AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instagram Reels App: ಇನ್​ಸ್ಟಾಗ್ರಾಮ್​ನಿಂದ ಬಹುದೊಡ್ಡ ನಿರ್ಧಾರ: ರೀಲ್ಸ್​ಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ

ಪ್ರತ್ಯೇಕ ರೀಲ್ಸ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ಗೆ ಹೆಚ್ಚಿನ ವೈಶಿಷ್ಟ್ಯಗಳು, ಅತ್ಯುತ್ತಮ ಅನುಭವಗಳು ಮತ್ತು ಶಾರ್ಟ್-ರೂಪದ ವಿಡಿಯೋ ರಚನೆಕಾರರಿಗೆ ಉಪಯೋಗ ಆಗುವಂತಹ ಟಿಕ್‌ಟಾಕ್‌ನೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಅನುವು ಮಾಡಿ ಕೊಡಲಿದೆ ಎನ್ನಲಾಗಿದೆ. ಆದಾಗ್ಯೂ, ಬಳಕೆದಾರರು ಈ ಹೊಸ ಅಪ್ಲಿಕೇಶನ್‌ ಅನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬುದು ನೋಡಬೇಕಿದೆ.

Instagram Reels App: ಇನ್​ಸ್ಟಾಗ್ರಾಮ್​ನಿಂದ ಬಹುದೊಡ್ಡ ನಿರ್ಧಾರ: ರೀಲ್ಸ್​ಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ
Instagram Reels App
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Feb 28, 2025 | 9:06 AM

Share

ಬೆಂಗಳೂರು (ಫೆ. 28): ಇನ್‌ಸ್ಟಾಗ್ರಾಮ್ (Instagram) ತನ್ನ ಶಾರ್ಟ್ ರೂಪದ ವಿಡಿಯೋ ವೈಶಿಷ್ಟ್ಯಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದೆ ಎಂದು ರೀಲ್ಸ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ ಈ ವಾರ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ದಿ ಇನ್‌ಫಾರ್ಮೇಶನ್ ವರದಿ ಮಾಡಿದೆ. ಮೆಟಾ ಮಾಲೀಕತ್ವದ ಕಂಪನಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಿಕ್‌ಟಾಕ್‌ನ ಅನಿಶ್ಚಿತ ಸ್ಥಿತಿಯ ಲಾಭವನ್ನು ಪಡೆಯಲು ನೋಡುತ್ತಿದೆ, ಇದೇ ರೀತಿಯ ವಿಡಿಯೋ-ಸ್ಕ್ರೋಲಿಂಗ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಸೇರಿಸಲಾಗಿದೆ.

ಮೆಟಾ ಅಧಿಕೃತವಾಗಿ ಈ ವಿಚಾರವನ್ನು ದೃಢಪಡಿಸದಿದ್ದರೂ, ರೀಲ್ಸ್‌ನ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು ಟಿಕ್‌ಟಾಕ್‌ಗೆ ನೇರವಾಗಿ ಪ್ರತಿಸ್ಪರ್ಧಿಯಾಗಲು ಇದು ಒಂದು ಕಾರ್ಯತಂತ್ರದ ನಿರ್ಧಾರವೆಂದು ಪರಿಗಣಿಸಲಾಗಿದೆ. ಅಮೆರಿಕದಲ್ಲಿ ಟಿಕ್‌ಟಾಕ್ ಕಾರ್ಯಾಚರಣೆಗಳ ಸುತ್ತಲಿನ ಅನಿಶ್ಚಿತತೆ ಮುಂದುವರೆದಿದ್ದು, ಡೇಟಾ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. 170 ಮಿಲಿಯನ್ ಅಮೇರಿಕನ್ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್ ಚೀನಾದ ಬೇಹುಗಾರಿಕೆ ಮತ್ತು ರಾಜಕೀಯ ಪ್ರಭಾವಕ್ಕೆ ಒಂದು ಸಾಧನವಾಗಬಹುದು ಎಂದು ಬೈಡೆನ್ ಆಡಳಿತ ವಾದಿಸಿದೆ.

ಪ್ರತ್ಯೇಕ ರೀಲ್ಸ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ಗೆ ಹೆಚ್ಚಿನ ವೈಶಿಷ್ಟ್ಯಗಳು, ಅತ್ಯುತ್ತಮ ಅನುಭವಗಳು ಮತ್ತು ಶಾರ್ಟ್-ರೂಪದ ವಿಡಿಯೋ ರಚನೆಕಾರರಿಗೆ ಉಪಯೋಗ ಆಗುವಂತಹ ಟಿಕ್‌ಟಾಕ್‌ನೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಅನುವು ಮಾಡಿ ಕೊಡಲಿದೆ ಎನ್ನಲಾಗಿದೆ. ಆದಾಗ್ಯೂ, ಬಳಕೆದಾರರು ಈ ಹೊಸ ಅಪ್ಲಿಕೇಶನ್‌ ಅನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬುದು ನೋಡಬೇಕಿದೆ.

Instagram Reels: ಇನ್‌ಸ್ಟಾ ರೀಲ್ಸ್‌ನಲ್ಲಿ ಹೆಚ್ಚು ರಕ್ತಸಿಕ್ತ ವಿಡಿಯೋಗಳು ಕಾಣಿಸಿಕೊಳ್ಳುತ್ತೆ: ಎಕ್ಸ್​ನಲ್ಲಿ ದೂರುಗಳ ಸುರಿಮಳೆ

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್​ ಬಂದಾಗಿನಿಂದ, ಟಿಕ್‌ಟಾಕ್‌ನ ಕೊರತೆಯನ್ನು ಅದು ನೀಗಿಸಿದೆ. ಇನ್‌ಸ್ಟಾಗ್ರಾಮ್ ವಿಶ್ವಾದ್ಯಂತ ಎರಡು ಬಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಅವರಲ್ಲಿ ಕೆಲವರು ರೀಲ್‌ಗಳನ್ನು ಸ್ಕ್ರೋಲ್ ಮಾಡಲು ಮಾತ್ರ ಇನ್​ಸ್ಟಾಕ್ಕೆ ಬರುತ್ತಾರೆ. ವರದಿಗಳ ಪ್ರಕಾರ, ಪ್ರಪಂಚದಾದ್ಯಂತ ಜನರು ಪ್ರತಿದಿನ 17.6 ಮಿಲಿಯನ್ ಗಂಟೆಗಳ ಕಾಲ ರೀಲ್‌ಗಳನ್ನು ಸ್ಕ್ರೋಲ್ ಮಾಡುತ್ತಾರೆ. ಸದ್ಯ ಹೆಚ್ಚುತ್ತಿರುವ ಬಳಕೆಯನ್ನು ಪರಿಗಣಿಸಿ, ವೇದಿಕೆಯು ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಕಂಪನಿಯು ರೀಲ್‌ಗಳಿಗಾಗಿ ಪ್ರತ್ಯೇಕ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ.

ಜನವರಿಯಲ್ಲಿ, ಮೆಟಾ ಹೊಸ ವಿಡಿಯೋ -ಎಡಿಟಿಂಗ್ ಅಪ್ಲಿಕೇಶನ್, ಎಡಿಟ್ಸ್ ಅನ್ನು ಸಹ ಘೋಷಿಸಿತು. ಇದು ಟಿಕ್‌ ಟಾಕ್‌ನ ಪೋಷಕ ಕಂಪನಿಯಾದ ಬೈಟ್‌ಡ್ಯಾನ್ಸ್ ಒಡೆತನದ ವಿಡಿಯೋ -ಎಡಿಟಿಂಗ್ ಅಪ್ಲಿಕೇಶನ್ ಕ್ಯಾಪ್‌ಕಟ್‌ನ ರೀತಿಯಲ್ಲೇ ಇದೆ. ಮೆಟಾ ಈ ಹಿಂದೆ 2018 ರಲ್ಲಿ ಟಿಕ್‌ಟಾಕ್‌ನೊಂದಿಗೆ ಸ್ಪರ್ಧಿಸುವ ಗುರಿಯೊಂದಿಗೆ ಲಾಸ್ಸೊ ಎಂಬ ಸ್ವತಂತ್ರ ವಿಡಿಯೋ ಶೇರ್ ಅಪ್ಲಿಕೇಶನ್ ಅನ್ನು ಸಹ ಪ್ರಯತ್ನಿಸಿತು, ಆದರೆ ಆ ಅಪ್ಲಿಕೇಶನ್ ಹೆಚ್ಚು ಜನಪ್ರಿಯತೆಯನ್ನು ಗಳಿಸಲಿಲ್ಲ. ಹೀಗಾಗಿ ಕಂಪನಿಯು ನಂತರದಲ್ಲಿ ಅದನ್ನು ಸ್ಥಗಿತಗೊಳಿಸಿತು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ