ಅಮೆಜಾನ್​ನಲ್ಲಿ ಐಕ್ಯೂ ಕ್ವೆಸ್ಟ್ ಡೇಸ್: ಐಕ್ಯೂ ನಿಯೋ 7 ಪ್ರೊ ಮೇಲೆ 7,000 ರೂ. ರಿಯಾಯಿತಿ

|

Updated on: Jan 29, 2024 | 6:55 AM

Amazon iQOO Quest Days: ಐಕ್ಯೂ Z6 ಲೈಟ್ ನಿಂದ ಐಕ್ಯೂ 12 ವರೆಗಿನ ಎಲ್ಲಾ ಪ್ರಸ್ತುತ ಮಾದರಿಗಳು ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ. ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ಐಕ್ಯೂ ನಿಯೋ 7 ಪ್ರೊ ಕೂಡ ಭಾರೀ ಬೆಲೆ ಕಡಿತದಲ್ಲಿ ಮಾರಾಟ ಆಗುತ್ತಿದೆ.

ಅಮೆಜಾನ್​ನಲ್ಲಿ ಐಕ್ಯೂ ಕ್ವೆಸ್ಟ್ ಡೇಸ್: ಐಕ್ಯೂ ನಿಯೋ 7 ಪ್ರೊ ಮೇಲೆ 7,000 ರೂ. ರಿಯಾಯಿತಿ
iQOO Neo 7 Pro
Follow us on

ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ವಿವೋ ತನ್ನ ಉಪ-ಬ್ರಾಂಡ್ ಐಕ್ಯೂ ಅಡಿಯಲ್ಲಿ ಅಮೆಜಾನ್ ಇಂಡಿಯಾದಲ್ಲಿ ‘ಐಕ್ಯೂ ಕ್ವೆಸ್ಟ್ ಡೇಸ್’ (iQOO Quest Days) ಮಾರಾಟವನ್ನು ಶುರುಮಾಡಿದೆ. ಇದರಲ್ಲಿ ಐಕ್ಯೂ ಬ್ರ್ಯಾಂಡ್‌ನ ಶ್ರೇಣಿಯು ಹೆಚ್ಚು ರಿಯಾಯಿತಿಯನ್ನು ಪಡೆದುಕೊಂಡಿದೆ. ಕಂಪನಿಯು ಈ ಸೇಲ್‌ನಲ್ಲಿ ನೋ-ಕಾಸ್ಟ್ ಇಎಂಐಗಳು ಮತ್ತು ರೂ. 3,000 ವರೆಗಿನ ಬ್ಯಾಂಕ್ ರಿಯಾಯಿತಿಗಳನ್ನು ನೀಡುತ್ತಿದೆ. ಐಕ್ಯೂ Z6 ಲೈಟ್ ನಿಂದ ಐಕ್ಯೂ 12 ವರೆಗಿನ ಎಲ್ಲಾ ಪ್ರಸ್ತುತ ಮಾದರಿಗಳು ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ. ಬ್ರ್ಯಾಂಡ್‌ನ ಅತ್ಯಂತ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾದ ಐಕ್ಯೂ ನಿಯೋ 7 ಪ್ರೊ ಕೂಡ ಭಾರೀ ಬೆಲೆ ಕಡಿತದಲ್ಲಿ ಮಾರಾಟ ಆಗುತ್ತಿದೆ.

ಐಕ್ಯೂ ನಿಯೋ 7 ಪ್ರೊ ಬೆಲೆ: ಆಫರ್ ವಿವರಗಳು:

ಐಕ್ಯೂ ನಿಯೋ 7 ಪ್ರೊ ಬೆಲೆ 8/128GB ರೂಪಾಂತರಕ್ಕೆ 34,999 ರೂ. ಮತ್ತು 12/256GB ರೂಪಾಂತರಕ್ಕೆ 37,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಐಕ್ಯೂ ಕ್ವೆಸ್ಟ್ ಡೇಸ್ ಮಾರಾಟದ ಭಾಗವಾಗಿ, ಎರಡು ಐಕ್ಯೂ ನಿಯೋ 7 ಪ್ರೊ ರೂಪಾಂತರಗಳು ರೂ. 30,999 ಮತ್ತು ರೂ. 33,999ಕ್ಕೆ ಸೇಲ್ ಆಗುತ್ತಿದೆ.

ಡಿಸ್ನಿ ಹಾಟ್‌ಸ್ಟಾರ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತುಗಳು ಬರುತ್ತಾ?: ಪರಿಹಾರ ಇಲ್ಲಿದೆ

ಇದನ್ನೂ ಓದಿ
ಮೊಬೈಲ್ ಫೆಸ್ಟ್ ಸೇಲ್: ಸ್ಮಾರ್ಟ್​ಫೋನ್ ಖರೀದಿಗೆ ಇದೇ ಬೆಸ್ಟ್ ಟೈಮ್
ಸ್ಯಾಮ್​ಸಂಗ್​ನಿಂದ ಪವಾಡ: ಬಜೆಟ್ ಬೆಲೆಯಲ್ಲಿ ಬರುತ್ತಿದೆ ಹೊಸ ಮಡಚುವ ಫೋನ್
ಜನವರಿ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿವೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್

ಇದಲ್ಲದೆ, ಫ್ಲಾಟ್ ರೂ. 2,000 ರಿಯಾಯಿತಿ ಕೂಪನ್ ಅನ್ನು ಅಮೆಜಾನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಪಡೆಯಬಹುದು. ಅಂತೆಯೆ HDFC ಮತ್ತು ICICI ಸೇರಿದಂತೆ ವಿವಿಧ ಬ್ಯಾಂಕ್‌ಗಳ ಮೇಲೆ ರೂ. 1,000 ಕಾರ್ಡ್ ರಿಯಾಯಿತಿ ಇದೆ. ಈ ಮೂಲಕ ಸ್ಮಾರ್ಟ್‌ಫೋನ್ ಅನ್ನು 8/128GB ರೂಪಾಂತ ರೂ. 27,999 ಮತ್ತು 12/256GB ರೂಪಾಂತರ ರೂ. 30,999 ಕ್ಕೆ ನಿಮ್ಮದಾಗಿಸಬಹುದು.

ಡಿಸ್‌ಪ್ಲೇ : 6.78-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಪಂಚ್-ಹೋಲ್ ಕಟೌಟ್, ಸ್ಲಿಮ್ ಬೆಜೆಲ್‌ಗಳು ಮತ್ತು 1300 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್ : ಕ್ವಾಲ್ಕಂ ಸ್ನಾಪ್​ಡ್ರಾಗನ್ 8+ Gen 1 SoC ಜೊತೆಗೆ Adreno 730 GPU.

RAM ಮತ್ತು ಸಂಗ್ರಹಣೆ : 8GB/12GB LPDDR5 RAM ಮತ್ತು 128GB/ 256GB UFS 3.1 ಸಂಗ್ರಹಣೆ.

ಸಾಫ್ಟ್‌ವೇರ್ : ಫನ್​ಟಚ್ OS 13 ಜೊತೆಗೆ ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ.

ಹಿಂಬದಿಯ ಕ್ಯಾಮೆರಾ: ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ.

ಮುಂಭಾಗದ ಕ್ಯಾಮೆರಾ : 16MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

ಸಂಪರ್ಕ : 5G, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, 4G VoLTE, Wi-Fi 6, ಬ್ಲೂಟೂತ್ v5.3, ಮತ್ತು GPS.

ಬ್ಯಾಟರಿ : 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ