ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಐಟೆಲ್ (Itel) ಸಂಸ್ಥೆ ಇದೀಗ ಭಾರತದಲ್ಲಿ ಕೇವಲ 5,999 ರೂಪಾಯಿಗೆ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೆ ಐಟೆಲ್ ಎ26 (Itel A26). ಡೀಸೆಂಟ್ ಕ್ಯಾಮೆರಾ (Camera), ಉತ್ತಮ ಬ್ಯಾಟರಿ (Battery) ಸೇರಿದಂತೆ ಈ ಸ್ಮಾರ್ಟ್‌ಫೋನ್ (Smartphone) ಇನ್ನು ಹೆಸರಿಸದ 1.4GHz ಕ್ವಾಡ್-ಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವುದು ವಿಶೇಷ. ಜೊತೆಗೆ ಇದು ಸೋಶಿಯಲ್ ಟರ್ಬೊ ಫೀಚರ್‌ನೊಂದಿಗೆ ಬಂದಿದ್ದು, ಬಳಕೆದಾರರಿಗೆ ವಾಟ್ಸ್ಆ್ಯಪ್ (WhatsApp) ಕರೆಗಳನ್ನು ರೆಕಾರ್ಡ್ ಮಾಡಲು, ಸ್ಟೇಟಸ್‌ಗಳನ್ನು ಸೇವ್ ಮಾಡುವುದಕ್ಕೆ ಅವಕಾಶ ನೀಡಲಿದೆ.
ಐಟೆಲ್ A26 ಸ್ಮಾರ್ಟ್‌ಫೋನ್ ಭಾರತದಲ್ಲಿ ಕೇವಲ 5,999 ರೂ. ಬೆಲೆಯನ್ನು ಹೊಂದಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ನಲ್ಲಿ ಈ ಸ್ಮಾರ್ಟ್‌ಫೋನ್ 6,299 ರೂ. ಬೆಲೆಗೆ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡೀಪ್ ಬ್ಲೂ, ಗ್ರೇಡೇಶನ್ ಗ್ರೀನ್ ಮತ್ತು ಲೈಟ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದನ್ನು ಖರೀದಿಸಿದಾಗಿನಿಂದ 100 ದಿನಗಳವರೆಗೆ ಮಾನ್ಯವಾಗಿರುವ ಒನ್-ಟೈಮ್ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಫರ್ ಅನ್ನು ಕಂಪೆನಿ ಘೋಷಣೆ ಮಾಡಿದೆ.
ಐಟೆಲ್ A26 720×1,520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 5.7-ಇಂಚಿನ HD+ IPS ಡಿಸ್‌ಪ್ಲೇ ಹೊಂದಿದೆ. ಇದಕ್ಕೆ ಇನ್ನೂ ಹೆಸರಿಸಿದ 1.4GHz ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 10 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 32GB ಇಂಟರ್ ಸ್ಟೋರೇಜ್ ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
ಇನ್ನೂ ಈ ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 5 ಮೆಗಾಪಿಕ್ಸೆಲ್ AI ಸೆನ್ಸರ್ ಮತ್ತು VGA ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 2 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸೆಲ್ಫಿ ಕ್ಯಾಮೆರಾವು ಹೈ-ಡೆಫಿನಿಷನ್ ಇಮೇಜಿಂಗ್ ಸಾಮರ್ಥ್ಯಗಳೊಂದಿಗೆ ಚಿತ್ರವನ್ನು ಸೆರೆಹಿಡಿಯುತ್ತದೆ. ಇದು ಬ್ಲರ್ ಮತ್ತು ಯಾವುದೇ ಬೆಳಕಿನ ಪ್ರದೇಶಗಳಲ್ಲಿಯೂ ಸಹ ಬ್ರೈಟ್‌ನೆಸ್ ಹೊಂದಿರುವ ಮತ್ತು ಸ್ಪಷ್ಟವಾದ ಚಿತ್ರಗಳನ್ನು ಖಾತ್ರಿಪಡಿಸುತ್ತದೆ.
ಐಟೆಲ್ A26 ಸ್ಮಾರ್ಟ್‌ಫೋನ್ 3,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, 4G ViLTE, 3G ಮತ್ತು 2G ನೆಟ್‌ವರ್ಕ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಇದು ಸೋಶಿಯಲ್ ಟರ್ಬೊ ಫೀಚರ್‌ನೊಂದಿಗೆ ಬಂದಿದ್ದು, ಈಗಾಗಲೇ ಹೇಳಿರುವಂತೆ ಬಳಕೆದಾರರಿಗೆ ವಾಟ್ಸ್ಆ್ಯಪ್ ಕರೆಗಳನ್ನು ರೆಕಾರ್ಡ್ ಮಾಡಲು, ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳಲು, ಕರೆ ಅಲರ್ಟ್‌ಗಳು ಸೇರಿದಂತೆ ಪ್ರಮುಖ ಆಯ್ಕೆಗಳನ್ನು ಹೊಂದಿದೆ.
Facebook: ಎರಡು ಹೊಸ ವಿಡಿಯೋ-ಕಾಲಿಂಗ್ ಡಿವೈಸ್ ಬಿಡುಗಡೆ ಮಾಡಿದ ಫೇಸ್‌ಬುಕ್: ಬೆಲೆ, ವಿಶೇಷತೆ ಏನು?
(Itel A26 The Itel company has launched Itel A26 an entry-level smartphone in India)