iPhone 13: ಬಹುನಿರೀಕ್ಷಿತ ಐಫೋನ್ 13 ನಲ್ಲಿರುವ ಸ್ಟೋರೆಜ್ ಆಯ್ಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!

| Updated By: Vinay Bhat

Updated on: Jul 22, 2021 | 3:08 PM

ಐಫೋನ್ 13 ಸರಣಿಯಲ್ಲಿ ಒಟ್ಟು ಮೂರು ಫೋನುಗಳು ಬಿಡುಗಡೆ ಆಗಲಿವೆ. ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಫೋನುಗಳು.

iPhone 13: ಬಹುನಿರೀಕ್ಷಿತ ಐಫೋನ್ 13 ನಲ್ಲಿರುವ ಸ್ಟೋರೆಜ್ ಆಯ್ಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!
iPhone 13
Follow us on

ಬಿಡುಗಡೆಗು ಮುನ್ನವೇ ಐಫೋನ್ 13 (iPhone 13) ಟೆಕ್ ವಲಯದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ದಿನಕ್ಕೊಂದರಂತೆ ಹೊಸ ಹೊಸ ಸುದ್ದಿಗಳು ಐಫೋನ್ 13 ಬಗ್ಗೆ ಹರಿದಾಡುತ್ತಿದೆ. ಸದ್ಯ ಮೂಲಗಳ ಪ್ರಕಾರ ಬಹುನಿರೀಕ್ಷಿತ ಐಫೋನ್ 13 ನಲ್ಲಿ ಸ್ಟೋರೆಜ್ ಆಯ್ಕೆ ಬರೋಬ್ಬರಿ 1TB ವರೆಗೆ ಇರಲಿದೆ ಎಂದು ಹೇಳಲಾಗಿದೆ. ಈವರೆಗೆ ಯಾವುದೇ ಫೋನ್​ನಲ್ಲಿ ಇಷ್ಟು ಸ್ಟೋರೆಜ್ ಆಯ್ಕೆ ನೀಡಿರಲಿಲ್ಲ. ಐಫೋನ್ 12 ಗಿಂತ ಇದು ಸಾಕಷ್ಟು ಅಪ್ಡೇಟ್ ಆಗಿದ್ದು ಇದೇ ವರ್ಷ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಲಿದೆ.

ಐಫೋನ್ 13 ಸರಣಿಯಲ್ಲಿ ಒಟ್ಟು ಮೂರು ಫೋನುಗಳು ಬಿಡುಗಡೆ ಆಗಲಿವೆ. ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಫೋನುಗಳು. ಇವುಗಳಲ್ಲಿ 1 ಪ್ರೊ 1TB ಸ್ಟೋರೆಜ್ ಆಯ್ಕೆ ಹೊಂದಿರಲಿದೆ. ಐಫೋನ್​ನ ಹಿಂದಿನ ಆವೃತ್ತಿಯಲ್ಲಿ 512GB ಸ್ಟೋರೆಜ್ ಆಯ್ಕೆ ನೀಡಲಾಗಿತ್ತು. ವಿಶೇಷವಾಗಿ ಐಫೋನ್ 13 LiDAR ಕ್ಯಾಮೆರಾ ಟೆಕ್ನಾಲಜಿಯೊಂದಿಗೆ ಬರಲಿದೆಯಂತೆ. ಅತ್ಯುತ್ತಮವಾಗ LTPO OLED ಡಿಸ್​ಪ್ಲೇ ಇರಲಿದೆ.

ಇನ್ನೂ ಐಫೋನ್ 13 ಸರಣಿಯು ಬಯೋಮೆಟ್ರಿಕ್ ಆಯ್ಕೆಗಳಾದ ಫೇಸ್ ಐಡಿ ಮತ್ತು ಟಚ್ ಐಡಿಯೊಂದಿಗೆ ಬರಲಿದೆ ಎಂಬ ವರದಿಗಳು ಇಂಟರ್‌ನೆಟ್‌ನಲ್ಲಿ ಪ್ರಕಾಟವಾಗಿದ್ದವು. ಆದರೆ, ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಈಗ ಆ್ಯಪಲ್ ಐಫೋನ್‌ನಲ್ಲಿ ಟಚ್ ಐಡಿಯನ್ನು ಇಷ್ಟು ಬೇಗ ಅಪ್‌ಡೇಟ್‌ ಮಾಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ.

ಆ್ಯಪಲ್ ಐಫೋನ್ ಸರಣಿಯು 120Hz ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತದೆ ಮತ್ತು ಬಲಿಷ್ಠ ಬ್ಯಾಟರಿ ಅಳವಡಿಸಲಾಗಿದೆಯಂತೆ. ಐಫೋನ್ 12 ಸರಣಿಯಂತೆಯೇ ಐಫೋನ್ 13 ವಿನ್ಯಾಸವನ್ನು ಕುರಿತು ಸುಳಿವು ಕಂಪನಿಯು ಸುಳಿವು ನೀಡಿದೆ, ಸಣ್ಣ ವ್ಯತ್ಯಾಸಗಳೊಂದಿಗೆ, ಮುಖ್ಯವಾಗಿ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸದಲ್ಲಿ ಬದಲಾವಣೆ ಇರಲಿದೆಯಂತೆ.

ಇದರ ಜೊತೆಗೆ ಐಫೋನ್ 13 ನಲ್ಲಿ ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಈಗಾಗಲೇ ಈ ವಿಶೇಷ ವೈಶಿಷ್ಟ್ಯವು ಸ್ಯಾಮ್‌ಸಂಗ್‌ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಸೌಲಭ್ಯವು ಆ್ಯಪಲ್ ಐಫೋನ್ ಬಳಕೆದಾರರಿಗೂ ಲಭ್ಯವಾಗಲಿದೆ.

Jio vs Airtel: ಪ್ರತಿದಿನ 2GB ಡೇಟಾ, 28 ದಿನ ವ್ಯಾಲಿಡಿಟಿ: ನಂ. 1 ಸ್ಥಾನಕ್ಕೆ ಏರ್ಟೆಲ್-ಜಿಯೋ ನಡುವೆ ಗುದ್ದಾಟ

5G Smartphones: 5G ಸ್ಮಾರ್ಟ್​ಫೋನ್ ಬೇಕೆಂಬವರು ಒಮ್ಮೆ ಇಲ್ಲಿನೋಡಿ: ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್​ 5G ಫೋನ್ ಇವು

(iPhone 13 Pro models may come with 1TB storage iPhone 13 storage model tipped again)