ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಮೇಟಾ ಕಂಪನಿಯ ಪ್ರಸಿದ್ಧ ಆ್ಯಪ್ ಇನ್ಸ್ಟಾಗ್ರಾಮ್ನಲ್ಲಿ (Instagram ) ಲಾಗಿನ್ ಆಗಲು ಇಂದು (ಅ.31) ಸಾಕಷ್ಟು ಜನರು ಪರದಾಡಿದ್ದಾರೆ. ಇದಕ್ಕೆ ಕಾರಣ ಇನ್ಸ್ಟಾಗ್ರಾಮ್ ಜಗತ್ತಿನಾದ್ಯಂತ ಕೆಲವು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದ ರಾತ್ರಿ 8:43 ನಿಮಿಷಕ್ಕೆ ಹಲವು ಖಾತೆಗಳನ್ನು ಅಮಾನತುಗೊಂಡಿದ್ದವು. ಇದರಿಂದ ಸುಮಾರು 3,000 ಬಳಕೆದಾರರು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಅನೇಕ ದೂರುಗಳು ಬಂದಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ಎನ್ಡಿಟಿವಿ ವರದಿ ಮಾಡಿದೆ.
ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು ಅಮಾನತುಗೊಂಡ ತಮ್ಮ ಖಾತೆಗೆ ಮರು ಪ್ರವೇಶಿಸಲು ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಇನ್ಸ್ಟಾಗ್ರಾಮ್ ಕೇಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
We're aware that some of you are having issues accessing your Instagram account. We're looking into it and apologize for the inconvenience. #instagramdown
— Instagram Comms (@InstagramComms) October 31, 2022
ಈ ಕುರಿತು ಇನ್ಸ್ಟಾಗ್ರಾಮ್ ಆಫೀಸಿಯಲ್ ಅಕೌಂಟ್ ಟ್ವೀಟ್ ಮಾಡಿ ನಿಮ್ಮಲ್ಲಿ ಕೆಲವರು ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ” ಎಂದು ಇನ್ಸ್ಟಾಗ್ರಾಮ್ ಟ್ವೀಟ್ ಮಾಡಿದೆ.
ಈ ಹಿಂದೆ ಅಕ್ಟೋಬರ್ 25 ರಂದು ವಾಟ್ಸ್ ಆಪ್ ಕಾರ್ಯ ಕೂಡ ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸಿದ್ದರು. ಇದರಿಂದ ಜಾಗತಿಕವಾಗಿ ಸಾಕಷ್ಟು ಅನುಭವಿಸುವಂತಾಯಿತು ವರದಿಯಾಗಿತ್ತು.
ಮತ್ತಷ್ಟು ತಂತ್ರಜ್ಞಾನದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Mon, 31 October 22