Infinix Zero 5G: ಫಾಸ್ಟ್ ಚಾರ್ಜಿಂಗ್, 5000mAh ಬ್ಯಾಟರಿ, ಭರ್ಜರಿ ಕ್ಯಾಮೆರಾದ ಈ ಫೋನ್ ಇದೀಗ ಖರೀದಿಗೆ ಲಭ್ಯ

ಇನ್ಫಿನಿಕ್ಸ್‌ ಜಿರೋ 5ಜಿ ಇದು ಇನ್ಫಿನಿಕ್ಸ್‌ ಕಂಪನಿಯ ಚೊಚ್ಚಲ 5G ಸ್ಮಾರ್ಟ್‌ಫೋನ್‌ (Smartphone) ಆಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, ಮೀಡಿಯಾಟೆಕ್‌ ಡೈಮೆನ್ಸಿಟಿ ಪ್ರೊಸೆಸರ್‌, ಪವರ್ ಫುಲ್ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್​ಫೋನ್​ ಕಡಿಮೆ ಬೆಲೆಗೆ ಲಭ್ಯವಿದೆ.

Infinix Zero 5G: ಫಾಸ್ಟ್ ಚಾರ್ಜಿಂಗ್, 5000mAh ಬ್ಯಾಟರಿ, ಭರ್ಜರಿ ಕ್ಯಾಮೆರಾದ ಈ ಫೋನ್ ಇದೀಗ ಖರೀದಿಗೆ ಲಭ್ಯ
Infinix Zero 5G
Follow us
TV9 Web
| Updated By: Vinay Bhat

Updated on: Feb 18, 2022 | 2:54 PM

ಮೊನ್ನೆಯಷ್ಟೆ ಪ್ರೇಮಿಗಳ ದಿನದಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿ ಸಾಕಷ್ಟು ಸುದ್ದಿಯಾಗಿದ್ದ ಇನ್ಫಿನಿಕ್ಸ್‌ ಕಂಪನಿಯ ಹೊಸ ಇನ್ಫಿನಿಕ್ಸ್‌ ಜಿರೋ 5ಜಿ (Infinix Zero 5G) ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಲಭ್ಯವಾಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್​ನಲ್ಲಿ (Flipkart) ಸೇಲ್ ಕಾಣುತ್ತಿದ್ದು, ಆಕರ್ಷಕ ಆಫರ್​ಗಳ ಮೂಲಕ ಮೂಲಬೆಲೆಗಿಂತಲೂ ಕಡಿಮೆ ದರಕ್ಕೆ ಖರೀದಿಸಬಹುದಾಗಿದೆ. ಇದು ಇನ್ಫಿನಿಕ್ಸ್‌ ಕಂಪನಿಯ ಚೊಚ್ಚಲ 5G ಸ್ಮಾರ್ಟ್‌ಫೋನ್‌ (Smartphone) ಆಗಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, ಮೀಡಿಯಾಟೆಕ್‌ ಡೈಮೆನ್ಸಿಟಿ ಪ್ರೊಸೆಸರ್‌, ಪವರ್ ಫುಲ್ ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್​ಫೋನ್​ ಕಡಿಮೆ ಬೆಲೆಗೆ ಲಭ್ಯವಿದೆ.

ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಇದರ 8 GB RAM ಮತ್ತು 128 GB ಸ್ಟೋರೆಜ್ ಸಾಮರ್ಥ್ಯಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಫಸ್ಟ್‌ ಸೇಲ್​​ನ​ಲ್ಲಿ ಫ್ಲಿಪ್‌ಕಾರ್ಟ್‌ ಸ್ಮಾರ್ಟ್ ಅಪ್‌ಗ್ರೇಡ್ ಪ್ಲಾನ್‌ ಮೂಲಕ ವಿಶೇಷ ಆಫರ್‌ ಪಡೆಯಬಹುದು. ಸ್ಮಾರ್ಟ್‌ ಅಪ್‌ಗ್ರೇಡ್‌ ಪ್ಲಾನ್​​​ನಲ್ಲಿ ಬಳಕೆದಾರರು ಫೋನ್‌ನ ಬೆಲೆಯ 70% ಅಂದರೆ 14,098 ರೂ.ಗಳನ್ನು ಪಾವತಿಸಬಹುದು. ಒಂದು ವರ್ಷದ ನಂತರ, ನೀವು ಉಳಿದ 30% ಹಣವನ್ನು ಪಾವತಿಸಬಹುದು ಅಥವಾ ಫೋನ್ ಅನ್ನು ಹಿಂತಿರುಗಿಸಬಹುದಾದ ಆಯ್ಕೆ ನೀಡಲಾಗಿದೆ.

ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ 1080 x 2460 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌ 11ನ ಮೇಲೆ XOS 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ ಜಿರೋ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ವೈಫೈ, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.

OnePlus TV Y1S: ಹೊಸ ಟಿವಿ ಖರೀದಿಸಬೇಕೆ?: ಒನ್​ಪ್ಲಸ್ ರಿಲೀಸ್ ಮಾಡಿದೆ ಕೇವಲ 16,499 ರೂ. ಗೆ ಬೊಂಬಾಟ್ ಸ್ಮಾರ್ಟ್​ ಟಿವಿ

Samsung Galaxy S22 Series: 72,999 ರೂ. ಗೆ ಬಿಡುಗಡೆ ಆಗಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಯ ಮೂರು ಸ್ಮಾರ್ಟ್​ಫೋನ್

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ