AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple iCloud+: ಆಪಲ್ ಕಂಪೆನಿಯಿಂದ ಹೊಸ ಫೀಚರ್​ಗಳ ಐಕ್ಲೌಡ್+ ಘೋಷಣೆ; ಏನಿದರ ವೈಶಿಷ್ಟ್ಯ ಎಂಬುದನ್ನು ತಿಳಿಯಿರಿ

ಆಪಲ್ ಕಂಪೆನಿಯಿಂದ iCloud+ ಸೇವೆಯನ್ನು ಘೋಷಣೆ ಮಾಡಿದೆ. iCloud+ ಎಂಬುದು ಹೊಸ Cloud ಸಂಗ್ರಹ ಸೇವೆ. ಆಪಲ್ ಹೇಳಿರುವಂತೆ ಈ ಹೊಸ ಫೀಚರ್​ಗಳಿಗೆ ಹೆಚ್ಚುವರಿ ವೆಚ್ಚವಿಲ್ಲ. ಇದರರ್ಥ ಏನೆಂದರೆ, ಐಕ್ಲೌಡ್ ಸ್ಟೋರೇಜ್ ಪ್ಲಾನ್​ಗಳು ಏನಿದ್ದವೋ ಅದೇ ಇದಕ್ಕೂ ಅನ್ವಯ ಆಗುತ್ತದೆ.

Apple iCloud+: ಆಪಲ್ ಕಂಪೆನಿಯಿಂದ ಹೊಸ ಫೀಚರ್​ಗಳ ಐಕ್ಲೌಡ್+ ಘೋಷಣೆ; ಏನಿದರ ವೈಶಿಷ್ಟ್ಯ ಎಂಬುದನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 09, 2021 | 5:01 PM

ಆಪಲ್ ಕಂಪೆನಿಯಿಂದ iCloud+ ಸೇವೆಯನ್ನು ಘೋಷಣೆ ಮಾಡಿದೆ. WWDC 2021ರ ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಲಾಗಿದೆ. ಹೊಸ ಸೇವೆಗಳ ಬಗ್ಗೆ ಆಪಲ್ ಹೇಳಿರುವ ಪ್ರಕಾರ, ಎಲ್ಲವನ್ನೂ ಈ ಐಕ್ಲೌಡ್ ಒಗ್ಗೂಡಿಸುತ್ತದೆ. ಈ ಹೊಸ ಪ್ರೀಮಿಯಮ್ ಫೀಚರ್​ಗಳನ್ನು ಬಳಕೆದಾರರು ಇಷ್ಟಪಡುತ್ತಾರೆ. ಈ ಹೊಸ ಕ್ಲೌಡ್ ಸೇವೆಗಳಿಗೆ ಹೆಚ್ಚುವರಿಯಾಗಿ ಯಾವುದೇ ಶುಲ್ಕವನ್ನು ಗ್ರಾಹಕರಿಗೆ ಹಾಕುವುದಿಲ್ಲ. ಈಗಿರುವ ಕ್ಲೌಡ್ ಸೇವೆಗಿಂತ ಹೊಸದು ಹೇಗೆ ಭಿನ್ನ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಏನಿದು iCloud+? iCloud+ ಎಂಬುದು ಹೊಸ Cloud ಸಂಗ್ರಹ ಸೇವೆ. ಇದನ್ನು ಆಪಲ್​ನ ವಾರ್ಷಿಕ ಡೆವಲಪರ್ಸ್ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ. ಉತ್ತಮ ಖಾಸಗಿತನಕ್ಕಾಗಿ ಇದು ಸಾಕಷ್ಟು ಹೊಸ ಪ್ರೀಮಿಯಂ ವೈಶಿಷ್ಟ್ಯ​ಗಳ ಜತೆಗೆ ಬರುತ್ತದೆ. ಈ ಸೇವೆಯ ಬಗ್ಗೆ ಒಟ್ಟು ಸಾರಾಂಶದಲ್ಲಿ ಹೇಳಬೇಕೆಂದರೆ, ಐಕ್ಲೌಡ್ ಸಂಗ್ರಹವು ವಿಸ್ತೃತ ಖಾಸಗಿತನದೊಂದಿಗೆ ಬರುತ್ತದೆ. ಖಾಸಗಿ ರಿಲೇ, ಹೈಡ್ ಮೈ ಇಮೇಲ್, ವಿಸ್ತರಣೆಯಾದ ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಸಪೋರ್ಟ್​ನಂಥ ಫೀಚರ್​ಗಳಿವೆ.

iCloud+ ಮುಖ್ಯ ವೈಶಿಷ್ಟ್ಯಗಳೇನು? ಮೊದಲ ಮತ್ತು ಅತ್ಯಂತ ಮುಖ್ಯವಾದದ್ದು ಖಾಸಗಿ ರಿಲೇ ವೈಶಿಷ್ಟ್ಯ. ಈ ಹೊಸ ಇಂಟರ್​ನೆಟ್ ಖಾಸಗಿತನ ಸೇವೆಯು ಬಳಕೆದಾರರಿಗೆ ಸುರಕ್ಷಿತವಾಗಿ ಮತ್ತು ಖಾಸಗಿ ವಿಧಾನದಲ್ಲಿ ವೆಬ್ ಬ್ರೌಸ್​ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಈ ಫೀಚರ್​ ಅನ್ನು ಐಕ್ಲೌಡ್​ನಲ್ಲಿ ರೂಪಿಸಲಾಗಿದೆ. ಈ ಮೂಲಕ ಬಳಕೆದಾರರ ಸಾಧನದಲ್ಲಿನ ಟ್ರಾಫಿಕ್ ಸಂಪೂರ್ಣ ಎನ್​ಕ್ರಿಪ್ಟ್ ಆಗಿರುತ್ತದೆ. ಈ ಹೊಸ ಫೀಚರ್​ ಇರುವುದರಿಂದ ಆಪಲ್ ಅಥವಾ ಬಳಕೆದಾರರ ನೆಟ್​ವರ್ಕ್​ ಒದಗಿಸುವವರು ಸಹ ಯಾವ್ಯಾವ ವೆಬ್​ಸೈಟ್ ನೋಡಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಸಾಧ್ಯವಿಲ್ಲ.

ಹೈಡ್​ ಮೈ ಇಮೇಲ್ ಫೀಚರ್ ಮೂಲಕವಾಗಿ ವಿಶಿಷ್ಟ ಮತ್ತು ಆಯ್ದ ಇಮೇಲ್ ವಿಳಾಸದಿಂದ ಬಂದ ಮೇಲ್ ಅನ್ನು ಪರ್ಸನಲ್ ಇನ್​ಬಾಕ್ಸ್​ಗೆ ಫಾರ್ವರ್ಡ್ ಮಾಡುತ್ತದೆ. ಈ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಇಮೇಲ್ ವಿಳಾಸವನ್ನು ಖಾಸಗಿಯಾಗಿ ಇಟ್ಟುಕೊಳ್ಳಬಹುದು. ಒಂದು ವೇಳೆ ಭವಿಷ್ಯದಲ್ಲಿ ವಂಚಕ ಸ್ಪ್ಯಾಮ್ ಸಂದೇಶಗಳು ಬಂದಲ್ಲಿ ಸುರಕ್ಷತೆ ದೊರೆಯುತ್ತದೆ. ಬಳಕೆದಾರರು ಎಷ್ಟು ವಿಳಾಸವಾದರೂ ಸೃಷ್ಟಿಸಬಹುದು ಮತ್ತು ಯಾವಾಗ ಬೇಕಾದರೂ ಡಿಲೀಟ್ ಮಾಡಬಹುದು.

ಐಕ್ಲೌಡ್+ ಹೋಮ್ ಕಿಟ್ ಸೆಕ್ಯೂರ್ ವಿಡಿಯೋಗೆ ಬೆಂಬಲ ವಿಸ್ತರಿಸಿದೆ. ಇದರಿಂದ ಬಳಕೆದಾರರು ಹೋಮ್ ಆ್ಯಪ್​ನಲ್ಲಿ ಹೆಚ್ಚು ಕ್ಯಾಮೆರಾಗಳಿಗೆ ಸಂಪರ್ಕಿಸಬಹುದು. ಸದ್ಯಕ್ಕಿರುವ ಸಂಗ್ರಹ ಸಪೋರ್ಟ್ 5 ಹೋಮ್​ ಕಿಟ್ Xಸೆಕ್ಯೂರ್ ವಿಡಿಯೋಸ್ ಮಾತ್ರ. ಅದನ್ನು ಅನಿಯಮಿತವಾಗಿ ಬದಲಿಸಲಾಗಿದೆ. ಆದರೆ ಈ ಅನಿಯಮಿತ ವಿಡಿಯೋ ಸಪೋರ್ಟ್ ದೊರೆಯುವುದು ಟಾಪ್ ಮೋಸ್ಟ್ ಪ್ಲಾನ್​ನಲ್ಲಿ ಮಾತ್ರ.

ಐಕ್ಲೌಡ್​ಗಿಂತ ಐಕ್ಲೌಡ್+ ಹೇಗೆ ಭಿನ್ನ? ಐಕ್ಲೌಡ್ ಎಂಬುದು ಬಹುತೇಕ ಕ್ಲೌಡ್ ಸೇವೆ ಪ್ಲಾಟ್​ಫಾರ್ಮ್. ಐಕ್ಲೌಡ್+ ಎಂಬುದು ಅದಕ್ಕೂ ಒಂದು ಹೆಜ್ಜೆ ಮುಂದೆ. ಈ ಹಿಂದೆಯೇ ಹೇಳಿದಂತೆ ಇನ್ನಷ್ಟು ಸುಧಾರಿತ ಖಾಸಗಿತನ ಫೀಚರ್​ಗಳೊಂದಿಗೆ ಇದು ಬರುತ್ತದೆ. ಹೊಸ ಐಕ್ಲೌಡ್+ ಸರ್ವೀಸ್ ಎಂಬುದು ಪಾವತಿ ಮಾಡುವ ಬಳಕೆದಾರರನ್ನು ಉಚಿತ ಐಕ್ಲೌಡ್ ಬಳಕೆದಾರರಿಂದ ಬೇರ್ಪಡಿಸುತ್ತದೆ.

ಈಗಿನ ಐಕ್ಲೌಡ್ ಚಂದಾದಾರರು ಐಕ್ಲೌಡ್+ ಪಡೆಯುವುದು ಹೇಗೆ? ಮುಖ್ಯ ಭಾಷಣದ ವೇಳೆ ತಿಳಿಸಿರುವ ಪ್ರಕಾರ, ಐಕ್ಲೌಡ್ ಬಳಕೆದಾರರು ತಾವಾಗಿಯೇ ಐಕ್ಲೌಡ್+ಗೆ ಅಪ್​ಗ್ರೇಡ್ ಆಗುತ್ತಾರೆ. ಒಂದು ವೇಳೆ ಐಕ್ಲೌಡ್ ಪಾವತಿ ಬಳಕೆದಾರರಾಗಿದ್ದಲ್ಲಿ ಐಕ್ಲೌಡ್+ ಪ್ಲಾನ್​ಗಳನ್ನು ಖರೀದಿಸುವ ಅಗತ್ಯ ಇಲ್ಲ.

ಐಕ್ಲೌಡ್+ನಲ್ಲಿ ಇರುವ ಪ್ಲಾನ್​ಗಳೇನು? ಆಪಲ್ ಹೇಳಿರುವಂತೆ ಈ ಹೊಸ ಫೀಚರ್​ಗಳಿಗೆ ಹೆಚ್ಚುವರಿ ವೆಚ್ಚವಿಲ್ಲ. ಇದರರ್ಥ ಏನೆಂದರೆ, ಐಕ್ಲೌಡ್ ಸ್ಟೋರೇಜ್ ಪ್ಲಾನ್​ಗಳು ಏನಿದ್ದವೋ ಅದೇ ಇದಕ್ಕೂ ಅನ್ವಯ ಆಗುತ್ತದೆ. ಭಾರತದಲ್ಲಿ ತಿಂಗಳಿಗೆ 75 ರೂಪಾಯಿಯೊಂದಿಗೆ ಪ್ಲಾನ್ ಶುರುವಾಗುತ್ತದೆ. ಇದು 50GB ಸಂಗ್ರಹದೊಂದಿಗೆ ಮತ್ತು ಒಂದು ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ.

ರೂ. 219ರ ಪ್ಲಾನ್​ನಲ್ಲಿ 200GB ಐಕ್ಲೌಡ್ ಸಂಗ್ರಹ ಆಫರ್ ಮಾಡುತ್ತದೆ. 5 ಹೋಮ್​ಕಿಟ್ ಸೆಕ್ಯೂರ್ ವಿಡಿಯೋ ಕ್ಯಾಮೆರಾ ಸಪೋರ್ಟ್ ಮಾಡುತ್ತದೆ. ಅತಿ ಹೆಚ್ಚಿನ ದರದ ಪ್ಲಾನ್ ಅಂದರೆ ಅದು ರೂ. 749. ಇದು 2TB ಸ್ಟೋರೇಜ್ ನೀಡುತ್ತದೆ. ಜತೆಗೆ ಅನಿಯಮಿತವಾಗಿ ಹೋಮ್​ಕಿಟ್ ಸೆಕ್ಯೂರ್ ಪ್ಲಾನ್ ದೊರೆಯುತ್ತದೆ,

ಐಕ್ಲೌಡ್ ಉಚಿತ ಪ್ಲಾನ್ (5GB ಒಂದು) ಇರುವವರಿಗೆ ಐಕ್ಲೌಡ್+ ದೊರೆಯುತ್ತದೆಯೇ? ಇಲ್ಲ. ಐಕ್ಲೌಡ್+ಗೆ ಅಪ್​ಗ್ರೇಡ್ ಆಗಲು ಸಾಧ್ಯವಿರುವುದು ಐಕ್ಲೌಡ್​ನ ಪೇಯ್ಡ್​ ಚಂದಾದಾರರು ಮಾತ್ರ. ಯಾರು ಉಚಿತವಾಗಿ ಐಕ್ಲೌಡ್ ಪ್ಲಾನ್ ಹೊಂದಿದ್ದಲ್ಲಿ ಪೇಯ್ಡ್ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗಷ್ಟೇ ಐಕ್ಲೌಡ್+ ಫೀಚರ್​ಗಳು ದೊರೆಯುತ್ತವೆ.

ಇದನ್ನೂ ಓದಿ: Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

(Apple company launched iCloud+ service in WWDC 2021 event. Here is the plan details with features)

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ