Samsung Galaxy A25 5G: ಭಾರತದಲ್ಲಿ ಒಂದೇ ದಿನ ಎರಡು ಬಂಪರ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್

Samsung Galaxy A15 5G: ಸ್ಯಾಮ್​ಸಂಗ್ ಕಂಪನಿ ಭಾರತದಲ್ಲಿ ಒಂದೇ ದಿನ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G ಎಂಬ ಎರಡು ಬಂಪರ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಎರಡೂ ಸ್ಮಾರ್ಟ್​ಫೋನ್​ಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Samsung Galaxy A25 5G: ಭಾರತದಲ್ಲಿ ಒಂದೇ ದಿನ ಎರಡು ಬಂಪರ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್
Samsung Galaxy A25 5G and Galaxy A15 5G
Follow us
|

Updated on: Dec 26, 2023 | 2:40 PM

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್​ಸಂಗ್ ಭಾರತೀಯ ಗ್ರಾಹಕರಿಗೆ ತನ್ನ A- ಸರಣಿ ಅಡಿಯಲ್ಲಿ ಎರಡು ನೂತನ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ A25 5G ಆಗಿದೆ. ಈ ಎರಡೂ ಫೋನುಗಳು ಈಗಾಗಲೇ ಹಲವಾರು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 5G- ಬೆಂಬಲ ಪಡೆದುಕೊಂಡಿದ್ದು, ಗ್ಯಾಲಕ್ಸಿ A25 ಎಕ್ಸಿನೋಸ್ 1280 SoC ನಿಂದ ಚಾಲಿತವಾದರೆ, ಗ್ಯಾಲಕ್ಸಿ A15 5G ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಾಕಷ್ಟು ಬಲಿಷ್ಠವಾಗಿರುವ ಈ ಎರಡೂ ಸ್ಮಾರ್ಟ್​ಫೋನ್​ಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G ಬೆಲೆಗಳು, ಲಭ್ಯತೆ

ಗ್ಯಾಲಕ್ಸಿ A15 5G ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರ 8GB+128GB ಬೆಲೆ ರೂ. 19,499 ಮತ್ತು 8GB+256GB ಬೆಲೆ ರೂ. 22,499 ಆಗಿದೆ. ಮತ್ತೊಂದೆಡೆ, ಗ್ಯಾಲಕ್ಸಿ A25 5G ಫೋನಿನ 8GB+128GB ರೂಪಾಂತರದ ಬೆಲೆ 26,999 ರೂ. ಮತ್ತು 8GB+256GB ರೂಪಾಂತರದ ಬೆಲೆ 29,999 ರೂ. ಗ್ಯಾಲಕ್ಸಿ A15 5G ಅನ್ನು ಲೈಟ್ ಬ್ಲೂ, ಲೈಟ್ ಬ್ಲಾಕ್ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಗ್ಯಾಲಕ್ಸಿ A15 5G ತಿಳಿ ನೀಲಿ, ತಿಳಿ ಕಪ್ಪು ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. A-ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು ಆದರೆ ಮಾರಾಟದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಗ್ಯಾಲಕ್ಸಿ A15 5G ಫೀಚರ್ಸ್:

ಡಿಸ್‌ಪ್ಲೇ: ಗ್ಯಾಲಕ್ಸಿ A15 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 800 nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ.

ಇದನ್ನೂ ಓದಿ
Image
ಫ್ಲಿಪ್‌ಕಾರ್ಟ್​ನಲ್ಲಿ ವಿಂಟರ್ ಫೆಸ್ಟ್: ಇದು ಈ ವರ್ಷದ ಕೊನೆಯ ಸೇಲ್
Image
6,000mAh ಬ್ಯಾಟರಿ: ವಿವೋದಿಂದ Y100i ಪವರ್ 5G ಸ್ಮಾರ್ಟ್​ಫೋನ್ ರಿಲೀಸ್
Image
ಇಂದಿನಿಂದ ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್ ಪೋಕೋ M6 5G ಮಾರಾಟ ಆರಂಭ
Image
ಟೆಕ್ನೋದಿಂದ ಮಹತ್ವದ ಘಷಣೆ: ಹೊಸ ವರ್ಷಕ್ಕೆ ರಿಲೀಸ್ ಆಗಲಿದೆ ಬಜೆಟ್ ಫೋನ್

ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ಸಂಗತಿ

ಚಿಪ್‌ಸೆಟ್: ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಮತ್ತು ಮಾಲಿ G57-MP2 GPU ನಿಂದ ಚಾಲಿತವಾಗಿದೆ.

ಹಿಂಬದಿಯ ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50MP ಮುಖ್ಯ ಕ್ಯಾಮೆರಾ, 5MP ಅಲ್ಟ್ರಾವೈಡ್ ಸಂವೇದಕ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.

ಸೆಲ್ಫಿ ಕ್ಯಾಮೆರಾ: ಮುಂಭಾಗದ ಕ್ಯಾಮೆರಾ 13MP ಸಂವೇದಕದೊಂದಿಗೆ ಬರುತ್ತದೆ.

ಸಂಗ್ರಹಣೆ: ಗ್ಯಾಲಕ್ಸಿ A15 5G 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ, ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದಾಗಿದೆ.

OS: ಹೊಸದಾಗಿ ಬಿಡುಗಡೆಯಾದ ಫೋನ್ ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಗ್ಯಾಲಕ್ಸಿ A25 5G ಫೀಚರ್ಸ್:

ಡಿಸ್​ಪ್ಲೇ: ಗ್ಯಾಲಕ್ಸಿ A25 5G ಇನ್ಫಿನಿಟಿ U ವಿನ್ಯಾಸದೊಂದಿಗೆ 6.5-ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ.

ಚಿಪ್‌ಸೆಟ್: ಎಕ್ಸಿನೊಸ್ 1280 SoC ಮತ್ತು Mali-G68 MP4 GPU ನಿಂದ ಚಾಲಿತವಾಗಿದೆ.

ಹಿಂದಿನ ಕ್ಯಾಮೆರಾಗಳು: ಈ ಫೋನ್ 50MP OIS ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.

ಸೆಲ್ಫಿ ಕ್ಯಾಮೆರಾ: ಗ್ಯಾಲಕ್ಸಿ A25 5G 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಸಂಗ್ರಹಣೆ: ಈ ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ, ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದು.

ಓಎಸ್: ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ