Instagram Reels: ಇನ್‌ಸ್ಟಾ ರೀಲ್ಸ್‌ನಲ್ಲಿ ಹೆಚ್ಚು ರಕ್ತಸಿಕ್ತ ವಿಡಿಯೋಗಳು ಕಾಣಿಸಿಕೊಳ್ಳುತ್ತೆ: ಎಕ್ಸ್ನಲ್ಲಿ ದೂರುಗಳ ಸುರಿಮಳೆ
ಇನ್‌ಸ್ಟಾಗ್ರಾಮ್‌ನ AI ಸೂಕ್ಷ್ಮ ವಿಷಯವನ್ನು ಹೊಂದಿರುವ ಪೋಸ್ಟ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಅಂತಹ ಪೋಸ್ಟ್ ಅಥವಾ ವೀಡಿಯೊ ಸ್ಕ್ಯಾನ್ನಲ್ಲಿ ಸಿಕ್ಕರೆ ಅವುಗಳ ಗೋಚರತೆ ಕಡಿಮೆಯಾಗುತ್ತದೆ. ಆದರೆ, ಸದ್ಯ ಇನ್‌ಸ್ಟಾಗ್ರಾಮ್‌ನ ಹೊಸ ಅಪ್‌ಡೇಟ್‌ನಲ್ಲಿ ಕೆಲವು ಸೂಕ್ಷ್ಮ ಪೋಸ್ಟ್‌ಗಳಿಗೆ ತಪ್ಪಾಗಿ ಆದ್ಯತೆ ನೀಡಿರಬಹುದು ಎಂದು ಹೇಳಲಾಗಿದೆ.

ಬೆಂಗಳೂರು (ಫೆ. 28): ಜನಪ್ರಿಯ ಕಿರು ವೀಡಿಯೊ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಕಂಡುಬಂದ ಹಠಾತ್ ಬದಲಾವಣೆಯು ಬಳಕೆದಾರರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ. ಜನರಿಗೆ ತಮ್ಮ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಸೂಕ್ಷ್ಮ ಮತ್ತು ಹಿಂಸಾತ್ಮಕ ವಿಷಯಗಳಿಂದ ತುಂಬಿದ ರೀಲ್ಸ್ ಕಾಣಿಸುತ್ತದೆ ಎಂದು ದೂರುತ್ತಿದ್ದಾರೆ. ಜನರು ತಮ್ಮ ಫೀಡ್‌ನಲ್ಲಿ ರಕ್ತಪಾತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದಾರೆ. ಸೆನ್ಸಿಟಿವ್ ಕಂಟೆಂಟ್ ವಿಷಯವನ್ನು ಆನ್ ಮಾಡಿರುವ ಬಳಕೆದಾರರಲ್ಲೂ ಇದು ಸಂಭವಿಸುತ್ತಿದೆ. ಈ ಸಮಸ್ಯೆ ಜಾಗತಿಕವಾಗಿ ವರದಿಯಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಹೇಳುವಂತೆ ಆ್ಯಪ್‌ನಲ್ಲಿ ದೋಷವಿದೆ ಅಥವಾ ಅಲ್ಗಾರಿದಮ್ ಬದಲಾವಣೆಯಿಂದ ಇದು ಸಂಭವಿಸಬಹುದು ಎಂದಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಅಥವಾ ಮೆಟಾ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಫುಟ್ಬಾಲ್ ಪೇಜ್ ತೆರೆದಾಗ, ಬರೀ ಫೈಟಿಂಗ್ ವಿಡಿಯೋವೇ ಕಾಣಿಸಿದೆ:
ಇನ್‌ಸ್ಟಾಗ್ರಾಮ್ ರೀಲ್‌ಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿವೆ ಎಂದು ಬಳಕೆದಾರರು ಹೇಳುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾ ಫೀಡ್‌ನಲ್ಲಿ ಯಾರೂ ಏಕೆ ಮಾತನಾಡುತ್ತಿಲ್ಲ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಬಳಕೆದಾರರ ಪ್ರಕಾರ, ಅವನು ತನ್ನ ಫುಟ್ಬಾಲ್ ಪುಟಗಳನ್ನು ಸ್ಕ್ರೋಲ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಹಿಂಸಾತ್ಮಕ ವಿಡಿಯೋಗಳು ಮತ್ತು ರೀಲ್‌ಗಳು ಕಾಣಿಸಲು ಪ್ರಾರಂಭಿಸಿದೆ. ಬಳಕೆದಾರರು ಇದು ತನಗೆ ಮಾತ್ರ ಸಂಭವಿಸಿದೆಯೇ ಅಥವಾ ಏನಾದರೂ ದೋಷವಿದೆಯೇ ಎಂದು ಕೇಳಿದ್ದಾರೆ. ಇನ್ನಷ್ಟು ಸ್ಕ್ರಾಲ್ ಮಾಡಿದ ನಂತರ, ಸೂಕ್ಷ್ಮ ಮತ್ತು ಹಿಂಸಾತ್ಮಕ ವಿಷಯವನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೇನೆ ಎಂದು ಬಳಕೆದಾರರು ಹೇಳಿದ್ದಾರೆ.
Xiaomi 15 Ultra: ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್ಫೋನ್
ಹಾಗೆಯೆ ಇನ್ನೋರ್ವ ಇನ್‌ಸ್ಟಾಗ್ರಾಮ್ ಬಳಕೆದಾರ ಫೀಡ್‌ನಲ್ಲಿ ಜಗಳ ಮತ್ತು ರಕ್ತಪಾತವನ್ನು ಹೊರತುಪಡಿಸಿ ಬೇರೇನೂ ಗೋಚರಿಸುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಅಂತಹ ರೀಲ್‌ಗಳ ಸಂಖ್ಯೆಯನ್ನು ಎಣಿಸಿದ್ದು ಅವರು ಇಲ್ಲಿಯವರೆಗೆ ಅಂತಹ 12 ಇನ್‌ಸ್ಟಾ ರೀಲ್‌ಗಳನ್ನು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅನೇಕ ಬಳಕೆದಾರರು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಮಸ್ಯೆಯನ್ನು ಎತ್ತುತ್ತಿದ್ದಾರೆ. ಬಳಕೆದಾರರು ಪ್ರತಿ ರೀಲ್ ನಂತರ ಮೂರರಿಂದ ಐದು ರೀಲ್‌ಗಳನ್ನು ನೋಡುತ್ತಾರೆ ಎಂದು ಹೇಳಿದ್ದಾರೆ. ಜನರ ಫೀಡ್‌ಗಳಲ್ಲಿ ಇಂತಹ ರೀಲ್‌ಗಳು ಹೆಚ್ಚಾದಾಗಿನಿಂದ, ಸೂಕ್ಷ್ಮ ವಿಷಯವು ಇದ್ದಕ್ಕಿದ್ದಂತೆ ಹೇಗೆ ಹೆಚ್ಚಾಗಿದೆ ಎಂದು ಕೇಳಲಾಗುತ್ತಿದೆ. ET ವರದಿಯಲ್ಲಿ, ತಜ್ಞರನ್ನು ಉಲ್ಲೇಖಿಸಿ ಎರಡು ಅಂದಾಜುಗಳನ್ನು ಮಾಡಲಾಗಿದೆ. ಮೊದಲನೆಯದಾಗಿ, ಇನ್‌ಸ್ಟಾಗ್ರಾಮ್ ನ ಆ್ಯಪ್‌ನಲ್ಲಿ ದೋಷವಿರಬಹುದು. ಅಥವಾ ಅಲ್ಗಾರಿದಮ್‌ನಲ್ಲಿನ ಬದಲಾವಣೆಯಿಂದಾಗಿರಬಹುದು.
AI ಗೋಚರತೆಯನ್ನು ಕಡಿಮೆ ಮಾಡುತ್ತದೆ:
ವೋಕಲ್ ಮೀಡಿಯಾ ಪ್ರಕಾರ, ಇನ್‌ಸ್ಟಾಗ್ರಾಮ್‌ನ AI ಸೂಕ್ಷ್ಮ ವಿಷಯವನ್ನು ಹೊಂದಿರುವ ಪೋಸ್ಟ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಅಂತಹ ಪೋಸ್ಟ್ ಅಥವಾ ವೀಡಿಯೊ ಸ್ಕ್ಯಾನ್ನಲ್ಲಿ ಸಿಕ್ಕರೆ ಅವುಗಳ ಗೋಚರತೆ ಕಡಿಮೆಯಾಗುತ್ತದೆ. ಆದರೆ, ಸದ್ಯ ಇನ್‌ಸ್ಟಾಗ್ರಾಮ್‌ನ ಹೊಸ ಅಪ್‌ಡೇಟ್‌ನಲ್ಲಿ ಕೆಲವು ಸೂಕ್ಷ್ಮ ಪೋಸ್ಟ್‌ಗಳಿಗೆ ತಪ್ಪಾಗಿ ಆದ್ಯತೆ ನೀಡಿರಬಹುದು ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ, ಸೂಕ್ಷ್ಮ ಮತ್ತು ಹಿಂಸಾತ್ಮಕ ರೀಲ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಆದಾಗ್ಯೂ, ಈ ವಿಷಯದ ಬಗ್ಗೆ ಮೆಟಾ ಇನ್ನೂ ಏನನ್ನೂ ಹೇಳಿಲ್ಲ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 am, Fri, 28 February 25