ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಎರಡು ದಿನಗಳ ಹಿಂದೆಯಷ್ಟೆ ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 (Infinix Smart 8) ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿತ್ತು. ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G36 SoC ಮತ್ತು 5,000mAh ಬ್ಯಾಟರಿಯೊಂದಿಗೆ ಬಿಡುಗಡೆ ಆಗಿರುವ ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ವಿಶೇಷ ಎಂದರೆ ಈ ಹೊಸ ಫೋನ್‌ನಲ್ಲಿ ಮ್ಯಾಜಿಕ್ ರಿಂಗ್ ವೈಶಿಷ್ಟ್ಯವು ಲಭ್ಯವಿರುತ್ತದೆ, ಇದು ನಿಮಗೆ ಐಫೋನ್‌ನ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯದಂತೆ ವಿನೋದವನ್ನು ನೀಡುತ್ತದೆ. ಬಜೆಟ್ ಬೆಲೆಯಿಂದ ಕೂಡಿದ್ದರೂ ಆಕರ್ಷಕ ಫೀಚರ್ಗಳನ್ನು ನೀಡಲಾಗಿದೆ. ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಒಂದೇ RAM ಆಯ್ಕೆಯಲ್ಲಿರುವ ರಿಲೀಸ್ ಆಗಿರುವ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನಿನ 4GB + 64GB ಸಂಗ್ರಹಣೆಗೆ ಭಾರತದಲ್ಲಿ ಕೇವಲ 7,499 ರೂ. ನಿಗದಿ ಮಾಡಲಾಗಿದೆ. ಮೊದಲ ಸೇಲ್ ಪ್ರಯುಕ್ತ ಈ ಫೋನನ್ನು ನೀವು 6,749 ರೂ. ಗೆ ಖರೀದಿಸಬಹುದು. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಕಾಣುತ್ತಿದೆ. ಈ ಹ್ಯಾಂಡ್ಸೆಟ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ – ಗ್ಯಾಲಕ್ಸಿ ವೈಟ್, ರೇನ್ಬೋ ಬ್ಲೂ, ಶೈನಿ ಗೋಲ್ಡ್ ಮತ್ತು ಟಿಂಬರ್ ಬ್ಲಾಕ್.
Nothing Phone 2a: ಸಖತ್ ಸೌಂಡ್ ಮಾಡುತ್ತಿದೆ ನಥಿಂಗ್ ಫೋನ್ 2a ಸ್ಮಾರ್ಟ್ಫೋನ್: ಹೇಗಿರಲಿದೆ?
ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್ 6.6-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ ಜೊತೆಗೆ 90Hz ವರೆಗಿನ ರಿಫ್ರೆಶ್ ದರ, 500 nits ನ ಗರಿಷ್ಠ ಹೊಳಪು ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ 4GB LPDDR4X RAM ಮತ್ತು 64GB eMMC 5.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ 12nm ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G36 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. RAM ಅನ್ನು 8GB ವರೆಗೆ ಮತ್ತು ಸಂಗ್ರಹಣೆಯನ್ನು ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 13 Go ಆವೃತ್ತಿ ಆಧಾರಿತ XOS 13 ನೊಂದಿಗೆ ರನ್ ಆಗುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಇನ್ಫಿನಿಕ್ಸ್ ಸ್ಮಾರ್ಟ್ 8 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ AI-ಬೆಂಬಲಿತ ಲೆನ್ಸ್ ಮತ್ತು ಕ್ವಾಡ್-LED ರಿಂಗ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಮುಂಭಾಗದ ಕ್ಯಾಮೆರಾವು 8-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿದೆ. ಇದರಲ್ಲಿ ಕೂಡ ಎಲ್ಇಡಿ ಫ್ಲ್ಯಾಷ್ ನೀಡಲಾಗಿದೆ. ಇದರಲ್ಲಿರುವ ಮ್ಯಾಜಿಕ್ ರಿಂಗ್ ವೈಶಿಷ್ಟ್ಯವು ಆ್ಯಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆ ಬಳಕೆದಾರರಿಗೆ ನೋಟಿಫಿಕೇಷನ್, ಅಲರ್ಟ್, ಬ್ಯಾಟರಿ ಪರ್ಸಂಟೇಜ್ ಇತ್ಯಾದಿಗಳನ್ನು ತೋರಿಸುತ್ತದೆ.
ಈ ಫೋನಿನಲ್ಲಿ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಡ್ಯುಯಲ್ 4G, ನ್ಯಾನೊ SIM, Wi-Fi, ಬ್ಲೂಟೂತ್ 5.0, GPS, GLONASS ಮತ್ತು USB ಟೈಪ್-ಸಿ ಸಂಪರ್ಕವನ್ನು ನೀಡುತ್ತದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ