Karbonn Smart TV: ಗಮನಿಸಿ: ಭಾರತದಲ್ಲಿ ಕೇವಲ 7,990 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್ ಟಿವಿ: ಯಾವುದು ಗೊತ್ತೇ?
ಕಾರ್ಬನ್ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕ ಹಾಗೂ ಭಾರತದ ಮಧ್ಯಮವರ್ಗದವರನ್ನು ಗುರಿಯಾಗಿರಿಸಿಕೊಂಡು ಹೊಸ ಸ್ಮಾರ್ಟ್‌ಟಿವಿ ಮತ್ತು ಎಲ್‌ಇಡಿ ಟಿವಿಗಳನ್ನು ಅನಾವರಣ ಮಾಡಿದೆ.
ಈ ಹಿಂದೆ ಬಜೆಟ್ ಬೆಲೆಯ ಫೋನ್ (Smartphone), ಫೀಚರ್ ಫೋನ್ಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಕಾರ್ಬನ್ (Karbonn) ಕಂಪನಿ ಇದೀಗ ದೇಶದಲ್ಲಿ ಹೊಸ ಸ್ಮಾರ್ಟ್ ಟಿವಿಯೊಂದನ್ನು (Smartphone) ಬಿಡುಗಡೆ ಮಾಡಿದೆ. ಈ ಮೂಲಕ ಸ್ಮಾರ್ಟ್‌ಟಿವಿ ಮಾರುಕಟ್ಟೆಗೂ ಕಾರ್ಬನ್ ಕಾಲಿರಿಸಿದೆ. ಸದ್ಯ ಮೇಡ್ ಇನ್ ಇಂಡಿಯಾ (Made in India), ಮೇಡ್ ಫಾರ್ ಇಂಡಿಯಾ (MAde for India) ಶ್ರೇಣಿಯಲ್ಲಿ ಹೊಸ ಸ್ಮಾರ್ಟ್‌ಟಿವಿ ಮತ್ತು ಎಲ್‌ಇಡಿ ಟಿವಿಗಳನ್ನು (LED TV) ಕಾರ್ಬನ್ ಅನಾವರಣ ಮಾಡಿದೆ.
ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವುದರ ಬಗ್ಗೆ ಕಾರ್ಬನ್ ಎಂಡಿ ಪರ್ದೀಪ್ ಜೈನ್ ಮಾಹಿತಿ ಹಂಚಿಕೊಂಡಿದ್ದು, ಡಿಜಿಟಲ್ ಇಂಡಿಯಾದ ಸಹಯೋಗದಲ್ಲಿ ಈ ಹೊಸ ಸ್ಮಾರ್ಟ್‌ಟಿವಿಗಳು ಹೊಸ ಸಂಚಲನ ಸೃಷ್ಟಿಸಲಿವೆ ಎಂದು ಹೇಳಿದ್ದಾರೆ. ನಮ್ಮ ಹೊಸ ಶ್ರೇಣಿಯ ಸ್ಮಾರ್ಟ್ ಎಲ್‌ಇಡಿ ಟಿವಿಗಳು ಮತ್ತು ಎಲ್‌ಇಡಿ ಟಿವಿಗಳು ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿಯ ಟಾರ್ಚ್-ಬೇರರ್‌ಗಳಲ್ಲಿ ಒಂದಾಗಿರುವ ಕಾರ್ಬನ್ ಸ್ಮಾರ್ಟ್‌ಟಿವಿ ವಲಯದಲ್ಲೂ ದಾಖಲೆ ಬರೆಯುವ ಸೂಚನೆ ನೀಡಿದೆ.
ಇನ್ನು ಕಾರ್ಬನ್ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಟಿವಿಗಳನ್ನು ವಿವಿಧ ಗಾತ್ರದ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಅದರಲ್ಲೂ ಸ್ಮಾರ್ಟ್ LED ಟಿವಿ ಶ್ರೇಣಿಯು KJW39SKHD, KJW32SKHD (Bezel-ಲೆಸ್ ಡಿಸೈನ್) ಮತ್ತು KJWY32SKHD, ಎಂಬ ಮೂರು ಮಾದರಿಗಳನ್ನು ಒಳಗೊಂಡಿದೆ. ಜೊತೆಗೆ ಎಲ್ಇಡಿ ಟಿವಿ ಶ್ರೇಣಿಯು ಗ್ರಾಹಕರ ಮನರಂಜನಾ ಅನುಭವವನ್ನು ವರ್ಧಿಸಲು KJW24NSHD ಮತ್ತು KJW32NSHD ಮಾದರಿಗಳನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 7,990 ರೂ. ಗಳಿಂದ ಪ್ರಾರಂಭವಾಗುತ್ತವೆ ಎಂದು ಬಹಿರಂಗಪಡಿಸಿದೆ.
ಇದರ ಜೊತೆಗೆ ಸ್ಮಾರ್ಟ್ LED ಟಿವಿ ಶ್ರೇಣಿಯು ಹೊಸ ಆಡಿಯೋ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಮನೆಯಲ್ಲಿ ಥಿಯೇಟರ್ ಅನುಭವ ನೀಡುವುದಕ್ಕಾಗಿ ಈ ಸ್ಮಾರ್ಟ್ ಟಿವಿಗಳಲ್ಲಿ ವಿಶಾಲವಾದ ವೀಕ್ಷಣಾ ಕೋನ, ಸುಂದರವಾದ HD ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಟಿವಿಯೊಂದಿಗೆ ಸ್ಥಾಪಿಸಲಾದ ಮೂವಿ ಬಾಕ್ಸ್‌ನೊಂದಿಗೆ ಬರಲಿದೆ. ಇದರ ಮೂಲಕ ಬಳಕೆದಾರರು ಅನಿಯಮಿತ ಮನರಂಜನೆಗಾಗಿ ಸಾಕಷ್ಟು ಚಲನಚಿತ್ರಗಳನ್ನು ಆನಂದಿಸಬಹುದು. ತಡೆರಹಿತ ಸಂಪರ್ಕವನ್ನು ನೀಡುವುದರಿಂದ, ಸ್ಮಾರ್ಟ್ ಟಿವಿಯನ್ನು ಬಹು ಸಾಧನಗಳೊಂದಿಗೆ ತ್ವರಿತವಾಗಿ ಸಂಪರ್ಕಿಸಬಹುದು.
KJW24NSHD ಮತ್ತು KJW32NSHD LED TV ಶ್ರೇಣಿಯ HD-ಸಿದ್ಧ ಪ್ರದರ್ಶನವು ದೃಶ್ಯಗಳನ್ನು ಜೀವಂತವಾಗಿಸುತ್ತದೆ. ಇದರಲ್ಲಿರುವ ವಿಶಿಷ್ಟ ಮತ್ತು ಗಮನಾರ್ಹ ವಿನ್ಯಾಸವು ಗಮನಾರ್ಹ ಪ್ರಭಾವವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ಕಾರ್ಬನ್ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕ ಹಾಗೂ ಭಾರತದ ಮಧ್ಯಮವರ್ಗದವರನ್ನು ಗುರಿಯಾಗಿರಿಸಿಕೊಂಡಿದೆ. ಈ ಎಲ್ಲಾ ಸ್ಮಾರ್ಟ್ ಟಿವಿಗಳು ಪವರ್‌ಫುಲ್ ಸೌಂಡ್ ಸಿಸ್ಟಂನೊಂದಿಗೆ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿರಲಿವೆ ಎನ್ನಲಾಗಿದೆ. ಈ ಸ್ಮಾರ್ಟ್‌ಟಿವಿಗಳು 7,990ರೂ.ಗಳಿಂದ ಪ್ರಾರಂಭವಾಗುತ್ತವೆ ಎನ್ನಲಾಗಿದೆ.
Galaxy M52 5G: ಸ್ಯಾಮ್ಸಂಗ್ ವೆಬ್ಸೈಟ್ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಕೈಗೆಟಕುವ ದರದಲ್ಲಿ ಗ್ಯಾಲಕ್ಸಿ M52 5G
Vodafone Idea: ವೊಡಾಫೋನ್-ಐಡಿಯಾ ಸಿಮ್ ಖರೀದಿಗೆ ಮುಗಿಬಿದ್ದ ಜನರು: ಇದಕ್ಕೆ ಕಾರಣ ಆ ಒಂದು ಆಫರ್
(Karbonn Smart TVs and LED TVs manufacture in India at affordable rates)