JioSaavnTV ಬಿಡುಗಡೆ; ಈ ಹೊಸ ವಿಡಿಯೋ ಪ್ರಾಡಕ್ಟ್​ ವಿಶೇಷಗಳೇನು ತಿಳಿದುಕೊಳ್ಳಿ

| Updated By: Srinivas Mata

Updated on: Jun 08, 2021 | 9:20 PM

ಸಂಗೀತ- ಆಡಿಯೋ ಎಂಟರ್​ಟೇನ್​ಮೆಂಟ್ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಆದ JioSaavnನಿಂದ ಹೊಸ ವಿಡಿಯೋ ಪ್ರಾಡಕ್ಟ್​ JioSaavnTV ಬಿಡುಗಡೆ ಮಾಡಿದೆ.

JioSaavnTV ಬಿಡುಗಡೆ; ಈ ಹೊಸ ವಿಡಿಯೋ ಪ್ರಾಡಕ್ಟ್​ ವಿಶೇಷಗಳೇನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ದಕ್ಷಿಣ ಏಷ್ಯಾದ ಅತಿದೊಡ್ಡ ಸಂಗೀತ- ಆಡಿಯೋ ಎಂಟರ್​ಟೇನ್​ಮೆಂಟ್ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಆದ JioSaavnನಿಂದ ಹೊಸ ವಿಡಿಯೋ ಪ್ರಾಡಕ್ಟ್​ JioSaavnTV ಬಿಡುಗಡೆ ಮಾಡಿದೆ. ಈ ವಿಶಿಷ್ಟ ವಿಡಿಯೋ ಫೀಚರ್ ಪರಿಣತ ಕ್ಯುರೇಷನ್ ಮತ್ತು ಸುಲಭವಾದ ಬಳಕೆ ಮಧ್ಯದ ಕಂದಕವನ್ನು ತುಂಬುವ ಗುರಿ ಹೊಂದಿದೆ. JioSaavnTV ಎಂಬುದು ಪ್ಲಾಟ್​ಫಾರ್ಮ್​ನಲ್ಲಿ ವಿಡಿಯೋ ಪ್ರಾಡಕ್ಟ್​ಗೆ ಹೊಸ ಸೇರ್ಪಡೆಯಾಗಿದೆ. JioSaavnTV ಮೂಲಕವಾಗಿ ಈ ಪ್ಲಾಟ್​ಫಾರ್ಮ್ ಸಂಗೀತಕ್ಕಾಗಿ ಹೊಸ ಟೆಲಿವಿಷನ್ ಅನುಭವ ಸೃಷ್ಟಿಸುತ್ತದೆ ಮತ್ತು ಆಯೋಜಿಸುತ್ತದೆ. ಈಗಾಗಲೇ ಜನಪ್ರಿಯವಾಗಿರುವ ಆಡಿಯೋ ಸೇವೆಗಳೊಂದಿಗೆ ಇದನ್ನೂ ನೀಡುತ್ತದೆ. ಈ ಫೀಚರ್ ಬಳಕೆದಾರರಿಗೆ ಒನ್​ ಸ್ಟಾಪ್ ಎಂಟರ್​ಟೇನ್​ಮೆಂಟ್ ಹಬ್ ಆಗುತ್ತದೆ. ಈ ಮೂಲಕ ಅತ್ಯುತ್ಕೃಷ್ಟ ಗುಣಮಟ್ಟದ ಸ್ಟ್ರೀಮಿಂಗ್ ತಂತ್ರಜ್ಞಾನ ಹೊಂದಿದೆ. ಈಗ ಬಳಕೆದಾರರು ಮ್ಯೂಸಿಕ್ ಟಿವಿ ಚಾನೆಲ್​ಗಳು, ಮ್ಯೂಸಿಕ್ ವಿಡಿಯೋ ಪ್ಲೇಲಿಸ್ಟ್​ಗಳಿಗೆ ಹೋಮ್​ ಪೇಜ್​ನಲ್ಲಿ ಹೊಸ ಟ್ಯಾಬ್ ಸಂಪರ್ಕ ಪಡೆಯಬಹುದು. ತಮಗೆ ಏನು ಬೇಕೋ ಅದನ್ನು ಆರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಿದೆ. ಟಿವಿ ಚಾನೆಲ್​ಗಳು ಅನಲಾಗ್​ ಚಾನೆಲ್​ಗಳಾಗಿದ್ದು, ಇವುಗಳ ಶಿಫಾರಸು ವಿಡಿಯೋಗಳು ಒಂದಾದ ಮೇಲೆ ಒಂದು ಪ್ಲೇ ಆಗುತ್ತವೆ. ಆದರೆ ವಿಡಿಯೋ ಪ್ಲೇಲಿಸ್ಟ್ ಭಾವನೆ, genre ಮತ್ತು ಕಲಾವಿದರ ಆಧಾರದಲ್ಲಿ ಕ್ಯುರೇಟ್ ಆಗುತ್ತವೆ.

ಈ ಹೊಸ ಮ್ಯೂಸಿಕ್ ಟಿವಿ ಚಾನೆಲ್ ಮತ್ತು ಮ್ಯೂಸಿಲ್ ವಿಡಿಯೋ ಪ್ಲೇಲಿಸ್ಟ್ ಪರಿಚಯದೊಂದಿಗೆ JioSaavn ವಿಭಿನ್ನ ಅನುಭವ ನೀಡುತ್ತದೆ. ಕಲಾವಿದರು, ಕಾಲಘಟ್ಟ, ಭಾವನೆ, genre ಮತ್ತು ಕಲಾವಿದರ ಆಧಾರದಲ್ಲಿ ತಮಗೆ ಬೇಕಾದ ಮ್ಯೂಸಿಕ್ ವಿಡಿಯೋಗಳನ್ನು ಹುಡುಕಲು ಹಾಗೂ ಸಂಪರ್ಕಿಸಲು ಸಹಾಯ ಮಾಡುತ್ತದೆ. ಈ ಹೊಸ ಫೀಚರ್​ ಬಳಕೆದಾರರಿಗೆ ತಾವು ನೋಡಲು ಬಯಸುವ ವಿಡಿಯೋ ನೋಡಬಹುದು ಮತ್ತು ಈ ಹಿಂದಿನ ಆಡಿಯೋ ಟ್ರ್ಯಾಕ್​ಗಳನ್ನು ಸಹ ಕೇಳಬಹುದು. ಪೂರ್ತಿಯಾಗಿ ಇನ್-ಆ್ಯಪ್ ವಿಡಿಯೋ ಅನುಭವ ಪಡೆಯುವುದಕ್ಕಾಗಿ JioSaavn ಬಳಕೆದಾರರು ಹಾರಿಜಾಂಟಲ್ ಹಾಗೂ ವರ್ಟಿಕಲ್ ಮೋಡ್​ಗಳಿಗೆ ಬದಲಾಗಲು ಯತ್ನಿಸಬಹುದು. ಈಗಿನ ಬಿಡುಗಡೆಗೆ ಇನ್ನಷ್ಟು ವೇಗ ನೀಡುವ ಉದ್ದೇಶದಿಂದ JioSaavnTV ಹೆಸರಾಂತ ಕಲಾವಿದರು, ಭಾವನೆ, ಕಾಲಘಟ್ಟ ಮತ್ತು genres ಸಂಗೀತವನ್ನು ಕ್ಯುರೇಟ್ ಮಾಡುತ್ತದೆ.

ಈ ಹೊಸ ಪ್ರಾಡಕ್ಟ್ ಬಿಡುಗಡೆಯನ್ನು ಮಾರುಕಟ್ಟೆ ಕ್ಯಾಂಪೇನ್ ಮೂಲಕ ಬೆಂಬಲಿಸಲಾಗುತ್ತದೆ. ವಿಡಿಯೋ ಜಾಹೀರಾತುಗಳು, ಅದರಲ್ಲೂ ಬಾದ್​ಷಾ, ಜಸ್ಟಿನ್ ಬೀಬರ್, ದುವಾ, ಕೆ-ಪಾಪ್ ಸೆನ್ಸೇಷನ ಬಿಟಿಎಸ್ ಮತ್ತು ಅಕುಲ್ ಮ್ಯೂಸಿಕ್ ವಿಡಿಯೋಗಳನ್ನು ಒಳಗೊಂಡಿದೆ. ಈ ಬಿಡುಗಡೆಯನ್ನು ಸೋಷಿಯಲ್ ಮೀಡಿಯಾ, ಡಿಜಿಟಲ್, ಇನ್​ಸ್ಟಾಗ್ರಾಮ್ ಮತ್ತಿತರ ಕಡೆಗಳಲ್ಲೂ ವ್ಯಾಪಕವಾಗಿ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ಬ್ರ್ಯಾಂಡ್​ನಿಂದ ಮೊದಲ ವಿಡಿಯೋ ಸಣ್ಣ ಪ್ರಮಾಣದಲ್ಲಿ ಆಫರ್ ಮಾಡಲಾಗಿತ್ತು. 15 ಸೆಕೆಂಡ್​ಗಳ ವಿಶುವಲ್ಸ್ ಜತೆಗೆ ಆಯ್ದ ಟ್ರ್ಯಾಕ್​ಗಳನ್ನು ಒಳಗೊಂಡಿತ್ತು. 2020ರ ಜೂನ್​ನಲ್ಲಿ ಸಣ್ಣ ಸಣ್ಣ ವಿಡಿಯೋಗಳು ಬಿಡುಗಡೆ ಆದ ಮೇಲೆ 20 ಕೋಟಿಗೂ ಹೆಚ್ಚು ವ್ಯೂಸ್ ಇತ್ತು. ಆಗಸ್ಟ್​ನಲ್ಲಿ Triller ಜತೆಗೆ JioSaavn ಸಹಭಾಗಿತ್ವ ವಹಿಸಿತ್ತು.

ಇದನ್ನೂ ಓದಿ: Tata Sky Binge: ಟಾಟಾ ಸ್ಕೈ Bingeಯಲ್ಲಿ ಸಿಗಲಿದೆ ಹತ್ತು ಒಟಿಟಿ ಕಂಟೆಂಟ್ ಒಂದೇ ಕಡೆಗೆ; ಪ್ಲಾನ್ ಮತ್ತಿತರ ಮಾಹಿತಿ ಇಲ್ಲಿದೆ

(South Asia’s biggest video platform JioSaavn launched new video product JioSaavnTV. Here are the features)