AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Internet Outage: ಮೂಲಸೌಕರ್ಯ ಕೊರತೆಯನ್ನು ಬಯಲಿಗಿಟ್ಟ ಜಾಗತಿಕ ಇಂಟರ್​ನೆಟ್ ತಡೆ ಸಮಸ್ಯೆ

ಜಾಗತಿಕ ಮಟ್ಟದಲ್ಲಿ ಮಂಗಳವಾರ ಬೆಳಗ್ಗೆ ಇಂಟರ್​ನೆಟ್ ಸಮಸ್ಯೆ ಕಾಣಿಸಿಕೊಂಡಿತು. ಇದಕ್ಕೆ ಕಾರಣ ಏನು ಮತ್ತು ಪರಿಹಾರ ಏನು ಎಂಬುದರ ಫಾಲೋ ಅಪ್ ಇಲ್ಲಿದೆ.

Internet Outage: ಮೂಲಸೌಕರ್ಯ ಕೊರತೆಯನ್ನು ಬಯಲಿಗಿಟ್ಟ ಜಾಗತಿಕ ಇಂಟರ್​ನೆಟ್ ತಡೆ ಸಮಸ್ಯೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jun 09, 2021 | 2:24 PM

Share

ಜಾಗತಿಕ ಮಟ್ಟದಲ್ಲಿ ಮಂಗಳವಾರ ಬಹಳ ವಿಚಿತ್ರ ಎನಿಸುವಂಥ ಘಟನೆ ನಡೆಯಿತು. ಅತಿರಥ- ಮಹಾರಥ ಎನಿಸುವಂಥ ಸುದ್ದಿ ವೆಬ್​ಸೈಟ್​ಗಳು, ಇ- ಕಾಮರ್ಸ್ ಪೋರ್ಟಲ್ ಆದ ಅಮೆಜಾನ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದು ಅಚ್ಚರಿಗೆ ಹಾಗೂ ಗಾಬರಿಗೆ ಕಾರಣವಾಯಿತು. ವಿಶ್ವದ ಅತಿ ದೊಡ್ಡ ವೆಬ್ ತಡೆಯಾಗಿ ದಾಖಲಾಯಿತು. ಈಗಿನ ಸಂದರ್ಭದಲ್ಲಿ ಇಂಟರ್​ನೆಟ್ ಮೂಲಸೌಕರ್ಯ ಎಚ್ಚರಿಕೆಯ ಕರೆ ಬಂದಿದೆ. ಈ ಸೌಕರ್ಯ ಈಗ ಅಪಾಯಕಾರಿ ಮಟ್ಟದಲ್ಲಿ ಕೇಂದ್ರೀಕೃತವಾಗಿದೆ ಮತ್ತು ವೈರುಧ್ಯಗಳ ಸ್ಥಿತಿಯನ್ನು ಎದುರಿಸುವ ಸನ್ನಿವೇಶದಲ್ಲಿ ಇಲ್ಲ ಎಂದು ಭದ್ರತಾ ಪರಿಣತರು ಎಚ್ಚರಿಸಿದ್ದಾರೆ.

ವಿವರಿಸಲು ಸಾಧ್ಯವಾಗದ ಕಾನ್​ಫಿಗರೇಷನ್ ದೋಷವು ಮೂಲಸೌಕರ್ಯ ಒದಗಿಸುವ “ಫಾಸ್ಟ್ಲಿ”ಯಲ್ಲಿ ಕಾಣಿಸಿಕೊಂಡಿತು. ವಿಶ್ವದ ಶೇ 10ರಷ್ಟು ಇಂಟರ್​ನೆಟ್ ದಟ್ಟಣೆಯನ್ನು ಈ ಕಂಪೆನಿಯೇ ನಿರ್ವಹಣೆ ಮಾಡುತ್ತದೆ. ಇಷ್ಟೇ ಸಾಕಾಯಿತು, ಮಂಗಳವಾರದಂದು ಬೆಳಗ್ಗೆ ಒಂದು ಗಂಟೆಯಷ್ಟು ಅವಧಿ ಹಲವು ಪ್ರಮುಖ ವೆಬ್​ಸೈಟ್​ಗಳು ಮತ್ತು ಸೇವೆಗಳು ಕಾರ್ಯ ನಿರ್ವಹಣೆ ಮಾಡಲಿಲ್ಲ ಎಂಬುದು ಇಲ್ಲಿ ನೆನಪಿಸಿಕೊಳ್ಳಬೇಕು.

ವೆಬ್ ಸಂಪೂರ್ಣವಾಗಿ ವಿಕೇಂದ್ರೀಕರಣ ಆಗಬೇಕಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಯಾವುದೋ ಒಂದು ಕೇಂದ್ರೀಕೃತ ವ್ಯವಸ್ಥೆ ಮೇಲೆ ಅವಲಂಬನೆ ಆಗದಿದ್ದಲ್ಲಿ ಆಗಲೂ ಹಲವು ವಿವಿಧ ಅಂಶಗಳು ವಿಫಲ ಆಗಬಹುದು, ಆದರೆ ಇಂಟರ್​ನೆಟ್ ದಟ್ಟಣೆಯು ಎಲ್ಲಿ ತಲುಪಬೇಕೋ ಆ ದಾರಿಯನ್ನು ಹುಡುಕಿಕೊಳ್ಳುತ್ತದೆ. ಕಳೆದ ಒಂದು ದಶಕದಲ್ಲಿ ನಾವೇನು ನೋಡಿದ್ದೇವೋ ಅದು ನಿರುದ್ದಿಶ್ಯವಾದ ಹಲವು ಮುಖ್ಯ ಸೇವೆಗಳು ಕೇಂದ್ರೀಕರಣ. ಅದು ದೊಡ್ಡ ಮಟ್ಟದ ಕ್ಲೌಡ್ ಸಲ್ಯೂಷನ್ ಒದಗಿಸುವ ಮೂಲಸೌಕರ್ಯ ಪೂರೈಕೆದಾರರು ಮತ್ತು ಸಿಡಿಎನ್​ಗಳಿಂದ ಆಗಿದೆ ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: 503 service unavailable: ಜಾಗತಿಕ ಮಟ್ಟದಲ್ಲೇ ಇಂಟರ್​ನೆಟ್ ಸಮಸ್ಯೆ; ಬಿಬಿಸಿ, ಅಮೆಜಾನ್ ಹೀಗೆ ನಾನಾ ವೆಬ್​ಸೈಟ್​ಗಳು ಸಿಕ್ತಿಲ್ಲ

(One of the world’s biggest web outages should act as a “wake-up call” that internet infrastructure has become dangerously over-centralised, security experts have warned)

Published On - 2:22 pm, Wed, 9 June 21

ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್