AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮುಟ್ಟದೆ ಸ್ಕ್ರಾಲ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

Instagram Tips and Tricks in Kannada: ನಿಮ್ಮ ಐಫೋನ್‌ನಲ್ಲಿ ನೀವು ಒಂದು ಸಣ್ಣ ಸೆಟ್ಟಿಂಗ್ ಮಾಡಬೇಕು. ಇದಾದ ನಂತರ ನೀವು ರೀಲ್‌ಗಳನ್ನು ಮುಟ್ಟದೆ ವೀಕ್ಷಿಸಬಹುದು. ನಿಮ್ಮ ಫೋನ್‌ನಲ್ಲಿರುವ ಸೆಟ್ಟಿಂಗ್‌ಗಳಿಗೆ ಹೋಗಿ. ನೀವು ಇಲ್ಲಿ ಸಂಪೂರ್ಣ ಸೆಟಪ್ ಅನ್ನು ಪಡೆಯುತ್ತೀರಿ. ಸೆಟಪ್‌ಗಾಗಿ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ.

Tech Tips: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮುಟ್ಟದೆ ಸ್ಕ್ರಾಲ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Instagram Tricks (1)
ಮಾಲಾಶ್ರೀ ಅಂಚನ್​
| Edited By: |

Updated on: Feb 22, 2025 | 9:23 AM

Share

ಇಂದು ಅನೇಕ ಜನರು ತಮ್ಮ ಫ್ರೀ ಟೈಮ್​ನಲ್ಲಿ ಮೊಬೈಲ್ ನೋಡುತ್ತಲೇ ಸಮಯ ಕಳೆಯುತ್ತಾರೆ. ಇದರಲ್ಲಿ ಹೆಚ್ಚಿನವರು ಉಪಯೋಗಿಸುವುದು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌. ಇನ್​ಸ್ಟಾದಲ್ಲಿ ರೀಲ್‌ಗಳನ್ನು ನೋಡುವುದು ಕೆಲವರಿಗೆ ಹವ್ಯಾಸ ಆಗಿ ಬಿಟ್ಟಿದೆ. ಹೀಗೆ ಸ್ಕ್ರೋಲ್ ಮಾಡುವಾಗ ಹಲವು ಬಾರಿ ಕೈಗಳು ಆಯಾಸಗೊಳ್ಳುತ್ತವೆ. ಈ ಅನುಭವ ಎಲ್ಲರಿಗೂ ಆಗಿರಬಹುದು. ಆದರೆ, ರೀಲ್‌ಗಳನ್ನು ಕೈ ಬೆರಳಿನಿಂದ ಮುಟ್ಟದೆ ಸ್ಕ್ರಾಲ್ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ನಿಮ್ಮ ಫೋನ್​ನಲ್ಲೇ ಇದಕ್ಕೊಂದು ಸೆಟ್ಟಿಂಗ್ಸ್ ಇದೆ. ಈ ಟ್ರಿಕ್ ಮೂಲಕ ನೀವು ಸುಲಭವಾಗಿ ಇನ್​ಸ್ಟಾಗ್ರಮ್ ಉಪಯೋಗಿಸಬಹುದು.

ನಿಮ್ಮ ಐಫೋನ್‌ನಲ್ಲಿ ನೀವು ಒಂದು ಸಣ್ಣ ಸೆಟ್ಟಿಂಗ್ ಮಾಡಬೇಕು. ಇದಾದ ನಂತರ ನೀವು ರೀಲ್‌ಗಳನ್ನು ಮುಟ್ಟದೆ ವೀಕ್ಷಿಸಬಹುದು. ನಿಮ್ಮ ಫೋನ್‌ನಲ್ಲಿರುವ ಸೆಟ್ಟಿಂಗ್‌ಗಳಿಗೆ ಹೋಗಿ. ನೀವು ಇಲ್ಲಿ ಸಂಪೂರ್ಣ ಸೆಟಪ್ ಅನ್ನು ಪಡೆಯುತ್ತೀರಿ. ಸೆಟಪ್‌ಗಾಗಿ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ.

ಈ ಪ್ರಕ್ರಿಯೆಯನ್ನು ಅನುಸರಿಸಿ:

ಮೊದಲು ನೀವು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು. ಇದರ ನಂತರ, ನೀವು ಸ್ವಲ್ಪ ಸ್ಕ್ರೋಲ್ ಮಾಡಿದರೆ ಆಕ್ಸೆಸಿಬಿಲಿಟಿ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ಆಕ್ಸೆಸಿಬಿಲಿಟಿ ಮೇಲೆ ಕ್ಲಿಕ್ ಮಾಡಿದ ನಂತರ, ಸೆಟಪ್ ವಾಯ್ಸ್ ಕಂಟ್ರೋಲ್ ಆಯ್ಕೆಗೆ ಹೋಗಿ. ಇಲ್ಲಿ, ಕ್ರಿಯೆಟ್ ನ್ಯೂ ಕಮಾಂಡ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಧ್ವನಿಯಲ್ಲಿ “ಮುಂದೆ” ಎಂದು ಹೇಳಿ ಮತ್ತು “ರನ್ ಕಸ್ಟಮ್” ಮೇಲೆ ಕ್ಲಿಕ್ ಮಾಡಿ. ಹೊಸ ಕಮಾಂಡ್‌ಗೆ ಹೋಗಿ ಮತ್ತು ಇಲ್ಲಿ ನಿಮ್ಮ ಬೆರಳನ್ನು ಇನ್​ಸ್ಟಾಗ್ರಾಮ್ ರೀಲ್ಸ್ ಸ್ಕ್ರಾಲ್ ಆಗುವ ದಿಕ್ಕಿನಲ್ಲಿ ಸ್ಲೈಡ್ ಮಾಡಿ. ಇದರ ನಂತರ, ಬಲ ಮೂಲೆಯಲ್ಲಿ ತೋರಿಸುವ ಸೇವ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಇನ್‌ಸ್ಟಾಗ್ರಾಮ್‌ಗೆ ಹೋಗಿ ರೀಲ್‌ಗಳನ್ನು ಮುಟ್ಟದೆ “ಮುಂದೆ” ಎಂದು ಹೇಳುವ ಮೂಲಕ ಅವುಗಳನ್ನು ನೋಡಬಹುದು.

Mobile App Ban: ಕೇಂದ್ರ ಸರ್ಕಾರದ ಶಾಕಿಂಗ್ ನಿರ್ಧಾರ: ದಾಖಲೆಯ 119 ಮೊಬೈಲ್ ಆಪ್ಸ್ ಬ್ಯಾನ್

ಇತ್ತೀಚೆಗಷ್ಟೆ ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರು ಟಿಕ್‌ಟಾಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನಂತಹ ದೀರ್ಘ ಕಿರು ವಿಡಿಯೋಗಳನ್ನು ಹಂಚಿಕೊಳ್ಳುವ ಆಯ್ಕೆ ನೀಡಿದೆ. ಇದು ಕಂಟೆಂಟ್ ಕ್ರಿಯೇಟರ್ಸ್​ಗೆ ತುಂಬಾ ಸಹಕಾರಿ ಆಗಲಿದೆ. ಇನ್‌ಸ್ಟಾಗ್ರಾಮ್ ರಚನೆಕಾರರು ಈಗ 180 ಸೆಕೆಂಡುಗಳ ರೀಲ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ, ಅಂದರೆ 90 ಸೆಕೆಂಡುಗಳ ಬದಲು ಮೂರು ನಿಮಿಷಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೆ ಈ ಹಿಂದೆ ಬಳಕೆದಾರರು 1:1 ಅನುಪಾತದಲ್ಲಿ ಲಂಬ ಗ್ರಿಡ್ ಅನ್ನು ಪೋಸ್ಟ್ ಮಾಡಬಹುದಿತ್ತು, ಅದನ್ನು ಈಗ 4:3 ಕ್ಕೆ ಅಪ್‌ಗ್ರೇಡ್ ಮಾಡಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ