iQoo Neo 9 series: ಐಕ್ಯೂಯಿಂದ ಬಂಪರ್ ಫೋನ್ ಬಿಡುಗಡೆ: ಐಕ್ಯೂ ನಿಯೋ 9, ನಿಯೋ 9 ಪ್ರೊ ಅನಾವರಣ
iQoo Neo 9, iQoo Neo 9 Pro: ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿವೆ. ಈ ಫೋನುಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,160mAh ಬ್ಯಾಟರಿಯನ್ನು ಹೊಂದಿದೆ.
ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಿಕ ಸಂಸ್ಥೆ ವಿವೋ ತನ್ನ ಸಬ್ಬ್ರ್ಯಾಂಡ್ ಐಕ್ಯೂ ಅಡಿಯಲ್ಲಿ ಎರಡು ನೂತನ ಫೋನುಗಳನ್ನು ಪರಿಚಯಿಸಿದೆ. ಇದೀಗ ಚೀನಾ ಮಾರುಕಟ್ಟೆಯಲ್ಲಿ ಐಕ್ಯೂ ನಿಯೋ 9 ಸರಣಿಯನ್ನು (iQoo Neo 9 series) ಬಿಡುಗಡೆ ಮಾಡಲಾಗಿದೆ. ಈ ಶ್ರೇಣಿಯು ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಎಂಬ ಎರಡು ಮಾದರಿಗಳೊಂದಿಗೆ ಬರುತ್ತದೆ. ಎರಡೂ ಹ್ಯಾಂಡ್‌ಸೆಟ್‌ಗಳು 6.78-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಅತ್ಯುತ್ತಮ ಕ್ಯಾಮೆರಾ, ಫಾಸ್ಟ್ ಚಾರ್ಜರ್ ಸೌಲಭ್ಯ ಕೂಡ ನೀಡಲಾಗಿದೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಬೆಲೆ, ಲಭ್ಯತೆ:
ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ನಾಲ್ಕು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಐಕ್ಯೂ ನಿಯೋ 12GB + 256GB ಆಯ್ಕೆಗೆ CNY 2,299 (ಸುಮಾರು ರೂ. 26,900) ನಿಂದ ಪ್ರಾರಂಭವಾಗುತ್ತದೆ. 16GB + 256GB ಮತ್ತು 16GB + 512GB ರೂಪಾಂತರಗಳ ಬೆಲೆ ಕ್ರಮವಾಗಿ CNY 2,499 (ಸರಿಸುಮಾರು ರೂ. 29,300) ಮತ್ತು CNY 2,799 (ಸುಮಾರು ರೂ. 32,800).
ಐಕ್ಯೂ ನಿಯೋ 9 ಪ್ರೊ 12GB + 256GB ರೂಪಾಂತರಕ್ಕೆ CNY 2,999 (ಸರಿಸುಮಾರು ರೂ. 35,100). 16GB + 256GB, 16GB + 512GB, ಮತ್ತು 16GB + 1TB ಆಯ್ಕೆಗೆ ಕ್ರಮವಾಗಿ CNY 3,299 (ಸುಮಾರು ರೂ. 38,600), CNY 3,599 (ಸುಮಾರು ರೂ. 42,100), ಮತ್ತು CNY 3,999 (ಸುಮಾರು ರೂ. 46,800) ನಿಗದಿ ಮಾಡಲಾಗಿದೆ.
Samsung Galaxy A25 5G: ಭಾರತದಲ್ಲಿ ಒಂದೇ ದಿನ ಎರಡು ಬಂಪರ್ ಸ್ಮಾರ್ಟ್ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಐಕ್ಯೂ ನಿಯೋ 9 ಸರಣಿ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಚೀನಾದಲ್ಲಿ ಅಧಿಕೃತ ವಿವೋ ವೆಬ್‌ಸೈಟ್ ಮೂಲಕ ಮುಂಗಡ-ಬುಕ್ಕಿಂಗ್ಗೆ ಲಭ್ಯವಿದೆ ಮತ್ತು ಡಿಸೆಂಬರ್ 30 ರಿಂದ ಮಾರಾಟ ಕಾಣಲಿದೆ.
ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ ಫೀಚರ್ಸ್:
ಐಕ್ಯೂ ನಿಯೋ 9 ಮತ್ತು ಐಕ್ಯೂ ನಿಯೋ 9 ಪ್ರೊ 2,800 x 1,260 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 144Hz ವರೆಗೆ ರಿಫ್ರೆಶ್ ದರ ಮತ್ತು HDR10+ ಬೆಂಬಲ ಪಡೆದುಕೊಂಡಿದೆ. ಐಕ್ಯೂ ನಿಯೋ 9 ಅನ್ನು Adreno 740 GPU ಸ್ನಾಪ್ಡ್ರಾಗನ್ 8 Gen 2 SoC ಮೂಲಕ ಮತ್ತು ಐಕ್ಯೂ ನಿಯೋ 9 ಪ್ರೊ Immortalis-G720 GPU ಮೀಡಿಯಾಟೆಕ್ ಡೈಮೆನ್ಸಿಟಿ 9300 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ಗಳು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 4.0 ಅಂತರ್ಗತ ಸಂಗ್ರಹಣೆಯನ್ನು ಬೆಂಬಲಿಸುತ್ತವೆ. ಆಂಡ್ರಾಯ್ಡ್ 14-ಆಧಾರಿತ OriginOS ನೊಂದಿಗೆ ರನ್ ಆಗುತ್ತದೆ.
ಐಕ್ಯೂ ನಿಯೋ 9 ಮತ್ತು ಪ್ರೊ ಮಾದರು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿವೆ. ಹಿಂಭಾಗದಲ್ಲಿ, ಐಕ್ಯೂ ನಿಯೋ 9 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ Sony IMX920 ಪ್ರಾಥಮಿಕ ಸಂವೇದಕ, ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಐಕ್ಯೂ ನಿಯೋ 9 ಪ್ರೊ ಮೂಲ ಮಾದರಿಯಂತೆಯೇ ಅದೇ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ, ಆದರೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ನೀಡಲಾಗಿದೆ.
ಈ ಫೋನುಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. 5G, 4G VoLTE, Wi-Fi 7, ಬ್ಲೂಟೂತ್ 5.3, OTG, GPS ಸಂಪರ್ಕದೊಂದಿಗೆ ಡ್ಯುಯಲ್ ಸಿಮ್ ಆಯ್ಕೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ