ಆಕರ್ಷಕ ಆಫರ್: ಐಫೋನ್ 15 ಸರಣಿ ಬಿಡುಗಡೆ ಮುನ್ನ ಐಫೋನ್ 14 ಪ್ಲಸ್ ಮೇಲೆ ಬಂಪರ್ ಡಿಸ್ಕೌಂಟ್

Apple iPhone 14 Plus Discounts: ಐಫೋನ್ 14 ಪ್ಲಸ್ 128 GB ಆವೃತ್ತಿ ಕಳೆದ ವರ್ಷ 89,990 ರೂ. ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 76,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದಾಗ್ಯೂ, HDFC ಕಾರ್ಡ್‌ ಮೂಲಕ ಪಡೆದುಕೊಂಡರೆ 4,000 ರೂ. ಹೆಚ್ಚುವರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

ಆಕರ್ಷಕ ಆಫರ್: ಐಫೋನ್ 15 ಸರಣಿ ಬಿಡುಗಡೆ ಮುನ್ನ ಐಫೋನ್ 14 ಪ್ಲಸ್ ಮೇಲೆ ಬಂಪರ್ ಡಿಸ್ಕೌಂಟ್
iphone 14 plus

Updated on: Aug 22, 2023 | 2:32 PM

ಆ್ಯಪಲ್ ಕಂಪನಿಯ ಐಫೋನ್ 15 ಸರಣಿ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಸೆಪ್ಟೆಂಬರ್​ನಲ್ಲಿ ನೂತನ 15 ಸರಣಿ ಅನಾವರಣಗೊಳ್ಳಲಿದ್ದು, ಕಂಪನಿ ಅಧಕೃತ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಿದೆ. ಹೀಗಿರುವಾಗ ಆ್ಯಪಲ್ ಕಳೆದ ವರ್ಷ ಬಿಡುಗಡೆ ಮಾಡಿದ ಐಫೋನ್ 14 ಸರಣಿಯ ಐಫೋನ್ 14 ಪ್ಲಸ್ (iPhone 14 Plus) ಈಗ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಕೇವಲ 72,999 ರೂ. ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು.

ಐಫೋನ್ 14 ಪ್ಲಸ್ 128 GB ಆವೃತ್ತಿ ಕಳೆದ ವರ್ಷ 89,990 ರೂ. ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ 76,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದಾಗ್ಯೂ, HDFC ಕಾರ್ಡ್‌ ಮೂಲಕ ಪಡೆದುಕೊಂಡರೆ 4,000 ರೂ. ಹೆಚ್ಚುವರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಮೂಲಕ 72,999 ರೂ. ಗೆ ನಿಮ್ಮದಾಗಿಸಬಹುದು. ಇದರ ಜೊತೆಗೆ, ಫ್ಲಿಪ್‌ಕಾರ್ಟ್ 48,999 ರೂ. ವರೆಗೆ ವಿನಿಮಯ ಬೋನಸ್ ಅನ್ನು ಸಹ ಒದಗಿಸುತ್ತಿದೆ.

ಐಫೋನ್ 14 ಪ್ಲಸ್ ಫೋನ್ ದೊಡ್ಡದಾದ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್ ಪ್ಲೇಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಆಪಲ್‌ನ ಶಕ್ತಿಯುತ A15 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು iOS 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 128GB, 256GB ಮತ್ತು 512GB ಎಂಬ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ
ಚಂದ್ರಯಾನ 3: ಚಂದ್ರನ ಮೇಲೆ ಲ್ಯಾಂಡರ್ ಇಳಿಯಬೇಕಾದರೆ ಸೂರ್ಯನ ಬೆಳಕು ಬೇಕು, ಕಾರಣವೇನು?
Apple iPhone: ಆ್ಯಪಲ್ ಐಫೋನ್ ಚಾರ್ಜ್ ಹಾಕಿ ಪಕ್ಕ ಮಲಗಬೇಡಿ!! ಕಂಪನಿ ಎಚ್ಚರಿಕೆ!
WhatsApp Update: ಹೊಸ ವಾಟ್ಸ್​ಆ್ಯಪ್ ಅಪ್​ಡೇಟ್ HD ಕ್ವಾಲಿಟಿ ಫೋಟೋ ಕಳಿಸಿ..
200MP ಕ್ಯಾಮೆರಾದ ಸ್ಮಾರ್ಟ್​ಫೋನ್ ಮೂಲಕ ಭಾರತಕ್ಕೆ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್

ಆಗಸ್ಟ್ 31 ರಂದು ಭಾರತಕ್ಕೆ ಐಕ್ಯೂ Z7 ಪ್ರೊ ಎಂಟ್ರಿ: ಖರೀದಿಗೆ ಕ್ಯೂ ಗ್ಯಾರಂಟಿ

ಐಫೋನ್ 14 ಪ್ಲಸ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 1.9um ಸಂವೇದಕ ಮತ್ತು f/1.7 ಅಪರ್ಚರ್ ಲೆನ್ಸ್ ಅನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಇದರ ಜೊತೆಗೆ 12-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿಡಿದೆ. ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ f/2.4 ದ್ಯುತಿರಂಧ್ರ ಮತ್ತು 120-ಡಿಗ್ರಿ ಆಯ್ಕೆ ನೀಡಲಾಗಿದೆ.

ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾ ಆಯ್ಕೆ ಇದೆ. ಇದು f/1.9 ಅಪರ್ಚರ್ ಲೆನ್ಸ್‌ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ 26 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ