5,000mAh ಸಾಮರ್ಥ್ಯದ ಬ್ಯಾಟರಿ, ಡ್ಯುಯಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಇದೀಗ ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ.

ಬೆಲೆ ಎಷ್ಟು?:

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಇಂದು ಮಧ್ಯಾಹ್ನ 12 ಗಂಟೆಯಿಂದ ಲಾವಾ ಅಧಿಕೃತ ವೆಬ್​ಸೈಟ್​ನಲ್ಲಿ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಪ್ರಾರಂಭಿಸಿದೆ. ಇದು ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಆರೆಂಜ್‌ ಕಲರ್‌ ಆಯ್ಕೆಗಳಲ್ಲಿ ಅನಾವರಣಗೊಂಡಿತ್ತು.

ಇದನ್ನೂ ಓದಿ
Vivo T2 5G: ಇದು ಅತಿ ಕಡಿಮೆ ಬೆಲೆಯ ಬೆಸ್ಟ್ 5G ಸ್ಮಾರ್ಟ್​ಫೋನ್‌: ಇಂದಿನಿಂದ ವಿವೋ T2 ಖರೀದಿಗೆ ಲಭ್ಯ
Samsung Galaxy M14 5G: ಬರೋಬ್ಬರಿ 6000mAh ಬ್ಯಾಟರಿ: ಸ್ಯಾಮ್​ಸಂಗ್​ನಿಂದ ಹುಬ್ಬೇರಿಸುವಂತಹ ಫೋನ್ ಬಿಡುಗಡೆ: ಭರ್ಜರಿ ಮಾರಾಟ ಖಚಿತ
UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್
Unlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?

Xiaomi Robot Vacuum-Mop 2i: ಸ್ಮಾರ್ಟ್ ಆಗಿ ಮನೆ ಕ್ಲೀನ್ ಮಾಡಲು ಶಓಮಿ ರೊಬಾಟ್ ವಾಕ್ಯೂಮ್ ಮಾಪ್

ಫೀಚರ್ಸ್ ಏನು?:

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ಬೆಲೆಗೆ ತಕ್ಕಂತೆ 6.5-ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದ್ದು ಪಂಚ್‌ ಹೋಲ್‌ ವಿನ್ಯಾಸದಿಂದ ಕೂಡಿದೆ. ಯುನಿಸೋಕ್‌ T616 ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಆಂಡ್ರಾಯ್ಡ್‌ 13 ಒಎಸ್ ನೀಡಲಾಗಿದೆ. ವಿಶೇಷ ಎಂದರೆ ಇದರಲ್ಲಿ 5GB ವರೆಗೆ ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ. ಮೆಮೊರಿ ಕಾರ್ಡ್‌ ಮೂಲಕವೂ ಸ್ಟೋರೇಜ್ ಹೆಚ್ಚಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ನೀಡಲಾಗಿದೆ. ಇದಲ್ಲದೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಪೋರ್ಟ್ರೇಟ್, ನೈಟ್, AI, ಪ್ರೊ, ಬ್ಯೂಟಿ, ಸ್ಲೋ ಮೋಷನ್, ಆಡಿಯೋ ನೋಟ್, ಟೈಮ್‌ಲ್ಯಾಪ್ಸ್, ಫಿಲ್ಟರ್‌ಗಳು, HDR ಮತ್ತು ಪನೋರಮಾದಂತಹ ಆಯ್ಕೆಗಳನ್ನು ನೀಡಲಾಗಿದೆ.

ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುವುದಿಲ್ಲ. 4ಜಿ ಆಯ್ಕೆ ಇದೆ. ಉಳಿದಂತೆ ಹಾಟ್‌ಸ್ಪಾಟ್‌, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್‌, ವೈಫೈ ಹಾಗೂ 3.5mm ಆಡಿಯೋ ಜ್ಯಾಕ್, ಫಿಂಗರ್​ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಎಲ್ಲ ಆಯ್ಕೆಗಳಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ