ಏಪ್ರಿಲ್‌ನಲ್ಲಿ ಬಿಡುಗಡೆ ಆಗಿಲಿವೆ ಒಂದಲ್ಲ, ಎರಡಲ್ಲ ಐದಕ್ಕೂ ಅಧಿಕ ಸ್ಮಾರ್ಟ್ಫೋನ್ಸ್: ಇಲ್ಲಿದೆ ಪಟ್ಟಿ
Upcoming Smartphones April 2024: ಏಪ್ರಿಲ್‌ನಲ್ಲಿ ಹಲವು ಉತ್ತಮ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಗೆ ಬರಲಿವೆ. ಇವುಗಳಲ್ಲಿ ಒನ್ಪ್ಲಸ್, ರಿಯಲ್ ಮಿಯಂತಹ ಪ್ರಸಿದ್ಧ ಬ್ರ್ಯಾಂಡ್‌ಗಳೂ ಸೇರಿವೆ. ಮುಂಬರುವ ಏಪ್ರಿಲ್ 2024 ರಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ.
ಈ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು (Smartphones) ಅನಾವರಣಗೊಂಡಿವೆ. ಇವುಗಳಲ್ಲಿ ಕೆಲವಷ್ಟೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದವು. ಆದರೆ, ಕಂಪಪನಿಗಳು ಫೋನ್ ಬಿಡುಗಡೆ ಮಾಡುವುದನ್ನು ಹೆಚ್ಚಿಸುತ್ತಲೇ ಇವೆ. ಇದೀಗ ಏಪ್ರಿಲ್ ತಿಂಗಳಲ್ಲಿ ಕೂಡ ಅನೇಕ ಮೊಬೈಲ್ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಮೊದಲ ವಾರದಲ್ಲೇ ಭಾರತದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಒನ್ಪ್ಲಸ್, ರಿಯಲ್ ಮಿಯಂತಹ ಪ್ರಸಿದ್ಧ ಬ್ರ್ಯಾಂಡ್‌ಗಳೂ ಸೇರಿವೆ. ಇದಲ್ಲದೇ ಹಲವು ಉತ್ತಮ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಗೆ ಬರಲಿವೆ. ಮುಂಬರುವ ಏಪ್ರಿಲ್ 2024 ರಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ.
ಒನ್ಪ್ಲಸ್ ನಾರ್ಡ್ CE 4
ಒನ್ಪ್ಲಸ್ ನಾರ್ಡ್ 4 ಏಪ್ರಿಲ್ 1 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಒನ್ಪ್ಲಸ್ ಏಸ್ 3V ಅನ್ನು ಹೋಲುತ್ತದೆ. ಫೋನ್‌ನ ನಿರೀಕ್ಷಿತ ಬೆಲೆ 24,999 ರೂ. ಈ ಫೋನ್ 6.7 ಇಂಚಿನ 120Hz AMOLED ಡಿಸ್ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್ ಅನ್ನು ಒದಗಿಸಲಾಗಿದೆ. 50 ಮೆಗಾಪಿಕ್ಸೆಲ್ ಸೋನಿ LYT-600 ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಈ ಸಾಧನವು 5500mAh ಬ್ಯಾಟರಿಯನ್ನು ಹೊಂದಿದೆ ಮತ್ತು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಐಟೆಲ್ನಿಂದಲೂ ಬಂತು 108MP ಕ್ಯಾಮೆರಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
ಮೊಟೊರೊಲಾ ಎಡ್ಜ್ 50 ಪ್ರೊ
ಮೊಟೊರೊಲಾ ಎಡ್ಜ್ 50 ಪ್ರೊ 6.7-ಇಂಚಿನ 1.5K ರೆಸಲ್ಯೂಶನ್ ಪೋಲೆಡ್ ಕರ್ವ್ ಡಿಸ್ಪ್ಲೇಯನ್ನು ಹೊಂದಿರುತ್ತದೆ, ಇದರ ರಿಫ್ರೆಶ್ ದರ 144Hz. ಈ ಫೋನ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಭಾರತದಲ್ಲಿ 12GB RAM + 512GB ಕಾನ್ಫಿಗರೇಶನ್‌ನೊಂದಿಗೆ ಬಿಡುಗಡೆಯಾಗಲಿದೆ, ಇದರ ಬೆಲೆ ರೂ 44,999. ಟಿಪ್‌ಸ್ಟರ್ ಅಭಿಷೇಕ್ ಯಾದವ್ ಪ್ರಕಾರ, ಮೊಟೊರೊಲಾ ಭಾರತದಲ್ಲಿ ಏಪ್ರಿಲ್ 3 ರಂದು ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.
ರಿಯಲ್ ಮಿ 12x 5G
ರಿಯಲ್ ಮಿ 12x 5G ಭಾರತದಲ್ಲಿ ಏಪ್ರಿಲ್ 2 ರಂದು ಅನಾವರಣಗೊಳ್ಳಲಿದೆ. ಈ ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. 12 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರೆಯಲಿದೆ ಎಂದು ಕಂಪನಿ ಹೇಳಿದೆ. ಇದು 6.72 ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿರುವ ಫೋನ್ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಚೀಟಿಯಲ್ಲಿ ಡಾಕ್ಟರ್ ಬರೆದಿರುವ ಅಕ್ಷರ ಅರ್ಥವಾಗುತ್ತಿಲ್ಲವೇ?: ಸುಲಭವಾಗಿ ಹೀಗೆ ತಿಳಿಯಿರಿ
ರೆಡ್ಮಿ ನೋಟ್ 13 ಟರ್ಬೊ
ರೆಡ್ಮಿ ನೋಟ್ 13 ಟರ್ಬೊಅನ್ನು ಏಪ್ರಿಲ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಬಹುದು. ಈ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಪೋಕೋ F6 ಆಗಿ ಬರಲಿದೆ. ಕ್ವಾಲ್ಕಂ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್ ಇದರಲ್ಲಿ ಕಾಣಿಸುತ್ತದೆ. ಅಲ್ಲದೆ, 90W ವೈರ್ಡ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಫೋನ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು 50MP ಸೋನಿ IMX882 ಮುಖ್ಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿರುತ್ತದೆ. ಇದರಲ್ಲಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ನೀಡಬಹುದು.
ಐಕ್ಯೂ Z9
ಐಕ್ಯೂ Z9 ಸರಣಿಯು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಸರಣಿಯಲ್ಲಿ ಮೂರು ಮಾದರಿಗಳನ್ನು ಪರಿಚಯಿಸಬಹುದು – ಐಕ್ಯೂ Z9, ಐಕ್ಯೂ Z9x, ಮತ್ತು ಐಕ್ಯೂ Z9 ಟರ್ಬೋ. ಐಕ್ಯೂ Z9 ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ಐಕ್ಯೂ Z9x ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನೊಂದಿಗೆ ಬರಬಹುದು. ಈ ಫೋನ್ 1.5K ಫ್ಲಾಟ್ OLED ಡಿಸ್ಪ್ಲೇ ಮತ್ತು 6000mAh ಬ್ಯಾಟರಿಯನ್ನು ಹೊಂದಿರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ